ಗಂಗಾಕಲ್ಯಾಣ, ಟ್ಯಾಕ್ಸಿ ಕಾರ್, ಹೊಲಿಗೆ ಯಂತ್ರ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿಆಹ್ವಾನ

Written by Ramlinganna

Published on:

scheme subsidy get now : ವಿವಿಧ ಯೋಜನೆಗಳಡಿ ಅಂದರೆ ಗಂಗಾ ಕಲ್ಯಾಣ, ಟ್ಯಾಕ್ಸಿ ಕಾರ್, ಹೊಲಿಗೆ ಯಂತ್ರ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಈ ಕೆಳಕಂಡ ವಿವಿಧ ಯೋಜನೆಗಳಡಿ ಸಹಾಯಧನ/ ಸಾಲ-ಸೌಲಭ್ಯವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಸೇವಾಸಿಂಧು ಪೋರ್ಟಲ್‌ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಪಂಚವೃತ್ತಿ ಅಭಿವೃದ್ದಿಗಾಗಿ ಆರ್ಥಿಕ ನೆರವು, ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ಹೊಸದು), ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ನವೀಕರಣ), ಗಂಗಾ ಕಲ್ಯಾಣ ಯೋಜನೆ (ಈ ಯೋಜನೆಯಡಿ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು), ಸ್ವಾವಲಂಬಿ ಸಾರಥಿ ಯೋಜನೆ,  ವಿದೇಶಿ ವ್ಯಾಸಂಗ ಯೋಜನೆ (ಈ ಯೋಜನೆಯಡಿ ವಾರ್ಷಿಕ ವರಮಾನವು 15 ಲಕ್ಷ ರೂ.ಗಳ ಮಿತಿಯಲ್ಲಿರಬೇಕು), ಸ್ವಾತಂತ್ರ‍್ಯ ಅಮೃತ ಮುನ್ನಡೆ ಯೋಜನೆ (ಈ ಯೋಜನೆಯಡಿ ಅರ್ಜಿಯನ್ನು www.kaushalkar.com ವೆಬ್‌ಸೈಟ್‌ದಲ್ಲಿ ಸಲ್ಲಿಸಬೇಕು), ಹೊಲಿಗೆಯಂತ್ರ / /Zig- Zag ಯೋಜನೆಗಳಡಿ ಅರ್ಜಿ ಸಲ್ಲಿಸಬೇಕು.

ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು.  ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು.  ಅರ್ಹ ಅಭ್ಯರ್ಥಿಗಳು ಕಲಬುರಗಿ-ಒನ್/ ಕರ್ನಾಟಕ-ಒನ್/ಅಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾಕೇಂದ್ರಗಳಲ್ಲಿ  ಸೇವಾಸಿಂಧು ಪೋರ್ಟಲ್‌ದಲ್ಲಿ ಆನ್‌ಲೈನ್ ಮೂಲಕ 2026ರ ಸೆಪ್ಟೆಂಬರ್ 30 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಶೈಕ್ಷಣಿಕ ಸಾಲ ಯೋಜನೆಗಳಡಿ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಇರುವುದಿಲ್ಲ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಿಗಮದ

https://kvcdcl.karnataka.gov.in

ವೆಬ್‌ಸೈಟ್‌ನ್ನು ಅಥವಾ ನಿಗಮದ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ 080-22374848/ 7899899039 ಗೆ  ಹಾಗೂ ಜಿಲ್ಲಾ ವ್ಯವಸ್ಥಾಪಕರ ಕಛೇರಿ, ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ, ಕಲಬುರಗಿ-585105 ಕಚೇರಿಯನ್ನು ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-278635ಗೆ ಸಂಪರ್ಕಿಸಲು ಕೋರಲಾಗಿದೆ.

scheme subsidy get now  ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ: ವಿವಿಧ ಯೋಜನೆಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

ಕಲಬುರಗಿ,ಸೆಪ್ಟೆಂಬರ್:07.(ಕರ್ನಾಟಕ ವಾರ್ತೆ)-ಕರ್ನಾಟಕ ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮದಿಂದ 2026-27ನೇ ಸಾಲಿಗೆ ಅನುಷ್ಠಾನಗೊಳಿಸಲಾಗುತ್ತಿರುವ ಈ ಕೆಳಕಂಡ ವಿವಿಧ ಯೋಜನೆಗಳಡಿ ಸಹಾಯಧನ/ಸಾಲ-ಸೌಲಭ್ಯವನ್ನು ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಸೇವಾಸಿಂಧು ಪೋರ್ಟಲ್‌ದಲ್ಲಿ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ನಿಗಮದ ಕಲಬುರಗಿ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ, ಅರಿವು-ಶೈಕ್ಷಣಿಕ ನೇರಸಾಲ ಯೋಜನೆ (ಹೊಸದು),  ಅರಿವು  ಶೈಕ್ಷಣಿಕ ಸಾಲ ಯೋಜನೆ (ನವೀಕರಣ), ಗಂಗಾ ಕಲ್ಯಾಣ ಯೋಜನೆ (ಈ ಯೋಜನೆಯಲ್ಲಿ ಕನಿಷ್ಠ 2 ಎಕರೆ ಹೊಂದಿರಬೇಕು), ಸ್ವಾವಲಂಬಿ ಸಾರಥಿ ಯೋಜನೆ, ಹೊಲಿಗೆಯಂತ್ರ/ ZigZag  ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಛಿಸುವವರು ಕಾಡುಗೊಲ್ಲ ಜಾತಿಗೆ ಸೇರಿದವರಾಗಿರಬೇಕು.

ಇದನ್ನೂ ಓದಿ ಪಿಎಂ ಕಿಸಾನ್ ಹಣ ಜಮೆಗೆ ಇಕೆವೈಸಿ ಕಡ್ಡಾಯ- ಸ್ಟೇಟಸ್ ಇಲ್ಲೇ ಚೆಕ್ ಮಾಡಿ

ಅರ್ಹ ಅಭ್ಯರ್ಥಿಗಳು ಕಲಬುರಗಿ-ಒನ್/ಕರ್ನಾಟಕ-ಒನ್/ಅಟಲ್-ಜಿ ಜನಸ್ನೇಹಿ ಕೇಂದ್ರ ಮತ್ತು ನಾಗರೀಕ ಸೇವಾ ಕೇಂದ್ರ,   ಸೇವಾಸಿಂಧು ಪೋರ್ಟಲ್‌ದಲ್ಲಿ ಆನ್‌ಲೈನ್ ಮೂಲಕ 2026ರ ಸೆಪ್ಟೆಂಬರ್ 30 ರೊಳಗಾಗಿ ಸಲ್ಲಿಸಬೇಕು.  ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ ಇರುವುದಿಲ್ಲ.

ಮತ್ತಿತರ ಹೆಚ್ಚಿನ ಮಾಹಿತಿಗಾಗಿ ನಿಗಮದ ನಿಗಮದ ಕೇಂದ್ರ ಕಛೇರಿಯ ದೂರವಾಣಿ ಸಂಖ್ಯೆ 080-22374848/7899899039 ಗೆ ಹಾಗೂ ಜಿಲ್ಲಾ  ವ್ಯವಸ್ಥಾಪಕರ ಕಛೇರಿ, ಕರ್ನಾಟಕ ರಾಜ್ಯಕಾಡುಗೊಲ್ಲ ಅಭಿವೃದ್ಧಿ ನಿಗಮ ನಿಯಮಿತ,   ಕಲಬುರಗಿ-585105 ಹಾಗೂ ಕಚೇರಿ ದೂರವಾಣಿ ಸಂಖ್ಯೆ: 08472-278635ಗೆ ಪ್ರತಿದಿನ 10 ರಿಂದ ಸಂಜೆ 5.30 ಗಂಟೆಯವರೆಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment