ಜ. 10 ರಿಂದ ಮೂರು ದಿನ ಕೃಷಿಮೇಳ

Written by Ramlinganna

Updated on:

Raichur Krishimela ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 10 ರಿಂದ 12 ರವರೆಗೆ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸಲಾಗಿದೆ.

ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ಸಿರಿಧಾನ್ಯಗಳ ಜೊತೆಗೆ ಕೃಷಿ ವಲಯಕ್ಕೆ ಸಂಬಂಧಿಸಿದಂತಹ ಉತ್ಪಾದನೆ, ಆವಿಷ್ಕಾರ ಹಾಗೂ ಹೊಸ ತಂತ್ರಜ್ಞಾನಗಳ  ಕುರಿತ ಸಮಗ್ರ ಮಾಹಿತಿಯನ್ನು ರೈತರಿಗೆ ಒದಗಿಸಿ ಕೊಡಲಾಗುವುದು ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಹನುಮಂತಪ್ಪ ತಿಳಿಸಿದ್ದಾರೆ.

ಅವರು ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ವಿದ್ಯಾರ್ಥಿ ವಸತಿ ನಿಲಯದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಮೂರು ದಿನಗಳ ಮೇಳದಲ್ಲಿ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಹೊಸ ತಂತ್ರಜ್ಞಾನಗಳು ಹಾಗೂ ಆವಿಷ್ಕಾರಗಳ ಕುರಿತ ರೈತಬಾಂಧವರಿಗೆ ಸಂಪೂರ್ಣ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆಗಳನ್ನು ಒದಗಿಸುವುದರ ಜೊತೆಗೆ ತಮ್ಮಜಮೀನಿನಲ್ಲಿ ಅಳವಡಿಸಲು ಪ್ರೇರಪರಣೆಯ ಉದ್ದೇಶವನ್ನು ಹೊಂದಲಾಗಿದೆ ಎಂದು ವಿವರಿಸಿದ್ದಾರೆ.

ಹನಿ ನೀರಾವರಿ ಮತ್ತು ತುಂತುರು ನೀರಾವರಿ ತಂತ್ರಜ್ಞಾನ, ನೀರಾವರಿ ಮೂಲಕ ರಸಗೊಬ್ಬರ ಪೂರೈಕೆ, ಡ್ರೋಣ ಹಾಗೂ ಸೋಲಾರ್ ಶಕ್ತಿಚಾಲಿತ ಸಿಂಪರಣಾ ಯಂತ್ರಗಳು ಇಲ್ಲಿರಲಿವೆ. ಹತ್ತಿಕಟ್ಟಿಗೆ ಕತ್ತರಿಸುವ ಯಂತ್ರ, ಒಕ್ಕಣಿಕೆಯಂತ್ರ, ಪೆಂಡಿಕಟ್ಟುವ ಯಂತ್ರ, ಮಳೆ ನೀರು ಕೊಯ್ಲು ಮತ್ತು ಅಂತರ್ಜಲ ಮರುಪೂರಣ ಇತ್ಯಾದಿಗಳ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಅತ್ಯುತ್ತಮ ಸಾಧನೆಗೆ ಏಳು ಶ್ರೇಷ್ಠ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.

ಇದನ್ನೂ ಓದಿ : ನಿಮ್ಮ ಜಮೀನಿನ ಅಕ್ಕಪಕ್ಕದ ಜಮೀನು ಯಾರ ಹೆಸರಿಗೆ ಎಷ್ಟು ಎಕರೆಯಿದೆ? ಮೊಬೈಲ್ ನಲ್ಲೆ ಚೆಕ್ ಮಾಡಿ

ಮೊದಲನೇ ದಿನ ಸ್ವಾಮಿಜಿಗಳಿಂದ ಗೋಪೂಜೆ ಮೂಲಕ ಮೇಳಕ್ಕೆ ಚಾಲನೆ ನೀಡಲಾಗುವುದು. ಎರಡನೇ ದಿನ ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸುವರು.

ಸಂಶೋಧನಾ ನಿರ್ದೇಶಕ ಬಿ.ಕೆ. ದೇಸಾಯಿ ಮಾತನಾಡಿ, ಕೃಷಿ ವಿವಿಯಿಂದ ಇಲ್ಲಿಯವರೆಗೆ 537 ಆವಿಷ್ಕಾರಗಳನ್ನು ಮಾಡಲಾಗಿದೆ. 49 ಹೊಸ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಹಗರಿ ಕೇಂದ್ರದಲ್ಲಿ ಸಿರಿಧಾನ್ಯಗಳ ಸಂಶೋಧನೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.

ಕೊರಲೆ, ಬರಗು, ಸಾಮೆ, ರಾಗಿ, ಜೋಳ, ಸಜ್ಜೆ ತಳಿಗಳನ್ನು ಬಿಡುಗಡೆ ಮಾಡಲಾಗಿದೆ. ಹೆಚ್ಚು ನಾರು ಮತ್ತು ಖನಿಜಾಂಶ ಒಳಗೊಂಡಿದೆ. ರೈತರಿಗೆ ಸಿರಿಧಾನ್ಯಗಳನ್ನುಬೆಳೆಯಲು ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Raichur Krishimela ಕೃಷಿಮೇಳದ ಆಕರ್ಷಣೆ ಕೇಂದ್ರಗಳು

ಮೂರು ದಿನಗಳ ಕಾಲ ನಡೆಯುವ ಈ ಕೃಷಿ ಮೇಳದಲ್ಲಿ ಸಿರಿಧಾನ್ಯ ಉತ್ಪಾದನೆ, ಸಂಸ್ಕರಣೆ ಹಾಗೂ ಮೌಲ್ಯವರ್ಧನೆ, ನೀರು ಸಂರಕ್ಷಣೆ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರ್ಣ, ಅಲಂಕಾರಿಕ ಮೀನು ಸಾಕಾಣಿಕೆ, ಬೀಜಗಳು, ಔಷಧೀಯ ಮತ್ತು ಸುಗಂಧಿತ ಸಸ್ಯಗಳು, ಸಾವಯವ ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕ, ಜೈವಿಕ ಗೊಬ್ಬರಗಳು, ಹಾಲಿನ ಮೌಲ್ಯವರ್ಧಿತ ಉತ್ಪನ್ನಗಳು, ಪಶುಸಂಗೋಪನೆ, ಸ್ವಸಹಾಯ ಗುಂಪುಗಳ ಸಬಲೀಕರಣ, ಗುಡಿ ಕೈಗಾರಿಕೆ, ತೋಟಗಾರಿಕೆ ತಂತ್ರಜ್ಞಾನ, ಕೃಷಿ ಯಂತ್ರೋಪಕರಣಗಳು, ಕೊಯ್ಲು ಮತ್ತು ಕೊಯ್ಲೋತ್ತರ ಯಂತ್ರೋಪಕರಣಗಳು, ಫಲಪುಷ್ಪ ಪ್ರದರ್ಶನ, ಜಾನುವಾರು ಮತ್ಸ್ಯ ಪ್ರದರ್ಶನ.

ಕಲ್ಯಾಣ ಕರ್ನಾಟಕ ಭಾಗದ ಹವಾಗುಣಕ್ಕೆ ಹೊಂದಿಕೊಳ್ಳಬಹುದಾದ ಗೊಡಂಬಿ ಬೆಳೆಯನ್ನು ಸಹ ಪರಿಚಯಿಸಲಾಗುವುದು. ಮೇಳದಲ್ಲಿ 220 ಸುಸಜ್ಜಿತ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : PM Kisan ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೆ ಚೆಕ್ ಮಾಡಿ

ಕೃಷಿ ಮೇಳವನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್ ಉದ್ಘಾಟಿಸುವರು. ಕೈಮಗ್ಗ ಮತ್ತು ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಬಿ. ಪಾಟೀಲ್ ಮುನೇನಕೊಪ್ಪರವರು ಕೃಷಿ ವಸ್ತುಪ್ರದರ್ಶನ ಅನಾವರಣಗೊಳಿಸುವರು. ತೋಟಗಾರಿಕೆ ಸಚಿವ ಮುನಿರತ್ನರವರು ಫಲಪುಷ್ಪ ಪ್ರದರ್ಶನ ಅನಾವರಣ, ಪಶು ಸಂಗೋಪನೆ ಸಚಿವ ಪ್ರಭು ಬಿ. ಚವ್ಹಾಣರವರು ಜಾನುವಾರು ಪ್ರದರ್ಶನ ಚಾಲನೆ ನೀಡುವರು ಎಂದು ತಿಳಿಸಿದ್ದಾರೆ.

Leave a Comment