ರೈತಬಾಂಧವರಿಗಿಲ್ಲಿದೆ ಸಂತಸದ ಸುದ್ದಿ. ಈಗ ರೈತಬಾಂಧವರು ಜಮೀನಿನ ಪಹಣಿ ಪಡೆಯಲು ನಾಡ ಕಚೇರಿಯ ಎದುರುಗಡೆ ಸಾಲಿನಲ್ಲಿ ನಿಂತುಕೊಳ್ಳುವ ಅವಶ್ಯಕತೆಯಿಲ್ಲ. ಮನೆಯಲ್ಲಿ ಕುಳಿತು ಮೊಬೈಲ್ ನಲ್ಲಿಯೇ ಓರಿಜಿನಲ್ ಪಹಣಿಯನ್ನು ಡೌನ್ಲೋಡ್ ಮಾಡಿಕೊಂಡು ಯಾವಾಗ ಬೇಕೋ ಆಗ ಪ್ರಿಂಟ್ ತೆಗೆದುಕೊಳ್ಳಬಹುದು. ಹೌದು, ಭೂಮಿ ಆನ್ಲೈನ್ ಪೋರ್ಟಲ್ ನಲ್ಲಿ ಇಂತಹದೊಂದು ಸೌಲಭ್ಯವನ್ನು ಒದಗಿಸಲಾಗಿದೆ. ಓರಿಜಿನಲ್ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.

ಗೂಗಲ್ ನಲ್ಲಿ  Bhoomi ಎಂದು ಟೈಪ್ ಮಾಡಬೇಕು. ಆಗ ಸರ್ಕಾರದ ಭೂಮಿ ತಂತ್ರಾಂಶದ ಕೆಲವು ಪೇಜ್ ಕಾಣಿಸುತ್ತವೆ ಅಲ್ಲಿ Revenue Department Services Govt of Karnataka Bhoomi  ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ I- RTC ಮೇಲೆ ಕ್ಲಿಕ್ ಮಾಡಬೇಕು. ಅಥವಾ ಈ ಲಿಂಕ್ https://landrecords.karnataka.gov.in/Service38/GuestUserInfo.aspx ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಹೆಸರು, ಮೊಬೈಲ್ ನಂಬರ್, ಈ ಮೇಲ್ ಐಡಿ, ಆಧಾರ್ ಕಾರ್ಡ್ ನಂಬರ್  ನಮೂದಿಸಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.

ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ,  ಗ್ರಾಮ, ನಿಮ್ಮ ಸರ್ವೆ ನಂಬರ್ ನಮೂದಿಸಿದ ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು ನಂತರ Select Surnoc ಕಾಲಂನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಹಿಸ್ಸಾನಂಬರ್ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮಗೆ ಯಾವ ವರ್ಷದಿಂದ ಯಾವ ವರ್ಷದವರೆಗೆ ಪಹಣಿ ಬೇಕೆ ಎಂಬುದನ್ನು ಆಯ್ಕೆ ಮಾಡಿಕೊಂಡು Fetch details ಮೇಲೆ ಕ್ಲಿಕ್ ಮಾಡಬೇಕು. ನಂತರ ಜಮೀನಿನ ಮಾಲೀಕನ ಹೆಸರು, ಸರ್ವೆನಂಬರ್, ಪಹಣಿ ಯಾವ ವರ್ಷದಿಂದ ಯಾವ ವರ್ಷದವರೆಗೆ ಪಡೆಯುತ್ತಿದ್ದೀರಿ ಎಂಬ ಮೆಸೇಜ್ ಕಾಣುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಒಂದು ವೇಳೆ ನೀವು ಕೇವಲ ಪಹಣಿ ನೋಡಬೇಕೆಂದುಕೊಂಡರೆ View RTC ಮೇಲೆ ಕ್ಲಿಕ್ ಮಾಡಬೇಕು. ಒರಿಜಿನಲ್ ಪಹಣಿ ಪಡೆಯಲು ಆನ್ಲೈನ್ ನಲ್ಲಿ 10 ರೂಪಾಯಿ ಪಾವತಿಸಬೇಕಾಗುತ್ತದೆ. ಓರಿಜಿನಲ್ ಪಹಣಿ ಬೇಕಾದರೆ ನೀವು Pay and Print RTC ಮೇಲೆ ಕ್ಲಿಕ್ ಮಾಡಬೇಕು. ಆಗ ಅಲ್ಲಿ I Agree to the terms and conditions ಆಯ್ಕೆ ಮಾಡಿಕೊಂಡು Pay Now ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಪೇಮೆಂಟ್ ಆಫಷನ್ ನಲ್ಲಿ ಕ್ರೇಡಿಟ್ ಕಾರ್ಡ್/ ಡೆಬಿಟ್ ಕಾರ್ಡ್/ ನೆಟ್ ಬ್ಯಾಂಕಿಂಗ್ ಈ ಮೂರರಲ್ಲಿ ಯಾವುದರ ಮೂಲಕ 10 ರೂಪಾಯಿ ಪಾವತಿಸಬೇಕೆಂದುಕೊಂಡಿದ್ದೀರೋ ಅದರ ಮೇಲೆ ಕ್ಲಿಕ್ ಮಾಡಬೇಕು.

ನಿಮ್ಮದು ಡೆಬಿಟ್ ಕಾರ್ಡ್ ಅಂದರೆ ಎಟಿಎಂ ಇದ್ದರೆ ಡೆಬಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಡೆಬಿಟ್ ಕಾರ್ಡ್ ವಿವರ ಅಂದರೆ ಅಕೌಂಟ್ ನಂಬರ್, ಹೆಸರು, ಬ್ಯಾಂಕಿನ ಹೆಸರು ಭರ್ತಿ ಮಾಡಿ ಪ್ರೊಸೀಡ್ ಮೇಲೆ ಕ್ಲಿಕ್ ಮಾಡಿದ ನಂತರ Pay Now ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮ್ಮ ಮೊಬೈಲಿಗೆ ಬರುವ ಓಟಿಪಿ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಎಟಿಎಂ ಪಿನ್ ನಮೂದಿಸಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಓರಿಜಿನಲ್ ಪಹಣಿಗಾಗಿ ನೀವು 10 ರೂಪಾಯಿ ಪಾವತಿಸಿದ ನಂತರ ಓರಿಜಿನಲ್ ಪಹಣಿ ಓಪನ್ ಆಗುತ್ತದೆ. ಇದನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡು ಯಾವಾಗ ಬೇಕೋ ಆಗ ಓರಿಜಿನಲ್ ಪ್ರಿಂಟ್ ತೆಗೆದುಕೊಳ್ಳಬಹುದು.

Leave a Reply

Your email address will not be published. Required fields are marked *