ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಯು ಬೆಳವಣಿಗೆ ಮಧ್ಯಮದಿಂದ ಉತ್ತಮವಾಗಿದೆ ಮತ್ತು ಕೆಲವು ಪ್ರದೇಶಗಳಲ್ಲಿ ನೆನೆ (ಮೊಗ್ಗು) ಮತ್ತು ಹೂ ಬಿಡುವ ಹಂತದಲ್ಲಿದೆ. ಜೇವರ್ಗಿ ಎಡ್ರಾಮಿ, ಅಫಜಲಪೂರ, ಆಳಂದ ಮತ್ತು ಕಲಬುರಗಿಯ ತಾಲೂಕಿನಲ್ಲಿ ತೊಗರಿ 25-50% ಹೂ ಬಿಟ್ಟಿದೆ ಚಿತ್ತಾಪುರ, ಶಹಾಬಾದ, ಸೆಡಂ, ಕಾಳಗಿ ಮತ್ತು ಚಿಂಚೋಳಿ ತಾಲೂಕುಗಳಲ್ಲಿ ಬೆಳವಣಿಗೆ ಮತ್ತು ಮೊಗ್ಗು ಹಂತ, ಅಲ್ಲಲ್ಲಿ 10-20% ಹೂ ವಾಡವ ಹಂತದಲ್ಲಿದೆ ಎಂದು ಕ್ಷೀಪ್ರ ಸಂಚಾರ ಪೀಡೆ ಸಮೀಕ್ಷೆಯ ಕಲಬುರಗಿ ಕೃಷಿ ಸಂಶೋಧನಾ ಕೇಂದ್ರದ ಸಂಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ತಿಂಗಳು ಅಕ್ಟೋಬರ್ 26 ರಂದು ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಮತ್ತು ಇತರೆ ಬೆಳೆಗಳಿಗೆ ಬರುವ ಕೀಟ ಹಾಗೂ ರೋಗಗಳ ಕುರಿತು ಕೈಗೊಂಡ ಕ್ಷೀಪ್ರ ಸಂಚಾರ ಸಮೀಕ್ಷಾ ವರದಿಯಲ್ಲಿ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ತೇವಾಂಶದ ಕೊರತೆಯಾಗವ ಲಕ್ಷಣ ಇರುವುದರಿಂದ ಸಮಗ್ರ ಬೆಳೆ ನಿರ್ವಹಣಾ ಕ್ರಮಗಳನ್ನು (ಮುಂದಿನ 15 ದಿವಸದ ವರೆಗೆ) ಕೈಗೊಳ್ಳುವುದು ಅಗತ್ಯವಾಗಿದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
1) ಪೈಟೊಫ್ಥೊರಾ ಕಾಂಡ ಮಚ್ಚೆ ರೋಗ ಬಾಧೆಗೆ ರಿಡೊಮಿಲ್ ಶಿಲೀಂದ್ರ ನಾಶಕವನ್ನು 3 ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರಸಿ ಸಿಂಪರಣೆ ಮತ್ತು ಬುಡ ತೊಯಿಸಬೇಕು.
2) ತೊಗರಿಯ ತುದಿ ಜೀಡಿಗಟ್ಟುವ ಬಾದೆ ಕಂಡುಬಂದರೆ ರೈತರು ಆತಂಕ ಕೊಳಗಾಗಬಾರದು. ಎಲ್ಲಿ ಅದರ ಬಾದೆ ಹೆಚ್ಚು ಕಂಡಲ್ಲಿ ರೈತರು ಈ ಕೆಳಗೆ ತಿಳಿಸಿದ ಕೀಟ ನಾಶಕಗಳಾದ ಪ್ರೊಪೆನೋಫಾಸ್ 50 ಇ.ಸಿ. 2.0ಮಿ.ಲಿ. ಜೊತೆಗೆ 2 ಮಿ.ಲಿ. ಕ್ಲೋರಪೈರಿಪಾಸ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
3) ಎರಡನೇ ಸಿಂಪರಣೆಯಾಗಿ : ಎಮಾಮ್ಕೆಟಿನ್ ಬೆಂಜೊಯಟ್ 0.2ಗ್ರಾಂ (ಎಕರೆಗೆ 80 ಗ್ರಾಂ) ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯ ಅಥವಾ ಮೆಣಸಿನಕಾಯಿ (0.5%) ಮತ್ತು ಬೆಳ್ಳುಳ್ಳಿ (0.25%) ಕಷಾಯ ಸಿಂಪಡಿಸಬೇಕು.
ಕಷಾಯ ತಯಾರಿಸುವ ವಿದಾನ : 5 ಕಿಲೋ ಪುಡಿ ಮಾಡಿದ ಬೇವಿನ ಬೀಜವನ್ನು ಬಟ್ಟೆಯಲ್ಲಿ ಕಟ್ಟಿ 100 ಲೀಟರ್ ನೀರಿನಲ್ಲಿ 10 ಗಂಟೆಗಳ ಕಾಲ ನೆನೆಸಿಟು ದ್ರಾವಣ ತೆಗೆಯಿರಿ. ಈ ದ್ರಾವಣಕ್ಕೆ 25 ಗ್ರಾಂ ಸೋಪಿನಪುಡಿಯನ್ನು 100 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೇವಿನ ಬೀಜ ಸಿಗದಿದ್ದಲ್ಲಿ ಬೇವಿನ ಬೀಜ ಮೂಲದ ಕೀಟನಾಶಕವನ್ನು (1500ಪಿಪಿಎಮ್) 3 ಮಿ.ಲೀ./ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
4) ತೊಗರಿಯಲ್ಲಿ ಹೂ ಮತ್ತು ಕಾಯಿ ಉದಿರುವಿಕೆ ನಿಲ್ಲಿಸಲು ಮತ್ತು ಕಾಳು ದಪ್ಪಾಗಲು – ಪಲ್ಸ ಮ್ಯಾಜಿಕ್ 2ಕೆಜಿ ಪ್ರತೀ ಎಕರೆಗೆ ಸಿಂಪಡಿಸಬೇಕು. (ವಲಯ ಕೃಷಿ ಸಂಶೊಧನಾ ಕೇಂದ್ರ, ಕಲಬುರಗಿಯಲ್ಲಿ ಲಬ್ಯವಿರುತ್ತದೆ (9880323707).
5) ಪದೆ ಪದೆ ಅಂತರ ಬೇಸಾಯ (ಎಡೆಕುಂಟೆ) ಮಾಡಿ : ಜುಲೈ, ಅಗಸ್ಟ್, ಸೆಪ್ಟೆಂಬರ್‌ನಲ್ಲಿ ನಿರಂತರ ಸುರಿದ ಮಳೆ ಪರಿಣಾಮ ಭೂಮಿಗಟ್ಟಿಯಾಗಿದೆ, ಬಿರುಕು ಬಿಡಲು ಪ್ರಾರಂಭಿಸಿದೆ, ಇದರಿಂದ ಭೂಮಿ ಮೆಲ್ಭಾಗ ಬೇಗನೆ ತೇವಾಂಶ ಕಳೆದುಕೊಳ್ಳುವುದು, ಬಿರುಕು ಬಿಟ್ಟ ಸ್ಥಳದಲ್ಲಿ ಇರುವ ಬೇರು ಕತ್ತರಿಸಿ, ಅದರ ಮುಖಾಂತರ ರೋಗಾಣು ಸೇರಿ ನೆಟೆರೋಗ ಹೆಚ್ಚಾಗಲು ಕಾರಣವಾಗಬಹುದು. ಇದರೊಂದಿಗೆ ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆಗಳು ಕಡಿಮೆ ಇರುವುದರಿಂದ ಭೂಮಿಯ ಮೇಲ್ಪದರಲ್ಲಿ ತೇವಾಂಶ ಕಾಪಾಡುವುದು ಅತೀ ಮುಖ್ಯ ವಾದದ್ದು. ಆದ್ದರಿಂದ ರೈತ ಬಾಂಧವರು ಪದೆ ಪದೆ ಅಂತರ ಬೇಸಾಯ (ಎಡೆಕುಂಟೆ) ಮಾಡಿ ತೇವಾಂಶ ಕಾಪಾಡುವುದು ಮತ್ತು ಕಳೆ ನಿಯಂತ್ರಣ ಮಾಡುವುದರಿಂದ ರೈತರು ಅತೀ ಉತ್ತಮ ಬೆಳೆ ಬೆಳವಣಿಗೆ ಮತ್ತು ಇಳುವರಿ ಪಡೆಯಲು ಸಾಧ್ಯವಿದೆ.
ಹತ್ತಿ ಬೆಳೆಯಲ್ಲಿ ರಸಹೀರುವ ಕೀಟಗಳ ನಿರ್ವಹಣೆ
ಥ್ರಿಪ್ಸ್ ನುಶಿ ಹಾಗೂ ಹಸಿರು ಜಿಗಿಹುಳುಗಳ ಬಾದೆ ಕಂಡುಬಂದಲ್ಲಿ ಅಸಿಟಾಮಿಪ್ರಿಡ್ 20ಎಸ್.ಪಿ.0.15ಗ್ರಾಂ ಅಥವಾ ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್. 0.3 ಮಿಲಿ ಅಥವಾ ಥಯೋಮಿಥಾಕ್ಸಾಂ 20 ಡಬ್ಲೂಜಿ 0.2 ಗ್ರಾಂ ಪ್ರತಿ ಲೀಟರ ನೀರಿಗೆ ಬೆರೆಸೆ ಸಿಂಪಡಿಸುವುದರಿಂದ ಇವುಗಳನ್ನು ನಿರ್ವಹಣೆ ಮಾಡಬಹುದು.
ಇದನ್ನೂ ಓದಿ: ಮೊಬೈಲ್ ನಲ್ಲಿಯೇ ಓರಿಜಿನಲ್ ಪಹಣಿ (Pahani) ಡೋನ್ಲೋಡ್ ಮಾಡಿಕೊಳ್ಳಬೇಕೇ…. ಇಲ್ಲಿದೆ ಸಂಪೂರ್ಣ ಮಾಹಿತಿ
ರೈತರಿಗೆ ವಿಷೇಶ ಸೂಚನೆ
- ಪೀಡೆ ನಾಶಕ ಕೊಂಡುಕೊಳ್ಳುವಾಗ ನಿಗದಿತ ರಶಿಧಿ ಪಡೆದು ಕಾಯಿದಿರಿಸಿಕೊಳ್ಳಿ.
- ಸಿಪಾರಸ್ಸು ಮಾಡಿದ ಪೀಡೆ ನಾಶಕವನ್ನೆ ಕರಿದಿಸಿ ಸಿಂಪಡಿಸಬೇಕು.
- ಪೀಡೆ ನಾಶಕ ಸಿಂಪರಣೆ ಮಾಡುವಾಗ ಎಲ್ಲಾ ಮುನ್ನೆಚರಿಕೆ ಕ್ರಮಗಳ್ಳನ್ನು ಅನುಸರಿಸಬೇಕು.
- ರೈತರು ಯಾವದೆ ವಿವರಣೆ/ಖಚಿತ ಮಾಯಿತಿಯಿಲ್ಲದ ಹಾಗೂ ಸಿಪಾರಸ್ಸು ಮಾಡದಿರುವ ಹಾಗೂ ನೊಂದಾಯಿಸದ (ಬಯೊ ಯಂದು ಮಾರಾಟ ವಾಗುವ) ಕೀಟ ನಾಶಕ ಸಿಂಪಡಿಸಬಾರದು ಇದರಿಂದ ಸಮರ್ಪಕವಾಗಿ ಪೀಡೆ ನಿರ್ವಹಣೆ ಯಾಗದೆ ಮನುಷ, ಪ್ರಾಣಿ ಮತ್ತು ಪರಿಸರಕ್ಕೆ ದಕ್ಕೆ ಯಾಗುವ ಸಂದರ್ಭ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.