ಕೋವಿಡ್ ಲಸಿಕೆಯ ದ್ವಿತಯೀ ಹಂತ ಇಂದಿನಿಂದ ಆರಂಭವಾಗಿದ್ದು, ಪ್ರಧಾನಮಂತ್ರಿ ನರೇಂದ್ರ ನರೇಂದ್ರ ಮೋದಿಯವರು (PM Narendra Modi took his first dose of covid-19 vaccine) ಇಂದು ಲಸಿಕೆ ಪಡೆದರು.
ನವದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ ಕೋವಿಡ್-19 ಲಸಿಕೆಯ ಮೊದಲ ಡೋಸ್ ಪಡೆದರು. ಈ ಬಗ್ಗೆ ಟ್ವಿಟ್ ನಲ್ಲಿ ಬರೆದುಕೊಂಡ ಅವರು, ಏಮ್ಸ್ ನಲ್ಲಿ ನಾನು ಮೊದಲ ಬಾರಿಗೆ ಕೋವಿಡ್-19 ಲಿಸಿಕೆಯನ್ನು ತೆಗೆದುಕೊಂಡಿದ್ದೇನೆ. ಲಸಿಕೆಗೆ ಅರ್ಹರಾದ ಎಲ್ಲರೂ ಲಸಿಕೆ ಪಡೆದು ಭಾರತವನ್ನು ಕೋವಿಡ್ ಮುಕ್ತ ದೇಶವನ್ನಾಗಿ ಮಾಡಬೇಕೆಂದು ಮನವಿ ಮಾಡಿದ್ದಾರೆ. ಕೋವಿಡ್-19 ವಿರುದ್ಧ ನಮ್ಮ ವೈದ್ಯರು ಹಾಗೂ ವಿಜ್ಞಾನಿಗಳು ಅಲ್ಪಾವಧಿಯಲ್ಲಿಯೇ ನಡೆಸಿದ ಕಾರ್ಯಾಚರಣೆ ಅಸಾಧಾರಣವಾದದ್ದು, ಅರ್ಹರಿರುವ ಎಲ್ಲರೂ ಲಸಿಕೆಹಾಕಿಸಿಕೊಳ್ಳಿ. ನಾವೆಲ್ಲರೂ ಜೊತೆಯಾಗಿ ಭಾರತವನ್ನು ಕೋವಿಡ್- 19 ಮುಕ್ತವಾಗಿಸೋಣ ಎಂದರು.
ಕೋವಿಡ್ ಲಸಿಕೆಯ ದ್ವಿತೀಯ ಹಂತ ಮಾ. 1 ರಿಂದ ಆರಂಭವಾಗಲಿದ್ದು, 60 ವರ್ಷ ಮೇಲ್ಪಟ್ಟವರು ಲಸಿಕೆ ಪಡೆಯಬಹುದು. ಬೇರೆ ರೋಗಗಳನ್ನು ಹೊಂದಿರುವ, 2022 ರ ಜನವರಿ 1 ಕ್ಕೆ 45 ವರ್ಷ ತುಂಬುವವರು ಮತ್ತು ಈಗಾಗಲೇ 45 ದಾಟಿದವರು ಕೂಡ ನೋಂದಣಿಗೆ ಅರ್ಹರಾಗಿರುತ್ತಾರೆ.
ದೇಶಾದ್ಯಂತ 27 ಕೋಟಿ ಜನರಿಗೆ ಚುಚ್ಚುಮದ್ದು ನೀಡುವ ಗುರಿಯನ್ನು ಹೊಂದಲಾಗಿದ್ದು, ಅಭಿಯಾನಕ್ಕೆ ವೇಗ ನೀಡುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಿಗೂ ಲಸಿಕೆ ನೀಡಲು ಸರ್ಕಾರ ಅವಕಾಶ ಕಲ್ಪಿಸಿದೆ. ಪ್ರತಿ ಡೋಸೇಜಿಗೆ ಗರಿಷ್ಟ 250 ರೂಪಾಯಿ ಶುಲ್ಕ ನಿಗದಿಮಾಡಲಾಗಿದೆ. ಭಾರತ್ ಯೋಜನೆಯಡಿ 10 ಸಾವಿರಕ್ಕಿಂತ ಹೆಚ್ಚು ಸರ್ಕಾರಿ ಕೇಂದ್ರ ಹಾಗೂ ಸಿಜಿಎಚ್ಎಸ್ ಗುರುತಿಸಿರುವ 60 ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿ ಸಿಗಲಿದೆ.