ಸರ್ಕಾರದ ಯೋಜನೆಗಳು, ಆನ್ಲೈನ್ ಸೇವೆಗಳ ಮಾಹಿತಿಗೆ ಸಂಪರ್ಕಿಸಿ ರೈತಮಿತ್ರ

Written by By: janajagran

Updated on:

ರೈತರಿಗೆ ಕುಳಿತಲ್ಲಿಯೇ ಸರ್ಕಾರದ ಯೋಜನೆಗಳು, ಆನ್ಲೈನ್ ಸೇವೆಗಳ ಮಾಹಿತಿ ನೀಡುವುದಕ್ಕಾಗಿ ಸರ್ಕಾರವು ರೈತಮಿತ್ರ ವೆಬ್ ಪೇಜ್ ಆರಂಭಿಸಿದೆ.ಈ ವೆಬ್ಸೈಟ್ ನಲ್ಲಿ ಕೃಷಿ ಇಲಾಖೆಯ ಮಾರ್ಗಸೂಚಿ, ಮುಖ್ಯಮಂತ್ರಿ ರೈತ ವಿದ್ಯಾನಿಧಿ, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಸಾವಯವ ಕೃಷಿ ಸಿರಿಧಾನ್ಯ, ರಾಷ್ಟ್ರೀಯ ವಿಕಾಸ ಯೋನಜೆ, ಪಿಎಂ ಕಿಸಾನ್ ಯೋಜನೆ (ಕೇಂದ್ರ ಸರ್ಕಾರ) ಕೆ ಕಿಸಾನ್, ಸೂಕ್ಷ್ಮ ನೀರಾವರಿ, ಕೃಷಿ ಯಾಂತ್ರೀಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ, ರಾಷ್ಟ್ರೀಯ ಆಙಾರ ಭದ್ರತಾ ಅಭಿಯಾನ, ಆತ್ಮ, ತರಬೇತಿಗಳು, ಸೇರಿದಂತೆ ಹಲವಾರು ಮಾಹಿತಿಗಳಿವೆ.

ರೈತಮಿತ್ರದಲ್ಲಿ ಸರ್ಕಾರದ ಯೋಜನೆಗಳು ಮತ್ತು ಆನ್ಲೈನ್ ಸೇವೆಗಳು ನೋಡಲು ಈ https://raitamitra.karnataka.gov.in/  ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯ ಸರ್ಕಾರದ ರೈತಮಿತ್ರ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರಿಗೆ ಆರಂಭಿಸಲಾದ ಸಹಾಯವಾಣಿ ಸ್ಕ್ರಾಲ್ ಆಗುತ್ತಿರುತ್ತದೆ. ಆ ಸಂಖ್ಯೆಗೆ ಕರೆ ಮಾಡಿ ಕೃಷಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದು.  1800 425 3553 ಗೆ ಕರೆ ಮಾಡಿ ಕೃಷಿ ಸಂಬಂಧಿಸಿದ ಮಾಹಿತಿ ಪಡೆಯಬಹುದು.

ಸರ್ಕಾರದ ಯೋಜನೆಗಳು ನೋಡಬೇಕಾದರೆ ಸೇವೆಗಳು ಮತ್ತು ಯೋಜನೆಗಳು ಬಾಕ್ಸ್ ಕೆಳಗಡೆ ಸರ್ಕಾರದ ಯೋಜನೆಗಳ ಮಾಹಿತಿ ಇರುತ್ತದೆ. ಉದಾಹರಣೆ ರೈತವಿದ್ಯಾನಿಧಿ ಕುರಿತು ಮಾಹಿತಿ ಪಡೆಯಲು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಕಾರ್ಯಕ್ರಮದ ಮೇಲೆ ಕ್ಲಿಕ್ ಮಾಡಬೇಕು. ರಾಷ್ಟ್ರೀಯ ಕೃಷಿ ವಿಕಾಸ ಯೋಜನಾ ಬಗ್ಗೆ ತಿಳಿಯಬೇಕಾದರೆ ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಸಂಪೂರ್ಣ ಮಾಹಿತಿ ಪಡೆಯಲು ಡೌನ್ಲೋಡ್ ಕೆಳಗಡೆ ವೀಕ್ಷಣೆ ಮೇಲೆ ಕ್ಲಿಕ್ ಮಾಡಿದರೆ ಸಾಕು ಸಂಪೂರ್ಣ ಮಾಹಿತಿ ಓಪನ್ ಆಗುತ್ತದೆ. ಬೆಳೆ ಸಾಲಕ್ಕೆ ಸರ್ಕಾರ ವಿಧಿಸುವ ಬಡ್ಡಿ ಹಾಗೂ ಸಾಲ ನೀಡಲು ಸರ್ಕಾರ ನಿಗದಿಪಡಿಸಿ ಷರತ್ತುಗಳ ಬಗ್ಗೆ ತಿಳಿಯಲು ಬೆಳೆ ಸಾಲಕ್ಕೆ ಶೇ. 1 ರ ಬಡ್ಡಿ ರಿಯಾಯಿತಿ ಮೇಲೆ ಕ್ಲಿಕ್ ಮಾಡಬೇಕು.

ಫಸಲ್ ಬಿಮಾ ಯೋಜನೆಯ ಕುರಿತು ತಿಳಿಯಲು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ಇರುತ್ತದೆ.

ಅದೇ ರೀತಿ ಆನ್ಲೇ ಸೇವೆಗಳ ಕುರಿತು ಮಾಹಿತಿ ಪಡೆಯಲು ಆನ್ಲೈನ್ ಸೇವೆಗಳು ಕೆಳಗಡೆಯಿರುವ ಪಿಎಂ ಕಿಸಾನ್, ರೈತರ ನೋಂದಣಿ, ರಸಗೊಬ್ಬರ ಬೀಜ ಕೀಟನಾಶಕ ಪರವಾನಗಿ ತಂತ್ರಾಂಶ, ಕೆ. ಕಿಸಾನ್, ಹೀಗೆ ಅಲ್ಲಿ ಇರುವ ಆನ್ಲೈನ್ ಸೇವೆಗಳ ಮೇಲೆ ಕ್ಲಿಕ್ ಮಾಡಿ ಸಂಪೂರ್ಣ ಮಾಹಿತಿ ಪಡೆಯಬಹುದು.

Leave a Comment