ದೇಶದ ಅತ್ಯಂತ ದೊಡ್ಡ ಬ್ಯಾಂಕ್ ಎಸ್.ಬಿ.ಐ ನಲ್ಲಿ ಖಾಲಿಯಿರುವ ಕ್ಲರಿಕಲ್ ಕೆೇಡರ್ ನ ಜೂನಿಯರ್ ಅಸೋಸಿಯೇಷನ್ ಹುದ್ದೆಗಳ ಭರ್ತಿಗೆ (SBI Job notification) ಅರ್ಜಿ ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಜೂನ್ 27 ರಿಂದ ಮೇ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಸ್‌ಬಿಐ ಕ್ಲರ್ಕ್‌ ನೋಟಿಫಿಕೇಶನ್‌ ಅನ್ನು ಅಫೀಶಿಯಲ್ ವೆಬ್‌ಸೈಟ್‌ sbi.co.in ನಲ್ಲಿ ಚೆಕ್‌ ಮಾಡಬಹುದು.

ವಿದ್ಯಾರ್ಹತೆ: ಯಾವುದೇ ಅಂಗೀಕೃತ ವಿವಿಯಿಂದ ಯಾವುದೇ ವಿಭಾಗದಲ್ಲಿ ಪದವಿ ಉತ್ತೀರ್ಣರಾಗಿರಬೇಕು.

ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 27-04-2021  ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17-05-2021, ಎಸ್‌ಬಿಐ ಕ್ಲರ್ಕ್‌ ಪರೀಕ್ಷೆ 2021 : 31-06-2021

ಆಯ್ಕೆ ಪ್ರಕ್ರಿಯೆ:

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಪ್ರಿಲಿಮಿನರಿ, ಮುಖ್ಯ ಪರೀಕ್ಷೆ ಮತ್ತು ಆಯಾ ರಾಜ್ಯಕ್ಕೆ ಸಂಬಂಧಪಟ್ಟ ಅಧಿಕೃತ ಭಾಷೆಗಳ ಕುರಿತು ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಶುಲ್ಕ:

ಸಾಮಾನ್ಯ ಅಭ್ಯರ್ಥಿಗಳ, ಹಿಂದುಳಿದ, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 750 ರೂಪಾಯಿ ಶುಲ್ಕವಿದೆ. ಎಸ್‌ಸಿ / ಎಸ್‌ಟಿ / ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ.ಅರ್ಜಿ ಶುಲ್ಕವನ್ನು ನಿಗದಿತ ದಿನಾಂಕದೊಳಗೆ ನೆಟ್‌ಬ್ಯಾಂಕಿಂಗ್, ಡೆಬಿಡ್ ಕಾರ್ಡ್‌, ಕ್ರೆಡಿಟ್ ಕಾರ್ಡ್ ಅಥವಾ ಎಸ್‌ಬಿಐ ಚಲನ್ ಜೆನೆರೇಟ್ ಮಾಡಿ ಪಾವತಿಸಬಹುದು.

ವಯೋಮಿತಿ ಅರ್ಹತೆಗಳು:

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ದಿನಾಂಕ 02-04-1993 ಕ್ಕಿಂತ ಮುಂಚಿತವಾಗಿ ಜನಿಸಬಾರದು. ಹಾಗೆ ದಿನಾಂಕ 01-04-2001 ರ ನಂತರ ಜನಿಸಿರಬಾರದು.

ವೇತನ ಶ್ರೇಣಿ:

ಬೇಸಿಕ್ ಸ್ಯಾಲರಿ ರೂ.13075-60000, ಜೊತೆಗೆ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ನೋಟಿಫಿಕೇಷನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ: sbi-clerk-notification-2021
ಅರ್ಜಿ ಸಲ್ಲಿಕೆಗೆ ವೆಬ್‌ಸೈಟ್‌ : sbi.co.in

Leave a Reply

Your email address will not be published. Required fields are marked *