ವಿದ್ಯಾನಿಧಿ ಯೋಜನೆಯಡಿ ರೈತ ಕುಟುಂಬದ ಮಕ್ಕಳಿಗೆ ಶಿಷ್ಯವೇತನ

Written by By: janajagran

Updated on:

Scholarship for all children of farmer family ರೈತ ವಿದ್ಯಾನಿಧಿ ಯೋಜನೆಯಡಿ ರೈತ ಮಕ್ಕಳು ಅರ್ಜಿ ಸಲ್ಲಿಸದಿದ್ದರೂ ವಿದ್ಯಾನಿಧಿ ಭಾಗ್ಯ ಸಿಗಲಿದೆ. ಹೌದು, ಈಗ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲು ಸರ್ಕಾರ ವಿದ್ಯಾನಿಧಿ ಯೋಜನೆಯನ್ನು ಮಾರ್ಪಡಿಸಿದ್ದರಿಂದ ಈ ಭಾಗ್ಯ ಸಿಗಲಿದೆ.

ರೈತ ಮಕ್ಕಳಿಗಷ್ಟೇ ವಿದ್ಯಾನಿಧಿ ಮಿತಿಗೊಳಿಸಿದ್ದ ಸರ್ಕಾರ ಈಗ ಆದೇಶವನ್ನು ಮಾರ್ಪಡಿಸಿ ರೈತ ಕುಟುಂಬದ ಎಲ್ಲಾ ಮಕ್ಕಳಇಗೆ ವಿದ್ಯಾನಿಧಿ ನೀಡಲು ಆದೇಶಿಸಿದೆ. ಇದಕ್ಕಿಂತ ಮುಂಚಿತವಾಗಿ ಬೇರೆ ಇಲಾಖೆಯಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದರೆ ವಿದ್ಯಾನಿಧಿ ಯೋಜನೆಯಡಿ ಸೌಲಭ್ಯ ಸಿಗುತ್ತಿರಲಿಲ್ಲ. ಈಗ ಬೇರೆ ಇಲಾಖೆಯಿಂದ ಯಾವುದೇ ರೀತಿಯ ವಿದ್ಯಾರ್ಥಿ ವೇತನ ಪಡೆದಿದ್ದರೂ ವಿದ್ಯಾನಿಧಿಗೆ ರೈತ ಕುಟುಂಬದ ಮಕ್ಕಳು ಅರ್ಹರಾಗಿರುತ್ತಾರೆ. ಇದಕ್ಕಾಗಿ ಅರ್ಜಿಯೂ ಸಲ್ಲಿಸಬೇಕಿಲ್ಲ.

Scholarship for all children of farmer family ಅರ್ಜಿ ಸಲ್ಲಿಸದೇ ವಿದ್ಯಾನಿಧಿ ಪಡೆಯುವುದು ಹೇಗೆ?

ಶಿಷ್ಯವೇತನಕ್ಕೆ ಸಂಬಂಧಿಸಿದ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶ, ಕೃಷಿ ಇಲಾಖೆಯಲ್ಲಿ ರೈತರು ನೋಂದಣಿ ಮಾಡಿಸಿರುವ ಫ್ರೂಟ್ಸ್ ತಂತ್ರಾಂಶ ಹಾಗೂ ಪಡಿತರ ಚೀಟಿ ವಿತರಿಸುವ ಕುಟುಂಬ ತಂತ್ರಾಂಶ ಸೇರಿ  ಮೂರು ತಂತ್ರಾಂಶಗಳನ್ನು ಸರ್ಕಾರ ಆನ್ಲೈನ್ ಮೂಲಕ ಇ-ಆಡಳಿತ ಸಂಯೋಜಿಸಿದೆ. ಫ್ರೂಟ್ಸ್ ತಂತ್ರಾಂಶ ಹಾಗೂ ಕುಟುಂಬ ತಂತ್ರಾಂಶದಲ್ಲಿ ರೈತರ ಮಾಹಿತಿ ಸಿಗುತ್ತದೆ. ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳು ಸೇರಿದ ನಂತರ ಎಸ್.ಎಸ್.ಪಿ ಯಲ್ಲಿಯೂ ಮಕ್ಕಳ ಆಧಾರ್ ಸಂಖ್ಯೆ ಮಕ್ಕಳ ಬ್ಯಾಂಕ್ ಖಾತೆ ನೋಂದಣಿಯಾಗಿರುವುದರಿಂದ ಸುಲಭವಾಗಿ ಮಕ್ಕಳ ಮಾಹಿತಿ ಸಿಗುತ್ತದೆ. ಇದರಿಂದಾಗಿ ನೇರವಾಗಿ ಮಕ್ಕಳಿಗೆ ಆನ್ಲೈನ್ ಮೂಲಕ ಶಿಷ್ಯವೇತನ ಪಾವತಿಸಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಹಳೆಯ ನಿಯಮದ ಪ್ರಕಾರ ತಂದೆ ತಾಯಿ ರೈತರಾಗಿದ್ದರೆ ಮಾತ್ರ ಮಕ್ಕಳು ಅರ್ಹರಾಗಿರುತ್ತಿದ್ದರು. ಆದರೆ ಗ್ರಾಮೀಣ ಪ್ರದೇಶದಲ್ಲಿ ಕೃಷಿ ಜಮೀನುಗಳು ಭಾಗಶ ಇನ್ನೂ ಹಂಚಿಕೆ ಆಗದೆ ಉಳಿದೆ. ಜೀವನಕ್ಕಾಗಿ ಅಣ್ಣ ತಮ್ಮಂದಿರು  ತಮ್ಮ ಕೃಷಿ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದರೂ ಜಮೀನಿನ ಮಾಲಿಕತ್ವ ಇನ್ನೂ ಅಣ್ಣ, ತಂದೆ ತಾಯಿಯವರ ಹೆಸರಿನಲ್ಲಿರುತ್ತದೆ. ಹಗಾಗಿ ಮಕ್ಕಳಿಗೆ ರೈತ ಮಕ್ಕಳೆಂದು ಗುರುತಿಸಲು ಕಷ್ಟವಾಗುತ್ತಿತತತ್ತು. ವಿದ್ಯಾರ್ಥಿಗಳು ಅನುಭವಿಸುತ್ತಿರುವ ಈ ಸಮಸ್ಯೆಯನ್ನು ಮನಗಂಡು  ಹಳೆಯ ನಿಯಮವನ್ನು ಮಾರ್ಪಡಿಸಿ ಈಗ ಸರಳಗೊಳಿಸಿದೆ. ಇದರಿಂದಾಗಿ ರೈತರ ಎಲ್ಲಾ ಮಕ್ಕಳು ರೈತವಿದ್ಯಾನಿಧಿಯಡಿ ಶಿಷ್ಯವೇತನ ಪಡೆಯಲಿದ್ದಾರೆ.

ಶಿಷ್ಯವೇತನದ ವಿವರ

ಪಿಯುಸಿ/ಐಐಟಿ/ ಡಿಪ್ಲೋಮಾ ವಿದ್ಯಾರ್ಥಿಗಳಿಗೆ 2500 ರೂಪಾಯಿ ವಿದ್ಯಾರ್ಥಿನಿಯರಿಗೆ 3000 ಸಾವಿರ ರೂಪಾಯಿ, ಬಿ.ಎ, ಬಿಎಸ್.ಸಿ, ಬಿಕಾಂ ಇನ್ನಿತರ ಪದವಿ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ 5000 ಹಾಗೂ ವಿದ್ಯಾರ್ಥಿನಿಯರಿಗೆ 5500 ರೂಪಾಯಿ ಶಿಷ್ಯವೇತನ ನೀಡಲಾಗುವುದು.

ಎಲ್ಎಲ್ಬಿ/ಪ್ಯಾರಾಮೆಡಿಕಲ್/ಬಿಫಾರ್ಮಾ/ನರ್ಸಿಂಗ್ ಇನ್ನಿತರ ವೃತ್ತಿಪರ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ 7500 ಹಾಗೂ ವಿದ್ಯಾರ್ಥಿನಿಯರಿಗೆ 8000 ರೂಪಾಯಿ ಶಿಷ್ಯ ವೇತನ ನೀಡಲಾಗುವುದು. ಎಂಬಿಬಿಎಸ್/ಬಿಇ/ಬಿಟೆಕ್ ಮತ್ತು ಎಲ್ಲಾ ಸ್ನಾತಕೋತ್ತರ ಕೋರ್ಸ್ಗಳಿಗೆ ವಿದ್ಯಾರ್ಥಿಗಳಿಗೆ 10000 ವಿದ್ಯಾರ್ಥಿನಿಯರಿಗೆ 11 ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುವುದು.

Leave a Comment