ಎಲ್ಲಾ ತುರ್ತು ಸೇವೆಗಳಿಗೆ 112 ಕ್ಕೆ ಕರೆ ಮಾಡಿ

Written by By: janajagran

Updated on:

ಪೊಲೀಸ್, ಆರೋಗ್ಯ, ಅಗ್ನಿಶಾಮಕ, ಸೇರಿದಂತೆ ಇನ್ನಿತರ ತುರ್ತು ಸೇವೆಗಳಿಗೆ ದೇಶಕ್ಕೆ ಒಂದೇ ನಂಬರ್ (Emergency helpline number 112) ಜಾರಿಗೆ ಬಂದಿದೆ.

ಹೌದು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಲು ಒಂದೇ ಭಾರತ ಒಂದೇ ತುರ್ತು ಕರೆ ಪರಿಕಲ್ಪನೆಯಡಿಯಲ್ಲಿ ದೇಶಾದ್ಯಂತ ಒಂದೇ 112 ಸಹಾಯವಾಣಿ ಸಂಖ್ಯೆ ಆರಂಭಿಸಲಾಗಿದೆ.

ಹಿಂದೆ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್ ಗೆ ಪ್ರತ್ಯೇಕ ತುರ್ತು ಸೇವಾ ನಂಬರ್ ಗಳಿದ್ದವು. ಅದೀಗ ಒಂದೇ ನಂಬರ್ ನಡಿ ಬಂದಿದ್ದರಿಂದ ಸಾರ್ವಜನಿಕರಿಗೆ ಯಾವುದಕ್ಕೆ ಕರೆ ಮಾಡಬೇಕೆಂಬ ಗೊಂದಲ ಬಗೆಹರಿದಂತಾಗಿದೆ.

ತುರ್ತು ಸಂದರ್ಭದಲ್ಲಿ ಪೊಲೀಸ್, ಆಂಬ್ಯಲೆನ್ಸ್, ಅಗ್ನಿಶಾಮಕದಳ ಸೇರಿದಂತೆ ಯಾರಿಗೆ ಫೋನ್ ಮಾಡಬೇಕು ಎಂಬ ಗೊಂದಲವಾಗುವುದು ಬೇಡ ಇನ್ನೂ ಮುಂದೆ ಯಾವುದೇ ತುರ್ತು ಸಂದರ್ಭವಾದರೂ ಸರಿ 112 ಸಹಾಯವಾಣಿಗೆ ಕರೆ ಮಾಡಿ ಸಾಕು. ಎಲ್ಲಾ ರೀತಿಯ ನೆರವುಗಳು ತಕ್ಷಣವೇ ನಿಮ್ಮನ್ನು ತಲುಪುತ್ತವೆ.

ಹಿಂದೆ ಪೊಲೀಸ್ ಇಲಾಖೆ ಸಹಾಯವಾಣಿಗೆ 100, ಅಗ್ನಿ ಶಾಮಕ ದಳಕ್ಕೆ 101, ಆಂಬ್ಯಲೆನ್ಸ್‍ಗೆ 102, ಆರೋಗ್ಯ ಕವಚ ಆಂಬ್ಯುಲೆನ್ಸ್‍ಗೆ 108 ಸೇರಿದಂತೆ ಬೇರೆ ಬೇರೆ ಸಂಖ್ಯೆಗಳಿಗೆ ಕರೆ ಮಾಡಬೇಕಿತ್ತು. ಬೆಂಕಿ ಅವಘಡ ಉಂಟಾದಾಗ, ಅಥವಾ ಅಪಘಾತಗಳಾದಾಗ  ಗಡಿಬಿಡಿಯಾಗಿ ಆತಂಕದಲ್ಲಿ ಕೈಕಾಲು ಆಡದೆ ನಿರ್ದಿಷ್ಟವಾದ ನಂಬರ್‍ಗಳು ನೆನಪಾಗದೆ ಸಂತ್ರಸ್ಥರು ಪರದಾಡುತ್ತಿದ್ದರು. ಈ ಸಮಸ್ಯೆಯನ್ನು ಬಗೆಹರಿಸುವುದಕ್ಕಾಗಿ ಈಗ ಒಂದೇ ಸಹಾಯವಾಣಿ ನಂಬರ್ ತರಲಾಗಿದೆ.

ಇದಕ್ಕಾಗಿ ಬೆಂಗಳೂರಿನಲ್ಲಿ ಕಮಾಂಡಿಗ್ ಸೆಂಟರ್ ಸ್ಥಾಪಿಸಲಾಗಿದೆ. ಈ ಸೆಂಟರ್ ಎಲ್ಲಾ ಜಿಲ್ಲೆಗಳ ಮೂಲೆ ಮೂಲೆಗಳಿಂದ ಬರುವ ಕರೆಗಳ ಮೇಲೆ ನಿಗಾ ವಹಿಸಲಿದೆ. ಕರೆಗಳಿಗೆ ಸ್ಥಳೀಯವಾಗಿ ಜಿಲ್ಲಾ ಮಟ್ಟದಲ್ಲೇ ನೆರವಿನ ತಂಡಗಳು ಸ್ಪಂದಿಸಲಿವೆ.

Leave a comment