Rain alert ಮಾರ್ಚ್ 22 ರಿಂದ ಮೂರು ದಿನ ಗುಡುಗು ಮಿಂಚಿನ ಮಳೆ

Written by Ramlinganna

Published on:

Rain alert in 12 district ಮಾರ್ಚ್ 22 ರಿಂದ ಮೂರು ದಿನಗಳ ಕಾಲ ರಾಜ್ಯದ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಹವಾಮಾನದ ಪರಿಸ್ಥಿತಿ ನಿರಂತರವಾಗಿ ಬದಲಾಗುತ್ತಿದೆ.ಇದರ ಪರಿಣಾಮದಿಂದಾಗಿ ಮಾರ್ಚ್ 22 ರಿಂದ ಕರ್ನಾಟಕ ರಾಜ್ಯದಲ್ಲಿ ಮಳೆಯಾಗಲಿದೆ.

ಹಾಗಾದರೆ ಯಾವ ಯಾವ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಯಾವ ಜಿಲ್ಲೆಯಲ್ಲಿ ವಾತಾವರಣ ಹೇಗಿರಲಿದೆ? ಇಲ್ಲಿದೆ ಮಾಹಿತಿ.

Rain alert in 12 district ರಾಜ್ಯದ 12 ಜಿಲ್ಲೆಗಳಲ್ಲಿ ಮಳೆ

ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಯಲ್ಲಿ ಮಳೆಯಾಗಲಿದೆ.

ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಉತ್ತರ ಒಳನಾಡಿನ  ಬಾಗಲಕೋಟೆ ಬೆಳೆಗಾವಿ, ಬೀದರ್, ಧಾರವಾಡ, ಕಲಬುರಗಿ, ಗದಗ, ವಿಜಯಪುರ, ರಾಯಚೂರು, ಕೊಪ್ಪಳ, ಬಳ್ಳಾರಿ , ಯಾದಗಿರಿ ಜಿಲ್ಲೆಯಲ್ಲಿ ಎಂದಿನಂತೆ ಒಣಹವೆ ಮುಂದುವರೆಯಲಿದೆ.

ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆ

ರಣ ಬಿಸಿಲಿಗೆ ಹೈರಾಣಾಗಿದ್ದ ಬೀದರ್ ಜಿಲ್ಲೆಯಲ್ಲಿ ಇಂದು ಮಳೆರಾಯ ತಂಪೆರದಿದ್ದಾನೆ. ಹೌದು, ಅಕಾಲಿಕ ಧಾರಾಕಾರ ಮಳೆಯಿಂದ ಬೀದರ್ ಜಿಲ್ಲೆಯ ಜನರಲ್ಲಿ ಮಂದಹಾಸ ಮೂಡಿದೆ.

ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಚಿಕ್ಲಿ ಗ್ರಾಮದಲ್ಲಿ ಭಾರಿ ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಅವಾಂತರ ಸೃಷಿ ಮಾಡಿದೆ. ಯಾರೂ ಸಿಡಿಲು ಬಡಿದು ತೆಂಗಿನ ಮರ ಹೊತ್ತಿ ಉರಿದಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಭಾಲ್ಕಿ ತಾಲೂಕಿನ ಕೋಸ್ ಗ್ರಾಮದಲ್ಲಿ ಸಿಡಿಲು ಬಡಿದು ತೆಂಗಿನ ಮರ ಧಗಧಗ ಹೊತ್ತಿ ಉರಿದಿದ್ದರಿಂದ ಗ್ರಾಮದಲ್ಲಿ ಆತಂಕದ ವಾತಾರವಣ ನಿರ್ಮಾಣವಾಗಿತ್ತು.

ಬೀದರ್ ಔರಾದ್, ಕಮಲನಗರ, ಭಾಲ್ಕಿ ಸೇರಿದಂತೆ ಜಿಲ್ಲೆಯಾದ್ಯಂತ ಸತತ ಒಂದು ಗಂಟೆ ಗುಡುಗು ಸಿಡಿಲು ಹಾಗೂ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.

ಬಿಸಿಲಿನ ಝಳದಿಂದ ತತ್ತರಿಸಿದ ಬೀದರ್ ಜಿಲ್ಲೆಯ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಇದೇ ರೀತಿ ಕಲ್ಯಾಣ ಕರ್ನಾಟಕದ ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ, ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಸೆಕೆ ಇದೆ. ಬಿಸಿಲನಾಡು ಕಲಬರುಗಿ ಜಿಲ್ಲೆಯಲ್ಲಂತು ಬೆಳಗ್ಗೆ 10 ಗಂಟೆಯಿಂದಲೇ ಬಿಸಿಲು ಆರಂಭವಾಗುತ್ತದೆ. ಮನೆಯಿಂದ ಹೊರ ಹೋದರೆ ಸಾಕು, ಬಿಸಿಲಿ ಝಳ ಮುಖಕ್ಕೆ ಬಡಿಯುತ್ತದೆ. ಶಾಲಾ ಕಾಲೇಜುಗಳ ಪರೀಕ್ಷೆ ನಡೆಯುತ್ತಿದೆ. ಅತೀ ಶೀಘ್ರದಲ್ಲಿ ಎಲ್ಲಾ ಪರೀಕ್ಷೆಗಳು ಮುಗಿದರೆ ಸಾಕು ಎಂಬ ನಿಟ್ಟುಸಿರು ಬಿಡುತ್ತಿದ್ದಾರೆ.

ಏನೇ ಆಗಲಿ ಈ ಬಿಸಿಲಿನ ನಾಡಿಗೆ ಒಂದೆರಡು ಸಲವಾದರೂ ಜೋರಾದ ಮಳೆ ಬಂದರೆ ತಂಪೆರೆದರೆ ಸಾಕು ಎಂಬ ಆಶಯದಲ್ಲಿದ್ದಾರೆ ಕಲಬುರಗಿಯ ಜನತೆ. ಮಾರ್ಚ್ 22 ರ ನಂತರವಾದರೂ ಬೇರೆ ಜಿಲ್ಲೆಯಂತೆ ಕಲಬುರಗಿ ಭಾಗಕ್ಕೆ ಮಳೆರಾಯ ಮುಖ ಮಾಡಲಿ ಎಂಬುದು ಜನತೆ ಪ್ರಾರ್ಥಿಸುತ್ತಿದ್ದಾರೆ.

ನಿಮ್ಮೂರಿನ ಕಡೆ ಮಳೆ ಯಾವಾಗ ಆಗುತ್ತದೆ?

ನಿಮ್ಮೂರಿನ ಸುತ್ತಮುತ್ತ ಮಳೆ ಯಾವಾಗ ಬರುತ್ತದೆ ಎಂಬದನ್ನು ಕೇಳಲು ನೀವು ವರುಣಮಿತ್ರ ಸಹಾಯವಾಣಿ ನಂಬರ್ 92433 45433 ಗೆ ಕರೆ ಮಾಡಿದರೆ ಸಾಕು, ನಿಮಗೆ ಒಂದೇ ನಿಮಿಷದಲ್ಲಿ ನಿಮ್ಮೂರಿನ ಸುತ್ತಮುತ್ತಲಿನ ವಾತಾವರಣ, ಮಳೆ, ಗಾಳಿ, ಹವಾಮಾನ ಎಲ್ಲಾ ಮಾಹಿತಿಯು ಸಿಗಲಿದೆ.  ಹೌದು, ಈ ಉಚಿತ ಸಹಾಯವಾಣಿ ನಂಬರ್ ದಿನದ 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ.

Leave a Comment