ನಿಮಗೇಕೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿಲ್ಲ?

Written by By: janajagran

Updated on:

PM Kisan not receive click here ಪಿಎಂ ಕಿಸಾನ್ 9ನೇ ಕಂತಿನ ಹಣ ಆಗಸ್ಟ್ ತಿಂಗಳಲ್ಲಿ ಜಮೆಯಾಗುತ್ತದೆ. ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರ ಖಾತೆಗೆ 8 ಕಂತಿನ ಹಣ ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಆದರೆ ಇತ್ತೀಚೆಗೆ ಸುಮಾರು 40 ಲಕ್ಷ ರೈತರ ಖಾತೆಗೆ ವಿವಿಧ ಕಾರಣಗಳಿಂದ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿಲ್ಲ. ಇದಕ್ಕೆ ಹಲವಾರು ಕಾರಣಗಳಿವೆ.

ಪಿಎಂ ಕಿಸಾನ್ ಯೋಜನೆಯ ಹಣ ಯಾವ ಕಾರಣಕ್ಕೆ 40 ಲಕ್ಷ ರೈತ ಖಾತೆಗೆ ಸೇರಿಲ್ಲ ಎಂಬುದರ ಮಾಹಿತಿ ಇಲ್ಲಿದೆ.ಯ ರೈತರು ಅರ್ಜಿ ಸಲ್ಲಿಸುವಾಗ, ಸಲ್ಲಿಸಿದ ನಂತರ ಮಾಡಿರುವ ಕೆಲವು ಸಣ್ಣ-ಪುಟ್ಟ ತಪ್ಪುಗಳಿಂದಾಗಿ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತಿಲ್ಲ. ಅದು ಆಧಾರ್ ಸಂಖ್ಯೆ ತಪ್ಪಾಗಿ ನಮೂದಿಸಿರಬಹುದು, ಮೊಬೈಲ್ ಸಂಖ್ಯೆ ತಪ್ಪಾಗಿರಬಹುದು ಅಥವಾ ಬ್ಯಾಂಕ್ ಖಾತೆಯೊಂದಿಗೆ ಆಧಾರ್-ಪ್ಯಾನ್ ಸಂಖ್ಯೆಯನ್ನು ಲಿಂಕ್ ಮಾಡಿರದೇ ಇರಬಹುದು ಇಲ್ಲವೇ ನೀವು ನೀಡಿರುವ ಬ್ಯಾಂಕ್ ಖಾತೆ ವಿವರಗಳು ತಪ್ಪಾಗಿರಬಹುದು. ಹೀಗೆ ವಿವಿಧ ಕಾರಣಗಳಿಂದಾಗಿ ರೈತರ ಖಾತೆಗೆ ಹಣ ಜಮೆಯಾಗಿಲ್ಲವೆಂದು ಸ್ವತಃ ಕೇಂದ್ರ ಸರ್ಕಾರವೇ ಹೇಳಿಕೆ ನೀಡಿದೆ.

PM Kisan not receive click here ಪಿಎಂ ಕಿಸಾನ್ ಜಮೆ  ವಿಫಲವಾಗಲು ಕಾರಣಗಳು

ಪಿಎಂ ಕಿಸಾನ್ ಯೋಜನೆಯಡಿ ರೈತರು ಅರ್ಜಿ ಸಲ್ಲಿಸುವಾಗ ನೀಡಿದ ಬ್ಯಾಂಕ್ ಖಾತೆ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ಬಹು ದಿನಗಳಿಂದ ಬಳಸಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಆ ಖಾತೆಯನ್ನು ಬ್ಯಾಂಕ್, ‘ನಿಷ್ಕ್ರಿಯ ಖಾತೆ’ ಎಂದು ತೀರ್ಮಾನಿಸಿ ಸ್ಥಗಿತಗೊಳಿಸಿರುತ್ತದೆ. . ಐಎಫ್‌ಎಸ್‌ಸಿ ಕೋಡ್ ತಪ್ಪಾಗಿ ನಮೂದಿಸಿರಬಹುದು. ಈ ಕೋಡ್ ತಪ್ಪಾಗಿದ್ದರೆ, ಬ್ಯಾಂಕ್ ಖಾತೆ ಸಂಖ್ಯೆ ಸರಿಯಾಗಿದ್ದರೂ ಹಣ ವರ್ಗಾವಣೆ ಆಗುವುದಿಲ್ಲ. ಫಲಾನುಭವಿ ರೈತರ ಖಾತೆಯಲ್ಲಿ ವಾರ್ಷಿಕ ಇಂತಿಷ್ಟೇ ಹಣದ ವಹಿವಾಟು ಆಗಬೇಕು ಎಂಬ ಮಿತಿ ಇದೆ. ಆ ಮಿತಿ ಮೀರಿ ವಹಿವಾಟು ನಡೆದಿದ್ದರೆ ಪಿಎಂ ಕೃಷಿ ಸಮ್ಮಾನ್ ನಿಧಿಯ ಹಣ ಬರುವುದಿಲ್ಲ. ವಿವಿಧ ಕಾರಣಗಳಿಂದಾಗಿ ನ ಬ್ಯಾಂಕ್ ಖಾತೆ ಬ್ಲಾಕ್ ಆಗಿದ್ದರೆ ಅಥವಾ ನಿರ್ಬಂಧಿಸಲ್ಪಟ್ಟಿದ್ದರೆ ಗೌರವ ಧನ ಖಾತೆಗೆ ಬರುವುದಿಲ್ಲ. . ಆಧಾರ್ ಸಂಖ್ಯೆ ತಪ್ಪಾಗಿದ್ದರೆ ಇಲ್ಲವೇ ಸಕ್ರಿಯವಾಗಿರದ ಆಧಾರ್ ಸಂಖ್ಯೆ ನೀಡಿದ್ದರೂ ಪಿಎಂ ಕಿಸಾನ್ ಸಮ್ಮಾನ ನಿಧಿ ರೈತರ ಖಾತೆಗೆ ಸೇರುವುದಿಲ್ಲ. ಆದ್ದರಿಂದ ಮೊದಲು ನಿಮ್ಮ ಆಧಾರ್ ಸಂಖ್ಯೆಯನ್ನು ಆಕ್ಟಿವೇಟ್ ಮಾಡಿಸಿಕೊಳ್ಳಿ ಬಳಿಕ ಈ ಕೆಳಗೆ ನೀಡಿರುವ ವಿಧಾನ ಅನುಸರಿಸಿ ಆಧಾರ್ ಸಂಖ್ಯೆ ಅಪ್‌ಡೇಟ್ ಮಾಡಿ.

ಇದನ್ನೂ ಓದಿ ನಿಮ್ಮ ಜಮೀನಿನ ಮ್ಯಾಪ್ mobileನಲ್ಲಿ ಡೌನ್ಲೋಡ್ ಮಾಡಿ

ಪಿಎಂ ಕಿಸಾನ್ ಯೋಜನೆಯಡಿ ಫಲಾನುಭವಿಯಾಗಲು ರೈತರು ಈಗಾಗಲೇ ಅರ್ಜಿ ಸಲ್ಲಿಸಿ ಪಿಎಂ ಕಿಸಾನ್ ಹಣ ಜಮೆಯಾಗದಿದ್ದರೆ ನಿಮ್ಮ ಆಧಾರ್ ಕಾರ್ಡ್ ಮತ್ತೊಮ್ಮೆ ನಮೂದಿಸಿ ಸೇವ್ ಮಾಡಿಕೊಳ್ಳಿ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ವೆಬ್‌ಸೈಟ್ https://pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

ವೆಬ್ ಪೇಜ್ ನ ಬಲಗಡೆಯಿರುವ ‘ಫಾರ್ಮರ್ಸ್ ಕಾರ್ನರ್’ ಕೆಳಗಡೆ ಎಡಿಟ್ ಆಧಾರ್ ಫೇಲಿಯರ್ ರಿಕಾರ್ಡ್ ಮೇಲೆ ಕ್ಲಿಕ್ ಮಾಡಬೇಕು.  ನಂತರ ಓಪನ್ ಆಗುವ ಪುಟದಲ್ಲಿ ಆಧಾರ್ ಸಂಖ್ಯೆ ಸರಿಪಡಿಸಿ ಸೇವ್ ಮಾಡಿಕೊಳ್ಳಬೇಕು. ಅಥವಾ

https://pmkisan.gov.in/UpdateAadharNoByFarmer.aspx

ಈ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ವೆಬ್ ಪೇಜ್ ಓಪನ್ ಆಗುತ್ತದೆ. ಆಧಾರ್ ನಂಬರ್ ನಮೂದಿಸಿದ ನಂತರ ಇಮೇಜ್ ಟೆಕ್ಸ್ಟ್ ಕೋಡ್ ನಮೂದಿಸಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಿ ಕೇಳಿದ ಮಾಹಿತಿ ಭರ್ತಿ ಮಾಡಿ ಸೇವ್ ಮಾಡಿಕೊಳ್ಳಬೇಕು.

ಈಗಾಗಲೇ ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಫಲಾನುಭವಿಗಳ ಲಿಸ್ಟ್ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರದಿಂದ ಅಪ್ರೂವಲ್ ಸಹ ಆಗಿದೆ. ಈ 9ನೇ ಕಂತಿನ ಫಲಾನುಭವಿಗಳ ಸ್ಟೇಟಸ್ ನೋಡಲು ಈ  ಲಿಂಕ್

https://pmkisan.gov.in/BeneficiaryStatus.aspx

ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲ್ ನಂಬರ್ ನಮೂದಿಸಿ 9ನೇ ಕಂತಿನ ಹಣದ ಸ್ಟೇಟಸ್ ಮೊಬೈಲ್ ನಲ್ಲಿಯೇ ಕ್ಷಣಾರ್ಧದಲ್ಲಿ ಚೆಕ್ ಮಾಡಿಕೊಳ್ಳಬಹುದು.

Leave a Comment