Jeevajala scheme subsidy get : ಜೀವಜಲ ಯೋಜನೆ ಅಡಿಯಲ್ಲಿ ಬೋರ್ವೆಲ್ ಹಾಕಲು 3 ಲಕ್ಷ ರೂಪಾಯಿ ಸಬ್ಸಿಡಿ ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಗ್ರಾಮಾಂತರ ಕೃಷಿ ಕಾರ್ಮಿಕರು, ಸಣ್ಣ ಸಣ್ಣ ಜಮೀನು ಹೊಂದಿರುವವರು ಮಳೆಯ ನೀರನ್ನೇ ಅವಲಂಬಿಸಿಕೊಂಡು ಜೀವನ ಮಾಡುವುದು ಬಹಳ ಕಷ್ಟ. ಅವರಿಗೆ ಕೊಳವೆ ಬಾವಿ ಅಥವಾ ತೆರೆದ ಬಾವಿಗಳನ್ನು ತೆಗೆಸುವುದರಿಂದ ವಾಣಿಜ್ಯ ಫಸಲುಗಳನ್ನು ಬೆಳೆದು ಜೀವನ ಸಾಗಿಸಲು ಅನುಕೂಲವಾಗುತ್ತದೆ. ಬೆಳಗಾಂ, ಬಾಗಲಕೋಟೆ, ವಿಜಯಪುರ ಮುಂತಾದ ಕಡೆಗಳಲ್ಲಿ ಸಮೀಪದಲ್ಲೇ ನದಿಗಳು ಹರಿಯುವುದರಿಂದ ತೆರೆದ ಬಾವಿಗಳಿಗೆ ಹೆಚ್ಚು ಹೆಚ್ಚು ಬೇಡಿಕೆಗಳಿವೆ. ಕೊಳವೆ ಬಾವಿಗಳು ಅವಶ್ಯಕವಿರುವಲ್ಲಿ ತೆರೆದ ಬಾವಿಗಳಿಗೆ ಆರ್ಥಿಕ ಸೌಲಭ್ಯ ಒದಗಿಸಿದರೆ, ಕೃಷಿಕನ ಜೀವನ ಸುಧಾರಿಸುತ್ತದೆ. ಆದುದರಿಂದ, ಈ ಕಾರ್ಯಕ್ಕೆ ನಿಗಮವು ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದೆ. ವೀರಶೈವ-ಲಿಂಗಾಯತ (ಪ್ರವರ್ಗ-3ಬಿ) ಸಮುದಾಯದ ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದು.
ವೀರಶೈವ ಲಿಂಗಾಯತ ಸಮುದಾಯದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಒಳಪಡುವ ಅಭಿವೃದ್ಧಿ ನಿಗಮದಿಂದ ಅನುಷ್ಟಾನಗೊಳಿಸುತ್ತಿರುವ ಜೀವಜಲ ಯೋಜನೆಯನ್ನು ಪಾರದರ್ಶಕವಾಗಿ ಮತ್ತು ನಿಗಧಿತ ಅವಧಿಯೊಳಗೆ ರೈತ ಫಲಾನುಭವಿಗಳಿಗೆ ತಲುಪಿಸಲು “ಅನುಷ್ಠಾನದ ವಿವೇಚನೆ ಫಲಾನುಭವಿಯ ಕೈಗೆ” ಎಂಬ ನೂತನ ವಿಧಾನವನ್ನು ಜಾರಿಗೆ ತರಲು ಕಾರ್ಯಕ್ರಮ ಅನುಷ್ಠಾನಕ್ಕೆ ಮಾರ್ಗಸೂಚಿ.
Jeevajala scheme subsidy get ಜೀವಜಲ ಯೋಜನೆಯ ಮಾರ್ಗಸೂಚಿಗಳು
ಕರ್ನಾಟಕ ವೀರಶೈವ ಲಿಂಗಾಯತ ಮತ್ತು ಉಪಜಾತಿಗಳಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೀರಾವರಿ ಸೌಲಭ್ಯ ಒದಗಿಸಲು ಅನುಷ್ಠಾನಗೊಳಿಸುವ ಜೀವಜಲ ವೈಯಕ್ತಿಕ ನೀರಾವರಿ ಯೋಜನೆಯ ಮಾರ್ಗಸೂಚಿಗಳು ಈ ಕೆಳಕಂಡಂತಿವೆ.
ಯೋಜನೆ ಉದ್ದೇಶ:- ಹಿಂದುಳಿದ ವರ್ಗಗಳ ಪವರ್ಗ-3 ಬಿ ರಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯತ ಮತ್ತು ಉಪಜಾತಿಗೆ ಸೇರಿದ ಸಣ್ಣ ಮತ್ತು ಅತಿ ಸಣ್ಣ ರೈತರು ಹೊಂದಿರುವ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಹೊಂದಿಲ್ಲದಿದ್ದಲ್ಲಿ ನೀರಾವರಿ, ಸೌಲಭ್ಯವನ್ನು ಒದಗಿಸಿ ಕೃಷಿ ಅಭಿವೃದ್ಧಿಗೆ ನೆರವು ನೀಡುವುದು.
ಈ ಯೋಜನೆಯಲ್ಲಿ ಪ್ರಯೋಜನ ಪಡೆಯಲು ಇರಬೇಕಾದ ಅರ್ಹತೆಗಳು:-
ಈ ಯೋಜನೆಯಲ್ಲಿ ಆರ್ಥಿಕ ಸಹಾಯ ವಡೆಯಲು ಅಭ್ಯರ್ಥಿಯು ದಿನಾಂಕ:30.03.2002ರ ಸಂಖ್ಯೆ ಸಕಇ 225 ಬಿಸಿಎ 2000 ಸರ್ಕಾರದ ಆದೇಶದಲ್ಲಿ ಗುರ್ತಿಸಿದ ಪ್ರವರ್ಗ-3ಬಿ ರಲ್ಲಿ ಬರುವ ವೀರಶೈವ ಲಿಂಗಾಯತ ಮತ್ತು ಉಪಜಾತಿಗೆ ಸೇರಿದವರಾಗಿರಬೇಕು. ಅರ್ಜಿದಾರರು ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಕ್ಕೆ ಸೇರಿದವರಾಗಿದ್ದು, ಒಂದೇ ಸ್ಥಳದಲ್ಲಿ ಹೊಂದಿಕೊಂಡಂತೆ ಇರುವ ಕನಿಷ, 2 ಎಕರೆ ಜಮೀನು ಹೊಂದಿರಬೇಕು.ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.
ಅರ್ಜಿದಾರರು ವ್ಯವಸಾಯ ವೃತ್ತಿಯನ್ನು ನಿರ್ವಹಿಸುತ್ತಿರಬೇಕು. ಅರ್ಜಿದಾರರ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ ರೂ.98,000/-ಗಳನ್ನುಮೀರಿರಬಾರದು. ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಅರ್ಜಿದಾರರ ವಯಸ್ಸು ಕನಿಷ್ಕ 18 ವರ್ಷಗಳು ಇರಬೇಕು. ಸರ್ಕಾರದ /ನಿಗಮದ ಬೇರೆ ಯಾವುದಾದರೂ ಯೋಜನೆಗಳಲ್ಲಿ ಸಾಲ ಅಥವಾ ಇತರ ಆರ್ಥಿಕ ಸವಲತ್ತು ಪಡೆದಿರಬಾರದು. ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ.33ರಷ್ಟು ಮೀಸಲು ನಿಗದಿಪಡಿಸಿದೆ. ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ. 5ರಷ್ಟು ಮೀಸಲು ನಿಗದಿಪಡಿಸಿದ. ಒಂದು ಕುಟುಂಬದ ಒಬ್ಬ ಸದಸ್ಯರಿಗೆ ಮಾತ್ರ ಸೌಲಭ್ಯ ಒದಗಿಸಲಾಗುವುದು. ನಿಗಮದ ನಿರ್ದೇಶಕ ಮಂಡಳಿಯು ಕಾಲಕಾಲಕ್ಕೆ ವಿಧಿಸುವ ಇನ್ನಿತರ ಅರ್ಹತೆಗಳನ್ನು ಹೊಂದಿದವರಾಗಿರಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲಾತಿಗಳು:
ಅರ್ಜಿದಾರರು ನಿಗದಿಪಡಿಸಿದ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಈ ಕೆಳಕಂಡ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹಿಂದುಳಿದ ವರ್ಗಗಳ ಪುವರ್ಗ-3ಬಿ ರಲ್ಲಿ ಬರುವ ಕರ್ನಾಟಕ ವೀರಶೈವ ಲಿಂಗಾಯತ ಮತ್ತು ಇದರ ಉಪಜಾತಿಗಳಿಗೆ ಸೇರಿರುವುದಕ್ಕೆ ಸಂಬಂಧಿಸಿದ ತಾಲ್ಲೂಕು ತಹಶಿಲ್ದಾರ್ ರಿಂದ ನಿಗದಿತ ನಮೂನೆಯಲ್ಲಿ ಪಡೆದ ಜಾತಿ/ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ. ಅರ್ಜಿದಾರರ ವಾಸದ ಪುರಾವೆಗಾಗಿ ಸಕ್ಷಮ ಪ್ರಾಧಿಕಾರಿಗಳು ನೀಡಿದ ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ/ಆಧಾರ ಕಾರ್ಡ್ ದೃಡೀಕೃತ ಪ್ರತಿ ಒದಗಿಸಬೇಕು. ಅರ್ಜಿದಾರರ ಪಾಸ್ ಪೋರ್ಟ್ ಅಳತೆಯ ಇತ್ತೀಚಿನ 3 ಫೋಟೋಗಳು,
ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ. ಅರ್ಜಿದಾರರು ಹೊಂದಿರುವ ಜಮೀನಿನ ಕಂದಾಯ ದಾಖಲೆಗಳಾದ ಆರ್.ಟಿ.ಸಿ/ ಪಹಣಿ, ಖಾತಾ ಉದ್ದರಣೆ, ಪಟ್ಯಾ ಪುಸ್ತಕ, ಮುಟೇಶನ್, ಇ.ಸಿ. ವಂಶವೃಕ್ಷ, ಜಮೀನಿನ ಚೆಕ್ ಬಂದಿ. ಅರ್ಜಿದಾರರು ನೀರಾವರಿ ಸೌಲಭ್ಯ ಹೊಂದಿಲ್ಲದೇ ಇರುವುದಕ್ಕೆ ಸ್ವಯಂ ಘೋಷಣೆ ಘಟಕ ವೆಚ್ಚ ರೂ.1,50,000/-ಕ್ಕಿಂತ ಹೆಚ್ಚಾದಲ್ಲಿ ಸಾಲ ಪಡೆಯುವ ಬಗ್ಗೆ ಫಲಾನುಭವಿಯಿಂದ ಒಪ್ಪಿಗೆ ಪತ್ರ
ಘಟಕ ವೆಚ್ಚ ಸಹಾಯಧನ ಮತ್ತು ಸಾಲ
ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆ ಘಟಕ ವೆಚ್ಚ ರೂ.200ಲಕ್ಷಗಳು, ಈ ಮೊತ್ತದಲ್ಲಿ ರೂ.1.50 ಲಕ್ಷ ಸಹಾಯಧನ ಹಾಗೂ ಘಟಕ ಪೂರ್ಣಗೊಳಿಸಲು ಹೆಚ್ಚುವರಿ ಮೊತ್ತ ಅವಶ್ಯವಿದ್ದಲ್ಲಿ ಗರಿಷ್ಠ ರೂ.50,000/-ಗಳ ಸಾಲವನ್ನು ಶೇ.4ರ ಬಡ್ಡಿದರದಲ್ಲಿ ಮಂಜೂರು ಮಾಡುವುದು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ ಮತ್ತ ತುಮಕೂರು ಜಿಲ್ಲೆಗಳಿಗೆ ವೈಯಕ್ತಿಕ ಕೊಳವೆ ಬಾವಿ ಘಟಕ ವೆಚ್ಚ ರೂ.3.50ಲಕ್ಷ ಇದರಲ್ಲಿ ರೂ. 3.00 ಲಕ್ಷ ಸಹಾಯಧನ, ಉಳಿಕೆ ರೂ.50,000/- ಗಳು ಸಾಲವಾಗಿರುತ್ತದೆ.
ಇದನ್ನೂ ಓದಿ ಸ್ವಾವಲಂಬಿ ಸಾರಥಿ ಯೋಜನೆ ಕಾರ್ ಖರೀದಿಗೆ 3 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ
ಅಲ್ಲದೇ, ಕೊರೆದ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲು ಪ್ರತಿ ಕೊಳವೆ ಬಾವಿಗೆ ರೂ.50,000/-ಗಳಂತೆ ವಿದ್ಯುತ್ ಸರಬರಾಜು ಕಂಪನಿಗಳಿಗೆ ವಿದ್ಯುದೀಕರಣ ವಚ್ಚವನ್ನು ಪಾವತಿಸುವುದು. ತೆರೆದ ಬಾವಿ: ವೈಯಕ್ತಿಕ ನೀರಾವರಿ ಕೊಳವೆ ಬಾವಿ ಯೋಜನೆಗೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದ ಬಾವಿ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ
ಹೆಚ್ಚಿನ ಮಾಹಿತಿಗಾಗಿ https://kvldcl.karnataka.gov.in/kn
ಲಿಂಕ್ ಮೇಲೆ ಕ್ಲಿಕ್ ಮಾಡಿ ವಿಚಾರಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.





