ಎಸ್ಎಸ್ಎಲ್ಸಿ ಪರೀಕ್ಷೆ ಕೀ ಉತ್ತರ ಪ್ರಕಟ: ಇಲ್ಲೇ ಚೆಕ್ ಮಾಡಿ

Written by Ramlinganna

Updated on:

ಎಸ್ಎಸ್ಎಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗಿಲ್ಲಿದೆ ಸಂತಸದ ಸುದ್ದಿ. ತಾವು ಬರೆದ ಪ್ರಶ್ನೆಗಳು ಸರಿಯಾಗಿದೆಯೋ ತಪ್ಪಾಗಿದೆಯೋ? ತಮಗೆಷ್ಟು ಅಂಕ ಬರಬಹುದು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ಈಗ ತಂತ್ರಜ್ಞಾನ ಎಷ್ಟು ಬೆಳೆದಿದೆಯೆಂದರೆ ಕ್ಷಣಮಾತ್ರದಲ್ಲಿ ಎಲ್ಲ ಮಾಹಿತಿಗಳು ಮೊಬೈಲ್ ನಲ್ಲೇ ಪಡೆಯಬಹುದು. ಮೊದಲು ಪರೀಕ್ಷೆ ಬರೆದ ಅಭ್ಯರ್ಥಿಗಳು ತಮಗೆ ಎಷ್ಟು ಅಂಕ ಬಂದಿದೆ ಎಂಬುದು ಪರೀಕ್ಷೆ ಫಲಿತಾಂಶ ಪ್ರಕಟವಾದಾಗಲೇ ಗೊತ್ತಾಗುತ್ತಿತ್ತು.  ಆದರೆ ಈಗ ಫಲಿತಾಂಶ ಪ್ರಕಟವಾಗುವ ಮೊದಲೇ ತಮಗೆಷ್ಟು ಅಂಕ ಬರಬಹುದೆಂಬುದನ್ನು ಚೆಕ್ ಮಾಡಬಹುದು.  ಇದರೊಂದಿಗೆ ಆಕ್ಷೇಪಣೆಗಳಿದ್ದಲ್ಲಿ ಆನ್ಲೈನ್ ಮೂಲಕ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಚ್ 31 ರಿಂದ ಏಪ್ರೀಲ್ 15 ರವರೆಗೆ ನಡೆದಿದ್ದ ಎಸ್ಎಸ್ಎಲ್ಸಿ ಪರೀಕ್ಷೆ ಕೀ ಉತ್ತರಗಳನ್ನು ಶಿಕ್ಷಣ ಇಲಾಖೆಯ ಅಧಿಕೃತ ವೆಬ್ಸೈಟ್ ನಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದೆ.ವಿದ್ಯಾರ್ಥಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೀ ಉತ್ತರಗಳನ್ನು ಪರೀಕ್ಷಿಸಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ಕೀ ಉತ್ತರಗಳನ್ನು ಚೆಕ್ ಮಾಡುವುದು ಹೇಗೆ? (How to check SSLC Exam Key Answer)

ಎಸ್ಎಸ್ಎಲ್ಸಿಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಕೀ ಉತ್ತರಗಳನ್ನು ಚೆಕ್ ಮಾಡಲು ಈ

https://kseeb.karnataka.gov.in/objectionentry/SSLC_KeyAnswers

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಕರ್ನಾಟಕ ಸ್ಕೂಲ್ ಎಕ್ಸಾಮಿನೇಶನ್ ಆ್ಯಂಡ್ ಅಸೆಸಮೆಂಟ್ ಬೋರ್ಟ್ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ  ಯಾವ ಯಾವ ವಿಷಯಗಳ ಕೀ ಉತ್ತರ ಬಿಡುಗಡೆಯಾಗಿದೆ ಎಂಬ ವಿಷಯಗಳು ಕಾಣಿಸುತ್ತದೆ. ಅದ ಮುಂಗುಗಡೆ  ಕಾಣಿಸುವ ಡೌನ್ಲೋಡ್ ಕೀ ಅನ್ಸರ್ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ವಿಷಯದ ಕೀ ಉತ್ತರಗಳು ಡೌನ್ಲೋಡ್ ಆಗುತ್ತದೆ. ನಂತರ ನೀವು ಬರೆದ ಪ್ರಶ್ನೆಗಳಿಗೆ ಉತ್ತರಗಳು ಸರಿಯಾಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು. ಇದರೊಂದಿಗೆ ನಿಮಗೆ ಆ ವಿಷಯದಲ್ಲಿ ಎಷ್ಟು ಅಂಕಗಳು ಬರಬಹುದು ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಇದೇ ರೀತಿ ನೀವು ಉಳಿತ ವಿಷಯಗಳ ಮಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೀ ಉತ್ತರಗಳು ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಆಗುತ್ತದೆ. ಹೀಗೆ ನಿಮ್ಮ ಆರು ವಿಷಯಗಳಲ್ಲಿ ಎಷ್ಟು ಅಂಕಗಳು ಬಂದಿವೆ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಆಕ್ಷೇಪಣೆ ಸಲ್ಲಿಸುವುದು ಹೇಗೆ?

ನೀವು ಬರೆದ ಪ್ರಶ್ನೆಗಳಿಗೆ ನಿಮಗೇನಾದರೂ ಆಕ್ಷೇಪಣೆಗಳಿದ್ದರೆ ಆನ್ಲೈನ್ ನಲ್ಲೇ ಆಕ್ಷೇಪಣೆ  ಸಲ್ಲಿಸಬಹುದು. ವಿದ್ಯಾರ್ಥಿಯು ಮಂಡಳಿಯ ಅಂತರ್ಜಾಲ ಈ

https://kseeb.karnataka.gov.in/objectionentry/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Online Objection Entry  ಪೇಜ್ ತೆರದೆುಕೊಳ್ಳುತ್ತದೆ. ಅಲ್ಲಿ ಎಂಟರ್ ಯುವರ್ ರೆಜಿಸ್ಟರ್ ನಂಬರ್ ಬಾಕ್ಸ್ ನಲ್ಲಿ ನಿಮ್ಮ ರೆಜಿಸ್ಟರ್ ನಂಬರ್ ಹಾಕಬೇಕು. ನಂತರ ವೀವ್ ಮೇಲೆ ಕ್ಲಿಕ್ ಮಾಡಬೇಕು. ಏಪ್ರೀಲ್ 16 ರಿಂದ ಏಪ್ರೀಲ್ 18 ರವರೆಗೆ ಸಾಯಂಕಾಲ 5.30 ರ ವರೆಗೆ ಸಲ್ಲಿಕೆಗೆ ಕಾಲಾವಕಾಶವಿದೆ.

ಕಳೆದ ವರ್ಷದಂತೆ ಈ ವರ್ಷವೂ ಸಹ ಶೇ. 10 ರಷ್ಟು ಕೃಪಾಂಕ ನೀಡಲು ಕೆಎಸ್ಇಎಬಿ ನಿರ್ಧರಿಸಿದೆ. ಎಸ್ಎಸ್ಎಲ್ಸಿ ಪರೀಕ್ಷಾ ಫಲಿತಾಂಶ ಪ್ರಮಾಣ ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಂಡಿದೆ. ಉತ್ತೀರ್ಣಕ್ಕೂ ಕಡಿಮೆ ಅಥವಾ ಒಟ್ಟಾರೆ ಕನಿಷ್ಠ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ. 10 ರಷ್ಟು ಕೃಪಾಂಕ ನೀಡುವ ಮೂಲಕ ಉತ್ತೀರ್ಣದ ಸಮೀಪಕ್ಕೆ ಬಂದು ಅನುತ್ತೀರ್ಣಗೊಳ್ಳುವ ವಿದ್ಯಾರ್ಥಿಗಳಿಗೆ ಉತ್ತೀರ್ಣರಾಗಲು ಅವಕಾಶ ಕಲ್ಪಿಸಲಾಗಿದೆ.

Leave a comment