ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ಹೂವಿನ ಗಿಡ, ಅಲಂಕಾರಿಕ ಗಿಡ, ಹಲವು ಬಗೆಯ ಹಣ್ಣಿನ ಗಿಡಗಳು ಮತ್ತು ಔಷಧ ಸಸ್ಯಗಳು (Seed sapling available ) ಕಡಿಮೆ ದರದಲ್ಲಿ ಸಾರ್ವಜನಿಕರಿಗೆ ಲಭ್ಯವಿದೆ.

ಹೌದು ರಾಜ್ಯದ 29 ಜಿಲ್ಲೆಗಳಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ  ಮಾವು, ಸಪೋಟ, ಸೀಬೆ, ನೇರಳೆ, ನಿಂಬೆ, ತೆಂಗು, ಪಪ್ಪಾಯ, ಕಾಳುಮೆಣಸು, ಅಡಿಕೆ, ಗೋಡಂಬಿ, ನುಗ್ಗೆ, ಕರಿಬೇವು ಸೇರಿದಂತೆ ಇನ್ನಿತರ ತೋಟಗಾರಿಕೆ ಬೆಳೆಗಳ ಸಸಿಗಳು ಲಭ್ಯವಿದೆ.

ಮಾವು, ಸಪೋಟಾ, ಸೀಬೆ, ನೇರಳು, ನಿಂಬೆ, ತೆಂಗು, ನುಗ್ಗೆ, ಕರಿಬೇವು ಬಹುತೇಕ ಎಲ್ಲಾ ಜಿಲ್ಲೆಗಳ ತೋಟಗಾರಿಕೆ ಇಲಾಖೆಯಲ್ಲಿ ಅತ್ಯಂತ ಕಡಿಮೆ ದರದಲ್ಲಿ ಸಿಗಲಿದೆ. ಆಸಕ್ತ ರೈತರು ಹತ್ತಿರದ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಸಸಿಗಳನ್ನು ಪಡೆಯಬಹುದು.

ರಾಜ್ಯದ ಎಲ್ಲಾ ತೋಟಗಾರಿಕೆ ಇಲಾಖೆಯಲ್ಲಿ ಮಾವು 605715 ಸಸಿಗಳು, ಸಪೋಟ 86111 ಸಸಿಗಳು, ,ಸೀಬೆ 232524 ಸಸಿಗಳು, ನೇರಳೆ 48544 ಸಸಿಗಳು, ನಿಂಬೆ 419435 ಸಸಿಗಳು, ತೆಂಗು 836336 ಸಸಿಗಳು,  ಪಪ್ಪಾಯಾ 42100, ಕಾಳಮೆಣಸು 2390885 ಸಸಿಗಳು, ಅಡಿಕೆ 875314 ಸಸಿಗಳು,  ಗೋಡಂಬಿ 286118 ಸಸಿಗಳು, ನುಗ್ಗೆ 252121 ಸಸಿಗಳಉ, ಹಾಗೂ ಕರಿಬೇವು 329026 ಸಸಿಗಳು ಲಭ್ಯವಿದೆ.

ತೋಟಗಾರಿಕೆ ಇಲಾಖೆಯಲ್ಲಿ ಕಸಿ ಸಸಿಗಳು ಕಡಿಮೆ ದರದಲ್ಲಿ ಸಿಗುತ್ತವೆ. ಸೀತಾಫಲ, ಮಲ್ಲಿಗೆ, ಅಂಜೂರ, ಬೆಟ್ಟದ ನೆಲ್ಲಿ, ಹುಣಸೆ, ದ್ರಾಕ್ಷಿ, ಹಲಸು, ದಾಳಿಂಬೆ, ಶ್ರೀಗಂಧ, ಕೊಕ್ಕೊ, ಮಲ್ಲಿಗೆ., ದಾಸವಾಳ, ದರುಂತಾ, ಡ್ರೇಸಿನಾ, ಕ್ರೋಟಾನ್, ಅರೆಕ ಪಾಮ್, ಅಕೆಲಿಫಾ, ಕಿತ್ತಳೆ, ವೀಳ್ಯದೆಲೆ, ಗುಲಾಬಿ, ಡ್ರಾಗನ್ ಹಣ್ಣು,  ಹಾಗೂ ಅಲಂಕಾರಿಕಾ ಸಸಿಗಳು ಸಿಗುತ್ತವೆ.

ಆಸಕ್ತ ರೈತರು ಆಯಾ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಬಾಗಲಕೋಟೆ ಜಿಲ್ಲೆಯ ರೈತರು 9845896489, ಬಳ್ಳಾರಿ ಜಿಲ್ಲೆಯ ರೈತರು 8971902792, ಬೆಂಗಳೂರು ಗ್ರಾಮಾಂತರ ರೈತರು 9449045052, ಬೆಳಗಾವಿ ರೈತರು 9886909153, ಬೀದರಿ ಜಿಲ್ಲೆಯ ರೈತರು 9986637241, ಚಾಮರಾಜನಗರ ಜಿಲ್ಲೆಯ ರೈತರು 9980057535, ಚಿಕ್ಕಮಗಳೂರು ಜಿಲ್ಲೆಯ ರೈತರು 9449137743, ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು 9845821364, ಚಿತ್ರದುರ್ಗ ಜಿಲ್ಲೆಯ ರೈತರು 9880503448, ದಾವಣಗೆರೆ ಜಿಲ್ಲೆಯ ರೈತರು 7625078125, ಧಾರವಾಡ ಜಿಲ್ಲೆಯ ರೈತರು 9036617999, ಗದಗಜಿಲ್ಲೆಯ ರೈತರು 9886215054, ದಕ್ಷಿಣ ಕನ್ನಡ ಜಿಲ್ಲೆಯ ರೈತರು 9481718166, ಹಾಸನ ಜಿಲ್ಲೆಯ ರೈತರು 8310913646, ಹಾವೇರಿ ಜಿಲ್ಲೆಯ ರೈತರು 9686782782, ಕಲಬುರಗಿ ಜಿಲ್ಲೆಯ ರೈತುರ 9900108196, ಕೊಡಗು ಜಿಲ್ಲೆಯ ರೈತರು 9448613355, ಕೋಲಾರ ಜಿಲ್ಲೆಯ ರೈತರು 9449679432, ಕೊಪ್ಪಳ ಜಿಲ್ಲೆಯ ರೈತರು 7406504120, ಮಂಡ್ಯ ಜಿಲ್ಲೆಯ ರೈತರು 9845899997, ಮೈಸೂರು ಜಿಲ್ಲೆಯ ರೈತರು 9035990150, ರಾಯಚೂರು ಜಿಲ್ಲೆಯ ರೈತರು 9113686766, ರಾಮನಗರ ಜಿಲ್ಲೆಯ ರೈತರು 9880112922, ಶಿವಮೊಗ್ಗ ಜಿಲ್ಲೆಯ ರೈತರು 9900046082, ತುಮಕೂರು ಜಿಲ್ಲೆಯ ರೈತರು 8095122296, ಉಡುಪಿ ಜಿಲ್ಲೆಯ ರೈತರು 9742489714, ಉತ್ತರ ಕನ್ನಡ ಜಿಲ್ಲೆಯ ರೈತರು 9481609941, ವಿಜಯಪುರ ಜಿಲ್ಲೆಯ ರೈತರು 9035247365, ಯಾದಗಿರಿ ಜಿಲ್ಲೆಯ ರೈತರು 9481561643ಗೆ ಕರೆ ಮಾಡಿ ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ https://horticulturedir.karnataka.gov.in/storage/pdf-files/Lalbagh/Sales%20and%20availability%20%20(2020).pdf

ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಯಾವ ಜಿಲ್ಲೆಗೆ ಎಷ್ಟು ಕಸಿ ಸಸಿಗಳು ಲಭ್ಯವಿದೆ ಎಂಬ ಮಾಹಿತಿ ಮತ್ತು ಆಯಾ ಜಿಲ್ಲೆಯ ತೋಟಗಾರಿಕೆ ಇಲಾಖೆಯ ಮೊಬೈಲ್ ನಂಬರ್ ಮತ್ತು ಅವರ ಹೆಸರಿರುತ್ತದೆ.

Leave a Reply

Your email address will not be published. Required fields are marked *