ದೇಶದ ಯಾವುದೇ ಬ್ಯಾಂಕಿಗೆ ಹೋಗಿ ಅಥವಾ ಹಣಕಾಸು ಸಂಸ್ಥೆಗಳಿಗೆ ಹೋಗಿ ಸಾಲ ಕೇಳಲು ಹೋದರೆ ಮೊದಲು ಅವರು ನೋಡುವುದು ನಿಮ್ಮ ಕ್ರೇಡಿಟ್ ಸ್ಕೋರ್.  ಬಜಾಜ್ ಫೈನಾನ್ಸ್ , ಮಣಿಪುರ್ ಫೈನಾನ್ಸ್ ಸೇರಿದಂತೆ ಇತರ ಫೈನಾನ್ಸ್ ಗಳು ಸಹ ಸಾಲ ಕೊಡುವ ಮೊದಲು ಅವರು ನೋಡುವುದು ಕ್ರೇಡಿಟ್ ಸ್ಕೋರ್. ನಿಮ್ಮ ಕ್ರೇಡಿಟ್ ಸ್ಕೋರ್ ಉತ್ತಮವಾಗಿದ್ದರೆ ಮಾತ್ರ ನಿಮಗೆ ಸಾಲ ಸಿಗುತ್ತದೆ.

ಹೌದು, ಕ್ರೇಡಿಟ್ ಸ್ಕೋರ್ ಚೆಕ್ ಮಾಡಲು  ಹಾಗೂ ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರಿ ಎಂಬುದನ್ನು ಚೆಕ್ ಮಾಡಲು ಈಗ ನೀವು ಬ್ಯಾಂಕಿಗೆ ಹೋಗಬೇಕಿಲ್ಲ. ಕ್ರೇಡಿಟ್ ಸ್ಕೋರ್ ಎಷ್ಟಿದ್ದರೆ ಸಾಲ ಸಿಗುತ್ತದೆ ಕ್ರೇಡಿಟ್ಸ ಸ್ಕೋರ್ ಎಂದರೇನು, ಕ್ರೇಡಿಟ್ ಸ್ಕೋರ್ ಹೆಚ್ಚಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಬ್ಯಾಂಕಿನವರು ಸಾಲ ಕೊಡುವುದಕ್ಕಿಂತ ಮುಂಚಿತವಾಗಿ ನಿಮ್ಮ ಆಧಾರ್ ಪ್ಯಾನ್ ಕಾರ್ಡ್ ನಂಬರ್ ದಿಂದ ಇದಕ್ಕಿಂತ ಮುಂಚಿತವಾಗಿ ಯಾವ ಯಾವ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದೀರಾ. ಸರಿಯಾಗಿ ಕಂತು ಕಟ್ಟುತ್ತಿದ್ದೀರೋ ಇಲ್ಲವೋ ಎಂಬುದನ್ನೆಲ್ಲಾ ಸಿಬಿಲ್ ರಿಪೋರ್ಟ್ ನಲ್ಲಿ ಪರಿಶೀಲಿಸಿ ಸಾಲ ನೀಡುತ್ತಾರೆ. ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಸಾಲ ಕೊಡುವುದಿಲ್ಲ.  ನಿಮ್ಮ ಸಿಬಿಲ್ ಸ್ಕೋರ್ ನೋಡುವುದು ಹೇಗೆ?

ಗೂಗಲ್ ನಲ್ಲಿ www.homeloans.sbi  ಎಂದು  ಟೈಪ್ ಮಾಡಬೇಕು , ಆಗ ಮೇಲ್ಗಡೆ ಕಾಣುವ fill the application form for getting free cibil score now –SBI Home loans  ಮೇಲೆ ಕ್ಲಿಕ್ ಮಾಡಬೇಕು.  ನಂತರ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ  ಪರ್ಸನಲ್ ಡಿಡೇಲ್ ಹಾಕಬೇಕು.

  1. ನಿಮ್ಮ ಹೆಸರು, ಮಿಡಲ್ ನೇಮ್ ಲಾಸ್ಟ್ ನೇಮ್, ಜೆಂಡರ್ ಆಯ್ಕೆ ಮಾಡಿಕೊಳ್ಳಬೇಕು. ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಬೇಕು.
  2. ಅಡ್ರೇಸ್ ಕಾಲಂನಲ್ಲಿ ರೆಸಿಡೆಂಟ್ ಅಥವಾ ಪರ್ಮನೆಂಟ್ ಅಡ್ರೆಸ್ ಭರ್ತಿ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸ ತುಂಬಬೇಕು. ಬೇಕು. ರಾಜ್ಯ, ನಗರ ಪಿನ್ ಕೋಡ್ ನಮೂದಿಸಬೇಕು.
  3. ಐಡೆಂಟಿ ಡಿಟೇಲ್ ನಲ್ಲಿ ಪ್ಯಾನ್ ಕಾರ್ಡ್ ಸೆಲೆಕ್ಟ್ ಮಾಡಿಕೊಂಡು ಪ್ಯಾನ್ ಕಾರ್ಡ್ ನಮೂದಿಸಬೇಕು. ಕಾಂಟ್ಯಾಕ್ಟ್ ಡಿಟೇಲ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಮೇಲ್ ಐಡಿ ಆಯ್ಕೆ ಮಾಡಿಕೊಂಡು ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ನಮೂದಿಸಬೇಕು. ಆಗ ಸಿಬಿಲ್ ಸ್ಕೋರ್ ಪಿಡಿಎಫ್ ಫೈಲ್ ಓಪನ್ ಮಾಡಲು ಪಾಸ್ವರ್ಡ್ ನಿಮ್ಮ ಮೊಬೈಲಿಗೆ ಬರುತ್ತದೆ. ಅದನ್ನು ನಮೂದಿಸಿದರೆ ಸಾಕು, ಸಿಬಿಲ್ ಸ್ಕೋರ್ ಪೇಜ್ ಓಪನ್ ಆಗುತ್ತದೆ ಅಲ್ಲಿ ಸಿಬಿಲ್ ಸ್ಕೋರ್ ಕಾಣುತ್ತದೆ. ನೀವು ಎಲ್ಲೆಲ್ಲಿ ಸಾಲ ಪಡೆದಿದ್ದೀರೋ ಎಲ್ಲಾ ಮಾಹಿತಿಯು ಕಾಣುತ್ತದೆ. ನೀವು ಗೋಲ್ಡ್ ಲೋನ್ ತೆಗೆದುಕೊಂಡಿದ್ದರೆ, ಪರ್ಸನಲ್ ಲೋನ್ ತೆಗೆದುಕೊಂಡರೆ, ಒಂದು ಬ್ಯಾಂಕಿಗಿಂತ ಇತರ ಬ್ಯಾಂಕಿನಲ್ಲಿ ಸಾಲ ತೆಗೆದುಕೊಂಡಿದ್ದರೆ ಎಲ್ಲಾ ಮಾಹಿತಿಯು ಸಿಗುತ್ತದೆ. ಇದನ್ನು ನಿಮ್ಮ ಮೊಬೈಲ್ ನಲ್ಲಿಯೇ ಸೇವ್ ಮಾಡಿಕೊಳ್ಳಿ. ಮತ್ತೆ ಮತ್ತೆ ನೋಡುವ ಅವಶ್ಯಕತೆಯಿಲ್ಲ.

ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆಯಿದ್ದರೆ ಅದನ್ನು ಹೆಚ್ಚಿಸಿಕೊಳ್ಳಲು ಏನು ಮಾಡಬೇಕು ಎಂಬ ಸಂದೇಹ ನಿಮಗೆ ಬಂದಿರಬಹುದು. ಅದಕ್ಕೆ ಇಲ್ಲಿದೆ ಉತ್ತರ. ಸದ್ಯ ಇರುವ ಲೋನ್ ಗಳನ್ನು ಸರಿಯಾದ ಸಮಯಕ್ಕ ಇಎಮ್ಐಗಳನ್ನು ಕಟ್ಟಬೇಕು. ಬ್ಯಾಂಕಿನಂಲ್ಲಿ ಎಫ್ ಡಿ ಮಾಡಿ ಅದರ ಮೇಲೆ ಲೋನ್ ತೆಗೆದುಕೊಂಡು ಸರಿಯಾದ ಸಮಯಕ್ಕೆ ಕಟ್ಟಬೇಕು. ಗೋಲ್ಡ್ ಲೋನ್ ತೆಗೆದುಕೊಂಡು ಅದನ್ನು ಸರಿಯಾದ ಸಮಯಕ್ಕೆ ಇಎಮ್ಐ ತುಂಬಬೇಕು.  ಇಎಮ್ಐ ಗಳನ್ನು ಕಂತುಗಳಲ್ಲಿಯೇ ತುಂಬಿದರೆ ನಿಮ್ಮ ಕ್ರೇಡಿಟ್ ಸ್ಕೋರ್ ಹೆಚ್ಚಾಗುತ್ತದೆ. ಒಂದು ವೇಳೆ ನೀವು ಕ್ರೇಡಿಟ್ ಕಾರ್ಡ್ ಉಪಯೋಗಿಸುತ್ತಿದ್ದರೆ ಲಿಮಿಟನ್ನು ಶೇ. 40ಕ್ಕಿಂತ ಹೆಚ್ಚು ಬಳಸಬಾರದು.

ಏನಿದು ಸಿಬಿಲ್ CIBIL?

ಕ್ರೇಡಿಟ್ ಇನ್ಫಾರ್ಮೇಷನ್ ಬ್ಯೂರೋ ಇಂಡಿಯಾ ಲಿಮೆಟೆಡ್ ಒಂದು ಸಂಸ್ಥೆಯಾಗಿದ್ದು, ಬ್ಯಾಂಕುಗಳಿಂದ ಪ್ರತ್ಯೇಕವಾಗಿ ಕಂಪನಿಯಾಗಿದೆ. ಇದು ವ್ಯಕ್ತಿ ಅಥವಾ ಸಂಸ್ಥೆಗಳ ಕ್ರೇಡಿಟ್ ದಾಕಲೆಗಳ ಸಂಗ್ರಹಣ ಮತ್ತು ನಿರ್ವಹಣೆ ಮಾಡುತ್ತದೆ. ಸಿಬಿಲ್ ಸಂಸ್ಥೆಯ ನೀಡುವ ವರದಿಯಿಂದಲೇ ಬ್ಯಾಂಕುಗಳು ನಿಮಗೆ ಸಾಲ ಕೊಡಬೇಕೋ ಬೇಡವೇ ಎಂಬುದನ್ನು ನಿರ್ಧರಿಸಿ ಸಾಲ ನೀಡುತ್ತದೆ.

ಕ್ರೇಡಿಟ್ ಸ್ಕೋರ್ ಎಷ್ಟಿರಬೇಕು?

ಸಿಬಿಲ್ ರಿಪೋರ್ಟ್ ಪ್ರಕಾರ ಸಿಬಿಲ್ ಸ್ಕೋರ್ 700 ರಿಂದ 900 ವರೆಗೆ ಇರುತ್ತದೆ. 700 ಮೇಲ್ಕಡೆ ಇರಬೇಕು. 800ಗಿಂತ ಹೆಚ್ಚು ಕ್ರೇಡಿಟ್ ಸ್ಕೋರ್ ಇದ್ದರೆ ನಿಮಗೆ ಸಾಲ ಸುಲಭವಾಗಿ ಸಿಗುತ್ತದೆ. ಈ ಕ್ರೇಡಿಟ್ ಸ್ಕೋರ್ ಚೆಂಜ್ ಆಗುತ್ತಲೇ ಇರುತ್ತದೆ. ನೀವು ಸಾಲ ತೆಗೆದುಕೊಳ್ಳುವ ಸಮಯದಲ್ಲಿರುವ ಕ್ರೇಡಿಟ್ ಸ್ಕೋರ್ ಆಧಾರದ ಮೇಲೆ ನಿಮಗೆ ಸಾಲ ಸಿಗುತ್ತದೆ.

Leave a Reply

Your email address will not be published. Required fields are marked *