ಪಿಎಂ ಕಿಸಾನ್ ಹಣ ಈ ದಿನ ಜಮೆ: ಇಲ್ಲೇ ಚೆಕ್ ಮಾಡಿ

Written by Ramlinganna

Updated on:

Pm kisan date declared  : ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ 15ನೇ ಕಂತಿನ ಹಣ ಜಮೆಯಾಗುವ ದಿನಾಂಕ ನಿಗದಿಯಾಗಿದೆ. ಹೌದು, ಇದೇ ತಿಂಗಳು ನವೆಂಬರ್ 15 ರಂದು ಫಲಾನುಭವಿಗಳ ಖಾತೆಗೆ ಹಣ ಜಮೆಯಾಗಲಿದೆ.

ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿ ಪಿಎಂ ಕಿಸಾನ್ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುವುದು. ಹೌದು ಪ್ರತಿ ವರ್ಷ 6 ಸಾವಿರ ರೂಪಾಯಿ ಹಣವನ್ನು ಮೂರು ಕಂತುಗಳಲ್ಲಿ ಅಂದರೆ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2 ಸಾವಿರ ರೂಪಾಯಿಯಂತೆ ಒಟ್ಟು 6 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನಿಗೆ ಮುಟೇಶನ್ ಆಗಿದೆಯೇ? ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣವನ್ನು ಜುಲೈ ತಿಂಗಳ 27 ರಂದು ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಪ್ರತಿ ನಾಲ್ಕು ತಿಂಗಳಿಗೆ ರೈತರ ಖಾತೆಗೆ ಹಣ ಜಮೆ ಮಾಡಲಾಗುತ್ತಿರುವುದರಿಂದ ನವೆಂಬರ್ ತಿಂಗಳಿಗೆ ನಾಲ್ಕು ತಿಂಗಳಾಗುತ್ತದೆ. ಹಾಗಾಗಿ ಇದೇ ತಿಂಗಳು 27 ರಂದು ಜಮೆ ಮಾಡಲಾಗುವುದು ಎಂದು ಹೇಳಲಾಗುತ್ತಿತ್ತು. ಆದರೆ ನವೆಂಬರ್ 27 ರ ಮೊದಲೇ ಅಂದರೆ ನವೆಂಬರ್ 15 ರಂದೇ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ 15ನೇ ಕಂತಿನ ಹಣ ಜಮೆ ಮಾಡಲಾಗುವುದು ಎಂಬುದು ಮೂಲಗಳಿಂದ ತಿಳಿದು ಬಂದಿದೆ.

Pm kisan date declared  ಯಾರು ಯಾರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲಿದೆ?

ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಯಾರು ಯಾರಿಗೆ ಜಮೆಯಾಗಲಿದೆ ಎಂಬುದನ್ನು ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ರೆಜಿಸ್ಟರ್ ನಂಬರ್ ಹಾಕಿ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು, ನಿಮಗೆ ಮುಂದಿನ ಕಂತು ಜಮೆಯಾಗುತ್ತೋ ಇಲ್ಲವೋ ಎಂಬುದು ತಿಳಿಯುತ್ತದೆ.

ಸ್ಟೇಟಸ್ ಪೇಜ್ ನಲ್ಲಿಇಕೆವೈಸಿ ಎದುರು ಯಸ್, ಲ್ಯಾಂಡ್ ಸೀಡಿಂಗ್ ಯಸ್ ಹಾಗೂ ಬ್ಯಾಂಕ್ ಸ್ಟೇಟಸ್ ಸರಿಯಿದ್ದರೆ ಮಾತ್ರ ನಿಮಗೆ ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಜಮೆಯಾಗಲಿದೆ.

ಇಕೆವೈಸಿ ಆಗಿದೆಯೋ ಇಲ್ಲವೋ ಚೆಕ್ ಮಾಡಿ

ರೈತರು ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಸಹ ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ತೆರೆದುಕೊಳ್ಳುವ ಓಟಿಪಿ ಬೇಸ್ಡ್ ಇಕೆವೈಸಿ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.

ಪಿಎಂ ಕಿಸಾನ್ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ಚೆಕ್ ಮಾಡಿ

ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ರಾಜ್ಯ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ನಿಮ್ಮಊರು ಆಯ್ಕೆ ಮಾಡಿಕೊಂಡು ಗೆಟ್ ರಿಪೋರ್ಟ್ ಮೇಲೆ ಕ್ಲಿಕ್ ಮಾಡಬೇಕು. ನಂತರ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ ಚೆಕ್ ಮಾಡಿಕೊಳ್ಳಬೇಕು. ಹೆಸರು ಇದ್ದ ಮಾತ್ರಕ್ಕೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ, ಯೋಜನೆಗೆ ಎಲ್ಲಾ ಅರ್ಹತೆ ಪಡೆದರೆ ಮಾತ್ರ ಮುಂದಿನ ಕಂತು ಜಮೆಯಾಗುವ ಸಾಧ್ಯತೆಯಿದೆ.

Leave a Comment