ಆಟೋ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

Subsidy for Auto purchase ನಿವೇಶನಗಳ ಖರೀದಿಗೆ, ಎಲೆಕ್ಟ್ರಿಕಲ್ ಆಟೋ ಖರೀದಿ ಸೇರಿದಂತೆ ಇನ್ನಿತರ ಉಪಕರಣ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

Subsidy for Auto purchase ಆಟೋ ಖರೀದಿಗೆ ಸಬ್ಸಿಡಿ

ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ (ಎಂ.ಜಿ.ಎನ್.ವಿ.ವೈ) ಅನುಮೋದಿತ ಕ್ರಿಯಾ ಯೋಜನೆ ಹಾಗೂ ಕಲಬುರಗಿ ಮಹಾನಗರ ಪಾಲಿಕೆಯ 2022-23ನೇ ಸಾಲಿನ ಎಸ್ಎಫ್.ಸಿ (ಮುಕ್ತ) ಹಾಗೂ ಪರಿಷ್ಕೃತ ಕ್ರಿಯಾಯಾ ಯೋಜನೆಗಳ ಯೋಜನೆಯಡಿ 2023-24ನೇ ಸಾಲಿಗಾಗಿ ನಿಗದಪಡಿಸಿದ ಕೆಳಕಂಡ ವಿವಿಧ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಕಲ್ಯಾಣ ಕಾರ್ಯಕ್ರಮದಡಿ ಪ್ರಯೋಜನ ಪಡೆಯಲು ಕಲಬುರಗಿ ನಗರದ ಅರ್ಹ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆಎಂದು ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪೌರ ಕಾರ್ಮಿಕರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳು (ಶೇ. 20) ಎಸ್.ಸಿ.ಸಿಎ.ಪಿ ಮತ್ತು ಎಸ್.ಟಿಪಿ (ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ) 2019-20ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಪೌರ ಕಾರ್ಮಿಕರು ಖಾಯಂ, ಹೊರಗುತ್ತಿಗೆ, ಲೋಡರ್ಸ್, ಡ್ರೈವರ್ಸ್, ಸಫಾಯಿ ಕರ್ಮಚಾರಿ, ಸ್ಕ್ಯಾವೆಂಜರ್ ಗಳಿಗೆ ನಿವೇಶನ ಖರೀದಿಗೆ ಸಹಾಯಧನ ನೀಡಲಾಗುತ್ತದೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳು (ಶೇ. 40) ಎಸ್.ಸಿ.ಎಸ್.ಪಿ ಮತ್ತು ಎಸ್.ಟಿಪಿ) ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ ( 2019-20ನೇ ಸಾಲಿನಿಂದ 2022-23ನೇ ಸಾಲಿನವರೆಗೆ ಪಕ್ಕಾ ಮನೆ ನಿರ್ಮಾಣಕ್ಕಾಗಿ ಸಹಾಯಧನ, ಮನೆಯ ಮೇಲ್ಛಾವಣಿಯ ದುರಸ್ಥಿ ಸಾಮಗ್ರಿಗಳು ಅಥವಾ ಅವಶ್ಯಕ ಸಾಮಗ್ರಿಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು. ಪರಿಶಿಷ್ಟ ಪಂಗಡಕ್ಕೆ ಸೇರಿದ ಎಂ.ಬಿ.ಬಿ.ಎಸ್, ಬಿಇ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಖರೀದಿಗಾಗಿ ಸಹಾಯಧನ ನೀಡಲಾಗುವುದು. ಯುಪಿಎಸ್.ಸಿ ಹಾಗೂ ಕೆಪಿಎಸ್.ಸಿ ತರಬೇತಿ, ಪರಿಶಿಷ್ಟ ಪಂಗಡದ ಜನರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಎಲೆಕ್ಟ್ರಿಕಲ್ ಅಟೋ ಖರೀದಿಗಾಗಿ ಸಹಾಯಧನ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಸಣ್ಣ ಉದ್ದಿಮೆಗಾಗಿ ಸಹಾಯಧನ ನೀಡಲಾಗುವುದು.

ಪರಿಶಿಷ್ಟ ಜಾತಿಯ ಜನರಿಗೆ ವೈಯಕ್ತಿಕ ಕಲ್ಯಾಣ ಕಾರ್ಯಕ್ರಮಗಳು (ಶೇ. 40) ಎಸ್.ಸಿಎಸ್.ಪಿ) ಎಸ್.ಎಫ್.ಸಿ ಮಕ್ತ ನಿಧಿ ಹಾಗೂ ಎಸ್.ಎಫ್.ಸಿ ಪರಿಷ್ಕೃತ ಕ್ರಿ. ಯೋಜನೆ)ಯಡಿ 2020 21ನೇ ಸಾಲಿನ ಪರಿಷ್ಕೃತ ಹಾಗೂ 2021-22 ಪರಿಷ್ಕೃತ ಎಸ್.ಎಫ್.ಸಿ ಕ್ರಿಯಾ ಯೋಜನೆ ಯಿಡಿ ಎಂ.ಬಿ.ಬಿ.ಎಸ್. ಬಿಇ ಎಲೆಕ್ಟ್ರಾನಿಕ್ ಮತ್ತು ಸಂವಹನ ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಡೆಸ್ಕ್ ಟಾಪ್ ಕಂಪ್ಯೂಟರ್ ಲ್ಯಾಪ್ ಟಾಪ್ ಖರೀದಿಗೆ ಸಹಾಯಧನ ನೀಡಲಾಗುವುದು.

ಇದನ್ನೂ ಓದಿ : ನಿರುದ್ಯೋಗಿಗಳಿಗೆ 3 ಸಾವಿರ ರೂಪಾಯಿಯವರೆಗೆ ನಿರುದ್ಯೋಗ ಭತ್ಯೆ ನೀಡಲು ಅರ್ಜಿ ಆಹ್ವಾನ

2019-20ನೇ  ಹಾಗೂ 2022-23ನೇ ಸಾಲಿನ ಎಸ್.ಎಫ್.ಸಿ ಮುಕ್ತ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಎಂ.ಬಿ.ಬಿ.ಎಸ್, ಬಿಇ ವ್ಯಾಸಂಗಕ್ಕಾಗಿ ಮಾತ್ರ ಸರ್ಕಾರಿ ಅಥವಾ ಅನುದಾನಿತ ಕಾಲೇಜುಗಳಲ್ಲಿ ಸರ್ಕಾರಿ ಕೋಟಾದಲ್ಲಿ ಸೀಟು ಪಡೆದಿರುವ ವಿದ್ಯಾರ್ಥಿಗಳಿಗೆ ಶೇ. 50 ರಷ್ಟು ಪ್ರವೇಶ ಶುಲ್ಕಕ್ಕಾಗಿ ಸಹಾಯಧನ ನೀಡಲಾಗುವುದು.

2019-20ನೇ 2020-21ನೇ ಹಾಗೂ 2022-23ನೇ ಸಾಲಿನ ಎಸ್.ಎಫ್.ಸಿ ನಿಧಿಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ವೈಯಕ್ತಿಕ ಅಭ್ಯಾಸ ಪ್ರಾರಂಭಿಸಿರುವ ವೈದ್ಯರಿಗೆ ಸಲಕರಣೆ ಖರೀದಿಗಾಗಿ ಸಹಾಯಧನ ನೀಡಲಾಗುವುದು.2020-21ನೇ ಸಾಲಿನಎಸ್.ಎಫ್.ಸಿ ಮುಕ್ತನಿಧಿಯಡಿ ಪೌರ ಕಾರ್ಮಿಕರು ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಸಹಾಯಧನ ನೀಡಲಾಗುವುದು. 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿಯಡಿ ಅಂಗವಿಕಲರಿಗೆ ಪೊಲೀಯೋ ರೋಗಕ್ಕೆ ಒಳಪಟ್ಟವರಿಗೆ ಕೃತಕ ಪಾದ ಇತರೆ ಖೇದಿತ ಅವಯವಗಳಿಗೆ ಜೋಡಣೆಗೆ ತಗಲುವ ವಾಸ್ತವಿಕ ಮೊತ್ತದ ಸಹಾಯಧಧನ ಒದಗಿಸಲಾಗುವುದು.

ಅರ್ಹ ಫಲಾನುಭವಿಗಳು ಮೇಲ್ಕಂಡ ಯೋಜನೆಗಳಡಿ ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಶೇ. 24.10 ಹಾಗೂ ಶೇ. 5 ಶಾಖೆಯಿಂದ ಕಚೇರಿ ವೇಳೆಯಲ್ಲಿ ಜೂನ್ 5 ರಿಂದ ಜುಲೈ 4 ರವರೆಗೆ ಅರ್ಜಿ ಪಡೆಯಬಹುದು. ಭರ್ತಿ ಮಾಡಿ ಅರ್ಜಿಯನ್ನು ಜುಲೈ 4 ರೊಳಗೆ ಅರ್ಜಿ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಮಹಾನಗರ ಪಾಲಿಕೆಯಶೇ. 21.10 ರ ಶಾಖೆಗೆ ಸಂಪರ್ಕಿಸಬಹುದು.

Leave a Comment