ರೈತರಿಗೆ ಸಂತಸದ ಸುದ್ದಿ. ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ ಹಣ ಇಂದು (ಮೇ 14 ರಂದು) ಬೆಳಗ್ಗೆ 11 ಗಂಟೆಗೆ (pm kisan fund will be release at 11) ರೈತರ ಖಾತೆಗೆ ಜಮೆಯಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೆಲವು ರೈತರೊಂದಿಗೆ ಸಂವಾದ ನಡೆಸಿ ದೇಶ ದ ಎಲ್ಲಾ ರೈತರ ಖಾತೆಗೆ ಏಕಕಾಲದಲ್ಲಿ 8ನೇ ಕಂತಿನ ಹಣ ಬಿಡುಗಡೆಮಾಡಲಿದ್ದಾರೆ.
ಪಿಎಂ ಕಿಸಾನ್ ಯೋಜನೆಯ 8 ನೇ ಕಂತಿನ ಹಣ ಏಪ್ರೀಲ್ ತಿಂಗಳಲ್ಲಿಯೇ ರೈತರ ಖಾತೆಗೆ ಜಮೆಯಾಗಬೇಕಿತ್ತು. ಆದರೆ ಈ ಸಲ ಕೆಲವು ರಾಜ್ಯಗಳಿಂದ ಕೇಂದ್ರಕ್ಕೆ ಮಾಹಿತಿ ತಲುಪಿಸಲು ವಿಳಂಬ ಮಾಡಿವೆ. ಹೀಗಾಗಿ 8ನೇ ಕಂತಿನ ಹಣ ಜಮೆಯಾಗಲು ತಡವಾಗಿದೆ..
. ದೇಶಾದ್ಯಂತ ಸುಮಾರು 9 ಕೋಟಿ ರೈತರ ಖಾತೆಗೆ 7ನೇ ಕಂತಿನ ಹಣ ಕಳೆದ ವರ್ಷ ಡಿಸೆಂಬರ್ 25 ರಂದು ಜಮೆ ಮಾಡಲಾಗಿತ್ತು. ಈಗ 8ನೇ ಕಂತಿನ ಹಣ ಇದೇ ವಾರದಲ್ಲಿ ರೈತರ ಖಾತೆಗೆ ಜಮೆಯಾಗಲಿದೆ. ಪಿಎಂ ಕಿಸಾನ್ ಯೋಜನೆಯ 8ನೇ ಕಂತಿನ ಸ್ಟೇಟಸ್ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲಿನಲ್ಲಿ ನೋಡಿಕೊಳ್ಳಬಹುದು.
ಸ್ಟೇಟಸ್ ನೋಡಲು ಈ ಮುಂದಿನ ಲಿಂಕ್ https://pmkisan.gov.in/beneficiarystatus.aspx ಮೇಲೆ ಕ್ಲಿಕ್ ಮಾಡಿದರೆ ಸಾಕು. ಅಲ್ಲಿ ನಿಮ್ಮ ಮೊಬೈಲ್ ನಂಬರ್ ಆಯ್ಕೆ ಮಾಡಿ ಮೊಬೈಲ್ ನಂಬರ್ ನಮೂದಿಸಿ ಗೋ ಡಾಟಾ ಮೇಲೆ ಕ್ಲಿಕ್ ಮಾಡಿದರೆ ಸಾಕು ಸ್ಟೇಟಸ್ ನೋಡಬಹುದು.
ಬೆನಿಫಿಷರಿ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ ಎಂಬುದನ್ನು ನೋಡಲು ಈ ಲಿಂಕ್ https://pmkisan.gov.in/Rpt_BeneficiaryStatus_pub.aspx ಮೇಲೆ ಕ್ಲಿಕ್ ಮಾಡಿ, ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನ ಹೊಸ beneficiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ, ಇಲ್ಲಿ A to z ಕ್ರಮವಾಗಿ ಹೆಸರು ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿ ಕೆಳಗಡೆ ಕ್ಲಿಕಿ ಮಾಡಿದರೆ ಸಾಕು ಅಲ್ಲಿ ನಿಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬಹುದು.
ಹೊಸ benificiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಅಥವಾ ಏನಾದರೂ ತಾಂತ್ರಿಕ ದೋಷವಿದ್ದರೆ ಈ ಕೆಳಗೆ ನೀಡಿದ ಸಹಾಯವಾಣಿ ನಂಬರಿಗೆ ಸಂಪರ್ಕಿಸಬಹುದು. ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.