ಸಾಮಾನ್ಯವಾಗಿ ಮನೆಯಲ್ಲಿರುವ ರಿಮೋಟ್ ಕಂಟ್ರೋಲ್ ಕೆಟ್ಟು ಹೋಗುವಾಗ ಅಥವಾ ಸೆಲ್ ವೀಕ್ ಆದಾಗ ರಿಮೋಟ್ ನ್ನು ಬಡಿದು ಅಥವಾ ಸೆಲ್ ತೆಗೆದು ಉಜ್ಜಿ ಉಜ್ಜಿ ಬಳಸುತ್ತೇವೆ. ಆದರೆ ಈಗ ಇಂತಹ ಕಷ್ಟ ಪಡಬೇಕಿಲ್ಲ. ನಿಮ್ಮ ರಿಮೋಟ್ ಕೆಟ್ಟು ಹೋದರೆ ಅಥವಾ ಸೆಲ್ ವೀಕ್ ಆದರೆ ನೀವು ನಿಮ್ಮ ಮೊಬೈಲ್ ನ್ನೇ ರಿಮೋಟ್ ಕಂಟ್ರೋಲ್ ಆಗಿ ಬಳಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮ್ಮ ಮೊಬೈಲ್ ನ್ನೇ ನೀವು ನಿಮ್ಮ ಟಿವಿಯ ರಿಮೋಟ್ ಆಗಿ ಸುಲಭವಾಗಿ ಬಳಸಬಹುದು. ಟಿವಿ ರಿಮೋಟ್ ನಂತೆಯೇ ಇದು ಕಾರ್ಯ ನಿರ್ವಹಿಸುತ್ತದೆ. ರಿಮೋಟ್ ಕಂಟ್ರೋಲ್ ನಲ್ಲಿರುವಂತೆ ಎಲ್ಲಾ ಸೌಲಭ್ಯಗಳು ಇದರಲ್ಲಿರುತ್ತದೆ.
ನಿಮ್ಮ ಮೊಬೈಲ್ ನ್ನೇ ಟಿವಿ ರಿಮೋಟ್ ಆಗಿ ಬಳಸುವುದು ಹೇಗೆ……..?
ಮೊದಲು ನೀವು ನೀವು Google play storeದಿಂದ Remote controller for TV App ಡೌನ್ಲೋಡ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್ ನ ಗೂಗಲ್ ಪ್ಲೇ ಸ್ಟೋರ್ ನಲ್ಲಿ ರಿಮೋಟ್ ಕಂಟ್ರೋಲರ್ ಫಾರ್ ಟಿವಿ ಎಂದು ಟೈಪ್ ಮಾಡಿ install ಮಾಡಿಕೊಳ್ಳಬೇಕು. Remote controller for TV App install ಮಾಡಿಕೊಂಡನಂತರ ಓಪನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಟಿವಿ ರಿಮೋಟ್ ಕಂಟ್ರೋಲರ್ ಇಮೇಜ್ ಕಾಣುತ್ತದೆ. ಇಲ್ಲಿ ನೀವು ನಿಮ್ಮ ಟಿವಿ ಹಾಗೂ ಅದರ ಮಾಡಲ್ ಅನ್ನು ಆಯ್ಕೆ ಮಾಡಿಕೊಂಡರೆ ಸಾಕು ನಿಮ್ಮ ರಿಮೋಟ್ ನಿಮ್ಮ ಮೊಬೈಲ್ ನಲ್ಲಿ ಕಾಣುತ್ತದೆ.
ಸೆಲೆಕ್ಟ್ ಯುವರ್ ಟಿವಿ ಮೇಲೆ ಕ್ಲಿಕ್ ಮಾಡಬೇಕು. ಆಗ ಟಿವಿಯ ಹೆಸರಿನ ಪಟ್ಟಿ ಕಾಣುತ್ತದೆ. ನಿಮ್ಮ ಟಿವಿ ಯಾವ ಬ್ರ್ಯಾಂಡ್ ಇದೆ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಉದಾಹರಣೆಗೆ ನಿಮ್ಮ ಟಿವಿ ಸೋನಿಯಿದ್ದರೆ ಅದರ ಮೇಲೆ ಅಥವಾ ಇನ್ನಾವುದೇ ಟಿವಿ ಇರಲಿ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅದರ ಮಾಡಲ್ ಕಾಣುತ್ತದೆ. ಆ ಮಾಡಲ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಟಿವಿಯ ಎಲ್ಲಾ ಕೀವರ್ಡ್ ಲೋಡ್ ಆಗುತ್ತದೆ. ಆಗ ನಿಮ್ಮ ಟಿವಿ ರಿಮೋಟ್ ತರಹ ಕಾಣುತ್ತದೆ. ಆಗ ನೀವು ಸುಲಭವಾಗ ಮೊಬೈಲ್ ನಲ್ಲಿ ಡೌನ್ಲೋಡ್ ಆಗಿರುವ Remote controller for TV Appನ್ನು ನೀವು ರಿಮೋಟ್ ನಂತೆ ಬಳಸಬಹುದು.
ಅಲ್ಲಿ ಆನ್ ಆಫ್ ಬಟನ್, ಚಾನಲ್ ಬದಲಾಯಿಸಲು up and down option ಸಹ ಇರುತ್ತದೆ. ಅಷ್ಟೇ ಅಲ್ಲ ಒಂದರಿಂದ 0 ಯಿಂದ 9 ರವರೆಗೆ ನಂಬರ್ ಗಳು ಸಹ ಇರುತ್ತದೆ. ನೀವು ಯಾವ ರೀತಿ ಟಿವಿಯಲ್ಲಿ ರಿಮೋಟ್ ಬಳಸುತ್ತೇವೆಯೋ ಅದೇ ರೀತಿ ಇದನ್ನು ನೀವು ಸುಲಭವಾಗಿ ಬಳಸಬಹುದು. ಎಂಟರ್, ಒಕೆ, ಆಫ್, ಆನ್ ಎಲ್ಲಾ ತರಹದ ಬಟನ್ ಸಹ ಇರುತ್ತದೆ.