ನೀರಾವರಿ ಮಾಡಲಿಚ್ಚಿಸುವ ಹಾಗೂ ನೀರಾವರಿ ಮಾಡುತ್ತಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ರೈತರಿಗೆ ಸಹಾಯಧನದಲ್ಲಿ ಹನಿ ಹಾಗೂ ತುಂತುರು ನೀರಾವರಿ ಘಟಕಕ್ಕೆ ಸಹಾಯಧನ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
2021-22ನೇ ಸಾಲಿನ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ಹಾಗೂ ತುಂತುರು ನೀರಾವರಿ ಘಟಕವನ್ನು ಶೇ. 90 ರ ರಿಯಾಯ್ತಿಯಲ್ಲಿ 2 ಹೆಕ್ಟೇರ್ ವರೆಗೆ ಮತ್ತು 2 ರಿಂದ 5 ಹೆಕ್ಟೇರ್ ವರೆಗೆ ಶೇ. 45 ರಷ್ಟು ಸಹಾಯಧನದ ಸವಲತ್ತು ಪಡೆಯಲು ಅವಕಾಶವಿದ್ದು, ಎಲ್ಲಾ ವರ್ಗದ (ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ರೈತರಿಂದ ಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಅರ್ಹ ರೈತರು ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಅರ್ಜಿಯೊಂದಿಗೆ ಪಹಣಿ, 20 ರೂಪಾಯಿ ಛಾಪಾಕಾಗದ, ಕೊಳವೆ ಬಾವಿ ದೃಢೀಕರಣ, ನೀರಿನ ಲಭ್ಯತೆ ದೃಢೀಕರಣ, ಬೆಳೆ ದೃಢಿಕರಣ ಪತ್ರ, ಇತರ ದಾಖಲೆಗಳನ್ನು ಸಲ್ಲಿಸಲು ಕೋರಲಾಗಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಕೆ-ಕಿಸಾನ್ ತಂತ್ರಾಂಶದಲ್ಲಿ ನಮೂದಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಕೆ-ಕಿಸಾನ್ (KKisan) ನಲ್ಲಿ Online ನೋಂದಣಿ ಮಾಡಿಸಲು ಇಲ್ಲಿ ಕ್ಲಿಕ್ ಮಾಡಿ
ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ರೈತರು ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ. ಕೃಷಿ ಸಿಂಚಾಯಿ ಯೋಜನೆಯಡಿ ದೊರೆಯುವ ಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರ ಹಾಗೂ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ತೋಟಗಾರಿಕೆ ಮಾಡುತ್ತಿರುವ ಸಣ್ಣ ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಲು ಈ ಯೋಜನೆಯನ್ನು ಆರಂಭಿಸಿದೆ. ನೀರಾವರಿ ಮಾಡಲು ಆಸಕ್ತಿಯಿರುತ್ತದೆ ಆದರೆ ಆರ್ಥಿಕ ಸಮಸ್ಯೆಯಿರುವ ರೈತರಿಗೆ ಸಹಾಯ ಮಾಡಲಾಗಲು ಈ ಯೋಜನೆ ಆರಂಭಿಸಲಾಗಿದೆ. ಹೆಚ್ಚಿನ ರೈತರು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಸೌಲಭ್ಯ ಪಡೆದುಕೊಳ್ಳಬೇಕೆಂದು ಕೋರಲಾಗಿದೆ.
ಕೃಷಿ ಸಿಂಚಾಯಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ ಹೇಗೆ ನಡೆಯುತ್ತದೆ?
ಅರ್ಹ ರೈತರು ತೋಟಗಾರಿಕಾ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಸಹಾಯಧನ ಕೋರಿ ಅರ್ಜಿ ಸಲ್ಲಿಸುತ್ತಾರೆ. ಹಿರಿತನ ಆಧಾರದ ಮೇಲೆ ಅನುದಾನದ ಲಭ್ಯತೆಗೆ ಹೊಂದಿಸಿಕೊಂಡು ಕೃಷಿ ಇಲಾಖೆಯು ರೈತರಿಗೆ ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನು ನೀಡುತ್ತದೆ.
ಹನಿ ನೀರಾವರಿಯ ಪ್ರಯೋಜನಗಳು
ಹನಿ ನೀರಾವರಿಯಿಂದ ನೀರಿನ ಸದ್ಭಳಕೆಯಾಗುತ್ತದೆ. ಬೆಳೆಯ ಉತ್ಪಾದನೆಯೂ ಹೆಚ್ಚಾಗುತ್ತದೆ. ಬೆಳೆಗೆ ಎಷ್ಟು ನೀರು ಬೇಕೋ ಅಷ್ಟನ್ನು ಮಾತ್ರ ನೀಡಬಹುದು. ಶೇ. 50 ರಿಂದ 80 ರಷ್ಟು ನೀರಿನ ಉಳಿತಾಯ ಸಾಧ್ಯವಿದೆ. ಸಾಂಪ್ರದಾಯಿಕ ಪದ್ಧತಿ ಅಂದರೆ ಕಾಲುವೆಗಳ ಮೂಲಕ ನೀರು ಹಾಯಿಸುವುದರಿಂದ ಶೇ. 30 ರಿಂದ 40 ರಷ್ಟು ನೀರು ಪೋಲಾಗುತ್ತದೆ. ಜೊತೆಗೆ ಜಮೀನಿನ ಗುಣಮಟ್ಟವೂ ಕಡಿಮೆಯಾಗುತ್ತದೆ.
Prashanth s/o channegowda
Mallanayakanahalli
Yediyur (h)
Kunigal (T)
Tumakur (D)