ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ವಿಶೇಷ ಕೇಂದ್ರೀಯ ನೆರವಿನಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪರಿಶಿಷ್ಟ ಪಂಗಡದವರಿಗೆ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು (poultry farming unit) ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಫಲಾನುಭವಿಗಳು ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 080-29787448, ದೇವನಹಳ್ಳಿ 080-27681784, ದೊಡ್ಡಬಳ್ಳಾಪುರ 080-27623681, ಹೊಸಕೋಟೆ 080-27931528, ನೆಲಮಂಗಲ 080-27723172 ನಂಬರಿಗೆ ಕರೆ ಮಾಡಿ ಸಂಪರ್ಕಿಸಲು ಕೋರಲಾಗಿದೆ.
ಕೋಳಿ ಸಾಕಾಣಿಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಕೋಳಿ ಸಾಕಾಣಿಕೆ ಮಾಡಲಿಚ್ಚಿಸುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲು ರಾಯಚೂರು ಜಿಲ್ಲೆಯ ಅರ್ಹ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಹಾಯಧನ (Subsidy) ನೀಡಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹೌದು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸ್ವಾವಲಂಬಿಯಾಗಿ ಜೀವನ ಸಾಗಿಸಲು ಕೃಷಿಯೊಂದಿಗೆ ಉಪಕಸುಬು ಮಾಡಿಕೊಂಡು ಜೀವನ ಸಾಗಿಸಲು ಪ್ರೋತ್ಸಾಹ ಧನ ನೀಡಲು ಅರ್ಜಿ ಕರೆಯಲಾಗಿದೆ.
ಜಮೀನು ಹೊಂದಿರುವ ಕೃಷಿಕರಿಗೆ ಮೊದಲ ಆದ್ಯತೆ ನೀಡಲಾಗುವುದು. ನಿವೇಶನ ಹಾಗೂ ನೀರಿನ ಸೌಲಭ್ಯ ಹೊಂದಿರಬೇಕು. ಸ್ಥಳೀಯಚ ಗ್ರಾಪಂ ನಿರಪೇಕ್ಷಣಾ ಪತ್ರ ಪಡೆದಿರಬೇಕು. ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲು ವಿದ್ಯುತ್ ಸಂಪರ್ಕ ಹೊಂದಿರಬೇಕು. ಫಲಾನುಭವಿಗಳು ಆರೋಗ್ಯ ಹಾಗೂ ಪಶುಸಂಗೋಪನೆ ಇಲಾಖೆ ಅನುಮತಿ ಪಡೆದಿರಬೇಕು.
ಕೋಳಿ ಸಾಕಾಣಿಕೆ ಘಟಕ ಸ್ಥಾಪಿಸಲಿಚ್ಚಿಸುವ ಫಲಾನುಭವಿಗಳು ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಗಳಲ್ಲಿ ಪಡೆದು ಭರ್ತಿಮಾಡಿ ಜುಲೈ 20ರೊಳಗೆ ಅರ್ಜಿ ಸಲ್ಲಿಸಬೇಕೆಂದು ಕೋರಲಾಗಿದೆ.
ಕೋಳಿ ಸಾಕಾಣಿಕೆಗೆ ಏನೇನು ಬೇಕು (poultry farming material)
ಕೋಳಿ ಸಾಕಾಣಿಕೆ ಮಾಡಲು ಆಸಕ್ತಿ, ದೃಢವಾದ ಮನಸ್ಸು ಬೇಕು. ಕನಿಷ್ಟ ತರಬೇತಿ ಹಾಗೂ ಪರಿಶ್ರಮ ಬೇಕು, ಕೋಳಿ ಶೆಡ್ ನಿರ್ಮಿಸಲು ಸ್ಥಳಾವಕಾಶ ಬೇಕು. ಸತತವಾಗಿ ಶುದ್ಧ ನೀರಿನ ಸೌಕರ್ಯ ಬೇಕಾಗುತ್ತದೆ. ರಾತ್ರಿಯಲ್ಲಿಯೂ ಸಹ ಬೆಳಕಿನ ವ್ಯವಸ್ಥೆ ಮಾಡಿರಬೇಕು. ಅಂದರೆ ವಿದ್ಯುತ್ ಸಂಪರ್ಕ ಇರಬೇಕು. ಮಾಂಸಕ್ಕಾಗಿ ಘಟಕ ಸ್ಥಾಪಿಸುತ್ತೀರೋ, ಮೊಟ್ಟೆ ಉದ್ಯಮಕ್ಕಾಗಿ ಘಟಕ ಸ್ಥಾಪನೆ ಮಾಡುತ್ತಿದ್ದೀರೋ ಅಥವಾ ಮಾಂಸ ಮತ್ತು ಕೋಳಿ ಮೊಟ್ಟೆ ಎರಡನ್ನೂ ಮಾಡಲು ಉದ್ದೇಶಿಸಿದ್ದೀರೋ ಎಂಬುದನ್ನು ನಿರ್ಧರಿಸಬೇಕು. ಸಾಕಾಣಿಕೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ರೋಗನಿರೋಧಕ ಲಸಿಕೆಯನ್ನು ಮರೆಯಬಾರದು. ಈಗಾಗಲೇ ಕೋಳಿ ಸಾಕಾಣಿಕೆ ಮಾಡುವವರ ಸಂಪರ್ಕ ಪಡೆದು ನೇರ ಅನುಭವ ಪಡೆಯುವುದು ಇನ್ನೂ ಉತ್ತಮ.ಕೋಳಿ ಮರಿಗಳು ಮತ್ತು ಕೋಳಿಗಳ ಪಾಲನೆ ಪೋಷಣೆ ಚೆನ್ನಾಗಿ ಮಾಡಿದರೆ ಕೋಳಿ ಸಾಕಾಣಿಕೆ ಲಾಭದಾಯಕವಾಗಿರುತ್ತದೆ.
ಕೋಳಿ ಗೊಬ್ಬರವೂ ಉಪಯೋಗಕಾರಿ (poultry compost)
ಕೋಳಿ ಗೊಬ್ಬರ ಹೆಚ್ಚು ಸಾರಜನಕ ಹೊಂದಿದೆ. ಇದನ್ನು ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸಿದರೆ ಬೆಳೆಯಲ್ಲಿ ಇಳುವರಿ ಹೆಚ್ಚಾಗುತ್ತದೆ. ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ.
ಕೋಳಿ ತಳಿಗಳ ಆಯ್ಕೆ (poultry variety)
ಬ್ರಾಯ್ಲರ್ ಕೋಳಿ ಸಾಕಾಣಿಕೆ ಮಾಡುತ್ತಿದ್ದೀರೋ ಅಥವಾ ನಾಟಿ ಕೊಳಿ ಸಾಕಾಣಿಕೆ ಮಾಡುತ್ತಿದ್ದೀರೋ ಎಂಬುದನ್ನು ನಿರ್ಧರಿಸಿಕೊಳ್ಳಬೇಕು. ಬ್ರಾಯ್ಲರ್ ಕೋಳಿ ಮಾಂಸಕ್ಕಾಗಿಯೇ ಬಳಸುತ್ತಾರೆ. ನಾಟಿ ಕೋಳಿ ಮಾಂಸ ಮತ್ತು ಮೊಟ್ಟೆಗಾಗಿ ಸಾಕಬಹುದು. ಇದರಲ್ಲಿಯೂ ಸಹ ಉತ್ತಮ ತಳಿಯ ಆಯ್ಕೆ ಮುಖ್ಯವಾಗಿರುತ್ತದೆ.
ಸ್ವರ್ಣ ಧಾರಾ (Swarna Dhara):
ಸ್ವರ್ಣ ಧಾರಾ ಕೊಳಿಯೂ ಹೆಚ್ಚು ಹೆಸರು ಮಾಡಿದೆ. ಸ್ವರ್ಣಧಘಾರ ಕೋಳಿಯನ್ನು ಮಾಂಸ ಮತ್ತು ಮೊಟ್ಟೆಗಾಗಿ ಸಾಕಲಾಗುತ್ತದೆ. ಗಿರಿರಾಜ (Giriraja) ಕೋಳಿ ನಾಟಿ ಕೋಳಿಯಂತೆ ಕಾಣುತ್ತದೆ. ಗಿರಿರಾಜ ತಳಿಗೆ ಹೋಲಿಸಿದರೆ ಸ್ವರ್ಣಧಾರ ತಳಿಯು ಹಗುರ ದೇಹದ ತೂಕದೊಂದಿಗೆ ಗಾತ್ರದಲ್ಲಿ ಚಿಕ್ಕದಾಗಿರುತ್ತದೆ.
ಮಾಂಸದ ಕೋಳಿಗಳ ತಳಿಗಳು: ಕಾಬ್ ರಾಸ್, ಹಬ್ಬರ್ಡ್, ಅನಕ್-40, ಅನಕ್ 2000, ಕೆಗ್ ಬ್ರೋ, ಸ್ಟ್ರಾರ್ ಬ್ರೋ, ಐಟಿಬಿ 82, ಇತ್ಯಾದಿ.
ಮೊಟ್ಟೆ ತಳಿಗಳು: ಡಿಕಾಲ್ಡ್, ಬಿವಿ-300, ಕಿಸ್ಟೋನ್, ಪೂನಾವರ್ಲ, ಎಚ್ಎಚ್ 280, ಹೈಲೈನ್, ರಾಣಿಶೇವರ್, ಮೈಚಿಕ್ಸ್ ಇತ್ಯಾದಿ