ಜಮೀನಿನ ಪಟ್ಟಾ ಪುಸ್ತಕದ ಪ್ರತಿ ಮೊಬೈಲ್ ನಲ್ಲೇ ಹೀಗೆ ಪಡೆಯಿರಿ

Written by Ramlinganna

Updated on:

ರೈತರು ತಮ್ಮ ಜಮೀನಿನ ಪಹಣಿ, ಆಕಾರ್ ಬಂದ್, ಮುಟೇಶನ್, ಮೋಜಿನಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮೊಬೈಲ್ ನಲ್ಲೆ ಪಡೆಯುವಂತೆ ಖಾತಾ ಪ್ರತಿ ಅಥವಾ Land Patta pustaka ಪ್ರತಿಯನ್ನು ಸಹ ಮೊಬೈಲ್ ನಲ್ಲೇ ಪಡೆಯಬಹುದು.

ಹೌದು, ಇದು ತುಂಬಾ ಸರಳವಾದ ವಿಧಾನವಾಗಿದೆ. ರೈತರು ತಮ್ಮ ಬಳಿಯಿರುವ ಸ್ಮಾರ್ಟ್ ಫೋನ್ ನಲ್ಲೇ ಮನೆಯಲ್ಲಿ ಕುಳಿತು ಖಾತ ನಂಬರ್ ಹಾಕಿ ಅಥವಾ ಸರ್ವೆ ನಂಬರ್ ನಮೂದಿಸಿ ಖಾತೆ ಪ್ರತಿ ಅಥವಾ ಪಟ್ಟಾ ಪುಸ್ತಕದ ಪ್ರತಿಯನ್ನು ಹೇಗೆ ಪಡೆಯಬೇಕೆಂಬುದರ ಕುರಿತು ಸಂಪೂರ್ಣಮಾಹಿತಿ ಇಲ್ಲಿದೆ.

ರೈತರಿಗೆ ಪಹಣಿ, ಸರ್ವೆ ನಂಬರ್ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿರುವುದುದು ಖಾತಾ ನಂಬರ್. ಹಳೇ ರೈತರು ನಿಮ್ಮ ಜಮೀನು ಪಟ್ಟಾಆಗಿದೆಯೋ ಇಲ್ಲವೋ ಎಂಬುದನ್ನು ಕೇಳುತ್ತಿದ್ದರು. ಏಕೆಂದರೆ ರೈತರು ಜಮೀನು ಖರೀದಿ ಮಾಡಿದ ನಂತರ ಮುಟೇಶನ್ ಆಗಿ ರೈತರಿಗೆ ಒಂದು ಖಾತಾ ನಂಬರ್ ಬರುತ್ತದೆ. ಈ ಖಾತಾ ನಂಬರ್ ರೈತರಿಗೆ ಬಹಳ ಮುಖ್ಯವಾಗಿರುವುದು. ರೈತರಿಗೆ ಖಾತಾ ನಂಬರ್ ಗೊತ್ತಿಲ್ಲದಿದ್ದರೆ ಸರ್ವೆ ನಂಬರ್ ಹಾಕಿ ಖಾತಾ ನಂಬರ್ ತಿಳಿದುಕೊಳ್ಳಬಹುದು.

Land Patta pustaka ಅಥವಾ ಖಾತೆಯ ಪ್ರತಿ ನೋಡುವುದು ಹೇಗೆ?

ರೈತರು ತಮ್ಮ ಮೊಬೈಲ್ ನಲ್ಲಿ ಜಮೀನಿನ ಖಾತಾ ಪ್ರತಿ ಅಥವಾ ಪಟ್ಟಾ ಪುಸ್ತಕದ ಪ್ರತಿಯನ್ನು ನೋಡಲು ಈ

https://landrecords.karnataka.gov.in/service64/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಖಾತಾ ಎಕ್ಸಟ್ರ್ಯಾಕ್ಟ್ ಪೇಜ್ ಓಪನ್ ಆಗುತ್ತದೆ. ಅಲ್ಲಿ ರೈತರಿಗೆ ಎರಡು ಆಯ್ಕೆಗಳು ಕಾಣುತ್ತವೆ. ಸರ್ಚ್ ಬೈ ಖಾತಾ ನಂಬರ್ ಹಾಗೂ ಸರ್ಚ್ ಬೈ ಸರ್ವೆ ನಂಬರ್. ಸಾಮಾನ್ಯವಾಗಿ ಬಹುತೇಕ ರೈತರಿಗೆ ಖಾತಾ ನಂಬರ್ ನೆನಪಿರುವುದಿಲ್ಲ. ಆದರೆ ಜಮೀನಿನ ಸರ್ವೆ ನಂಬರ್ ನೆನಪಿರುತ್ತದೆ.  ಹಾಗಾಗಿ ರೈತರು ಸರ್ಜ್ ಬೈ ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು.

ಆಗ ಕೆಳಗಡೆ ರೈತರು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಂಡು ಸರ್ವೆ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಲೇಬೇಕು. ಆಗ ಸರ್ನೋಕ್ ನಲ್ಲಿ ಸ್ಟಾರ್ ಹಿಸ್ಸಾನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ಮೇಲೆ ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ಜಮೀನು ಮಾಲೀಕರ ಹೆಸರು ಕಾಣುತ್ತದೆ.

ಇದನ್ನೂ ಓದಿ ಮೊಬೈಲ್ ನಂಬರ್ ಹಾಕಿ ನಿಮ್ಮ ಪಿಎಂ ಕಿಸಾನ್ ಯೋಜನೆ ಹಣ ಜಮೆ ಸ್ಟೇಟಸ್ ಚೆಕ್ ಮಾಡಿ

ಸರ್ವೆ ನಂಬರ್ ಸ್ವಾಧೀನದಾರರ ಹೆಸರು ವಿಸ್ತೀರ್ಣ ಮತ್ತು ಜಮೀನಿನ ಖಾತಾ ನಂಬರ್ ಕಾಣುತ್ತದೆ. ಜಮೀನಿನ ಮಾಲಿಕರ ಹೆಸರು ಜಂಟಿಯಾಗಿದ್ದರೆ ಒಂದೇ ಖಾತಾ ನಂಬರ್ ಇರುತ್ತದೆ ಅಲ್ಲಿ ಕಾಣುವ ಸರ್ವೆ ನಂಬರ್ ಹಿಂದುಗಡೆಯಿರುವ ಸೆಲೆಕ್ಟ್ ಮೇಲೆ ಕ್ಲಿಕ್ ಮಾಡಲೇಹಬೇಕು .ಆಗ ಖಾತಾ ಡಿಟೇಲ್ಸ್ ಕೆಳಗಡೆ ನಿಮ್ಮ ಖಾತಾ ನಂಬರ್ ಕಾಣುತ್ತದೆ. ಅದರ ಕೆಳಗಡೆ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮ್ಮ ಸರ್ವೆ ನಂಬರ್, ಜಮೀನು ಮಾಲಿಕರ ಹೆಸರು ತಂದೆಯ ಹೆಸರು, ನೀವು ನಮೂದಿಸಿ ಖಾತಾ ನಂಬರ್ ನಲ್ಲಿ ಎಷ್ಟು ಎಕರೆ ವಿಸ್ತೀರ್ಣ ಇದೆ ಎಂಬ ಮಾಹಿತಿಯೂ ಕಾಣುತ್ತದೆ. ಇದನ್ನು ರೈತರು ಪ್ರಿಂಟ್ ಸಹ ಪಡೆಯಬಹುದು. ಇದರ ಮೊತ್ತ ಕೇವಲ 15 ರೂಪಾಯಿ ಇರುತ್ತದೆ.  ನಾಡಕಟೇರಿ, ಸಿಎಸ್ಸಿ ಕೇಂದ್ರಗಳು, ಗ್ರಾಮ ಒನ್ ಕೇಂದ್ರಗಳಲ್ಲಿ ಖಾತಾ ಪ್ರತಿ ಅಥವಾ Land Patta pustaka ಪ್ರತಿ ಪಡೆಯಬಹುದು.

Leave a Comment