ನಾಳೆ ಪಿಎಂ ಕಿಸಾನ್ ಹಣ ಬಿಡುಗಡೆ- ನಿಮ್ಮ ಹೆಸರು ಚೆಕ್ ಮಾಡಿ

Written by Ramlinganna

Published on:

Pmkisan money released tomorrow ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ನಾಳೆ 16ನೇ ಕಂತಿನ ಹಣ ದೇಶದ ಎಲ್ಲಾ ರೈತರ ಖಾತೆಗೆ ಏಕಕಾಲದಲ್ಲಿ ಜಮೆ ಮಾಡಲಾಗುವುದು.

ಹೌದು, ಕಳೆದ ಮೂರು ತಿಂಗಳಿಂದ ಕಾಯುತ್ತಿರುವ ರೈತರಿಗೆ ಇದು ಭರ್ಜರಿ ಗುಡ್ ನ್ಯೂಸ್ ಆಗಲಿದೆ. ಏಕೆಂದರೆ ಒಂದು ತಿಂಗಳ ಮೊದಲೇ ರೈತರ ಖಾತೆಗೆ ಪಿಎಂ ಕಿಸಾನ್ ಹಣ ಜಮೆ ಮಾಡಲಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ಪಿಎಂ ಕಿಸಾನ್ ಯೋಜನೆಯ 16ನೇ ಕಂತು ಜಮೆ ಮಾಡುವುದಿತ್ತು. ಏಪ್ರೀಲ್ ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಹಾಗೂ ಮುಂದಿನ ತಿಂಗಳು ಚುನಾವಣೆ ದಿನಾಂಕ ಘೋಷಣೆ ಆಗಲಿದೆ. ಹಾಗಾಗಿ ಒಂದು ತಿಂಗಳ ಮೊದಲೇ ರೈತರಿಗೆ ಭರ್ಜರಿ ಗುಡ್ ನ್ಯೂಸ್ ಸಿಗಲಿದೆ.

Pmkisan money released tomorrow ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಿಲಿದೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಹಾಗೂ ಅರ್ಹತೆ ಪಡೆದ ರೈತರೆಲ್ಲರಿಗೂ ಪಿಎಂ ಕಿಸಾನ್ ಹಣ ಜಮೆಯಾಗಲಿದೆ. ಇದರೊಂದಿ ಇಕೆವೈಸಿ ಯಾರು ಯಾರು ಮಾಡಿಸಿದ್ದಾರೋ ಆ ರೈತರಿಗೆಲ್ಲರಿಗೂ ಪಿಎಂ ಕಿಸಾನ್ ಹಣ ಜಮೆಯಾಗಲಿದೆ.

Pmkisan money released tomorrow ಪಿಎಂ ಕಿಸಾನ್ ಈ ಪಟ್ಟಿಯಲ್ಲಿರುವ ರೈತರಿಗೆ 16 ನೇ ಕಂತಿನ ಹಣ ಜಮೆ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಹೆಸರು ಕೆಳಗಡೆ ನೀಡಲಾದ ಪಟ್ಟಿಯಲ್ಲಿದ್ದರೆ ಮಾತ್ರ ಜಮಯಾಗಲಿದೆ. ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ಫಲಾನುಭವಿಗಳ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ.

ಅಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಂತರ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಬ್ಲಾಕ್ ನಲ್ಲಿ ನಿಮ್ಮ ತಾಲೂಕು ಆಯ್ಕೆ ಮಾಡಿಕೊಂಡು ನಿಮ್ಮ ಊರು ಆಯ್ಕೆ ಮಾಡಿಕೊಳ್ಳಬೇಕು. ನಂತರ Get Report ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮೂರಿನಲ್ಲಿ ಯಾವ ಯಾವ ರೈತರು ಫಲಾನುಭವಿಗಳಿದ್ದಾರೆ ಎಂಬ ಪಟ್ಟಿ ಕಾಣಿಸುತ್ತದೆ. ಎ ದಿಂದ ಹೆಸರು ಆರಂಭವಾಗುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದರ ಪ್ರಕಾರ ಕೆಳಗೆ ನೀಡಲಾದ ಮುಂದಿನ ಪೇಜ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರನ್ನು ಸುಲಭವಾಗಿ ಚೆಕ್ ಮಾಡಬಹುದು.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿದ್ದ ಎಲ್ಲಾ ರೈತರಿಗೆ ಹಣ ಜಮೆಯಾಗುವುದೇ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿದ್ದ ಎಲ್ಲಾ ರೈತರಿಗೆ 16 ನೇ ಕಂತಿನ ಹಣ ಜಮೆಯಾಗುತ್ತದೆ ಎಂಬುದು ಸುಳ್ಳು.  ಏಕೆಂದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆಲ್ಲರಿಗೂ ಇಕೆವೈಸಿ ಮಾಡಿಸುವುದು ಕಡ್ಡಾಯವೆಂದು ಸೂಚಿಸಲಾಗಿತ್ತು.

ಇದನ್ನೂ ಓದಿ Vanshavali (ವಂಶಾವಳಿ) ಪ್ರಮಾಣ ಪತ್ರಕ್ಕೆ ಇಲ್ಲಿ ಅರ್ಜಿ ಸಲ್ಲಿಸಿ

ಯಾವ ಯಾವ ರೈತರು ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದ್ದಾರೋ ಆ ರೈತರಿಗೆ ಪಿಎಂ ಕಿಸಾನ್ ಯೋಜನೆಯ 16 ನೇ ಕಂತಿನ ಹಣ ಜಮೆಯಾಗಲಿದೆ. ಇಕೆವೈಸಿ ಮಾಡಿಸದೆ ಇರುವ ರೈತರಿಗೆ ಇನ್ನೂ ಕಾಲಾವಕಾಶವಿದೆ. ಹಾಗಾಗಿ ಕೂಡಲೇ  ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಒನ್ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಗೆ ನಿಮ್ಮ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಓಟಿಪಿ ಬೇಸ್ಡ್ ಇಕೆವೈಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ನಂಬರ್ ನಮೂದಿಸಿ ಸರ್ಚ್ ಮೇಲೆ ಕ್ಲಿಕ್ ಮಾಡಿ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದು ಕಾಣಿಸುತ್ತದೆ. ಇಕೆವೈಸಿ ಆಗಿದ್ದರೆ EKYC done successfully ಎಂಬ ಮೆಸೆಜ್ ಕಾಣಿಸುತ್ತದೆ.

Leave a Comment