PM kisan Helpline number : ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗಿಲ್ಲವೇ? ನಿಮಗೇಕೆ ಜಮೆಯಾಗಿಲ್ಲ? ಯಾರಿಗೆ ಕರೆ ಮಾಡಬೇಕು? ಎಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.
ಪಿಎಂ ಕಿಸಾನ್ ಯೋಜನೆಯ 17 ಕಂತುಗಳು ಇಲ್ಲಿಯವರೆಗೆ ದೇಶದ ಎಲ್ಲಾ ರೈತರ ಖಾತೆಗೆ ಜಮೆ ಮಾಡಲಾಯಿತು. ಹೌದು, 21 ಕೋಟಿ ರೂಪಾಯಿ ಹಣವನ್ನು 9 ಕೋಟಿ ರೈತರ ಖಾತೆಗೆ ಡಿಬಿಟಿ ಮೂಲಕ ಪಿಎಂ ಕಿಸಾನ್ ಹಣ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಬಹುತೇಕ ರೈತರಿಗೆ ಗೊತ್ತಿಲ್ಲ. ಆದರೆ ಬಿಡುಗಡೆಯಾದ ನಂತರವೇ ರೈತರಿಗೆ ಪಿಎಂ ಕಿಸಾನ್ ಹಣ ಜಮೆಯಾಗಿರುವ ಮಾಹಿತಿ ಸಿಕ್ಕಿದೆ.
ಪಿಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮೆಯಾಗಿದೆಯೇ? ಇಲ್ಲೇ ಚೆಕ್ ಮಾಡಿ ನೋಡಿ
ಹೌದು,ರೈತರು ಪಿಎಂ ಕಿಸಾನ್ ಸ್ಟೇಟಸ್ ನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡಲು ಈ
https://pmkisan.gov.in/BeneficiaryStatus_New.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವ ಪೇಜ್ ಓಪನ್ ಆಗುತ್ತದೆ. ಅಲ್ಲಿ Enter Registration No ನಲ್ಲಿ ರೈತರು ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಕಾಣುವ Captcha Code ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಮೊಬೈಲಿಗೆ ಓಟಿಪಿ ಸಂದೇಶ ಬರುತ್ತದೆ. ಆ ಓಟಿಪಿ ನಮೂದಿಸಿ ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.
ಬಹುತೇಕ ರೈತರಿಗೆ ಪಿಎಂ ಕಿಸಾನ್ ನೋಂದಣಿ ಸಂಖ್ಯೆ ನೆನಪಿರುವುದಿಲ್ಲ. ಯಾರಿಗೆ ನೋಂದಣಿ ಸಂಖ್ಯೆ ನೆನಪಿಲ್ಲವೋ ಆ ರೈತರು ಅಲ್ಲಿ ಕಾಣುವ Know your Registration ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಮೊಬೈಲ್ ನಂಬರ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ : ಪಹಣಿಗೆ Aadhaarcard link ಮೊಬೈಲ್ ನಲ್ಲಿ ಹೀಗೆ ಮಾಡಿ
ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ನಿಮ್ಮ ಓಟಿಪಿ ನಮೂದಿಸಿ ನಿಮಗೆ ಇಲ್ಲಿಯವರೆಗೆ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ನಿಮಗೆ ಹಣ ಜಮಯಾಗಿರುವುದನ್ನು ಚೆಕ್ ಮಾಡಬಹುದು.
ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೇ?
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿದ ರೈತರು ಇಕೆವೈಸಿ ಮಾಡಿಸಿರುವುದು ಕಡ್ಡಾಯವಾಗಿರುತ್ತದೆ. ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಮಾಡಿಸಿದ್ದರೆ ಮಾತ್ರ ರೈತರಿಗೆ ಮುಂದಿನ ಕಂತು ಜಮೆಯಾಗಲಿದೆ. ಇಲ್ಲದಿದ್ದರೆ ಮುಂದಿನ ಕಂತುಜಮೆಯಾಗುವುದಿಲ್ಲ.
ಪಿಎಂ ಕಿಸಾನ್ ಯೋಜನೆಗೆ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ರೈತರು ಚೆಕ್ ಮಾಡಲು ಈ
https://exlink.pmkisan.gov.in/aadharekyc.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಆಧಾರ್ ನಂಬರ್ ಹಾಕಿ ಇಕೆವೈಸಿ ಸ್ಟೇಟಸ್ ಚೆಕ್ ಮಾಡಬಹುದು.
ಪಿಎಂ ಕಿಸಾನ್ ಹಣ ಜಮೆಯಾಗಿಲ್ಲವೇ? PM kisan Helpline number ಕರೆ ಮಾಡಿ
ಪಿಎಂ ಕಿಸಾನ್ ಯೋಜನೆಯ 17 ನೇ ಕಂತು ಜಮೆಯಾಗಿಲ್ಲವೇ? ನಿಮಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತು ಜಮೆಯಾಗದಿದ್ದರೆ 155261 ಅಥವಾ 011 2430024300606 ಗೆ ಕರೆ ಮಾಡಿ ವಿಚಾರಿಸಬಹುದು. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಿಸಬಹುದು. ಅಥವಾ ಮೇಲಿನ ಸಹಾಯವಾಣಿ ನಂಬರ್ ಗೆ ಕರೆ ಮಾಡಬಹುದುು.