PM kisan credit card ಇರುವ ರೈತರಿಗೆ 3 ಲಕ್ಷ ಸಾಲ

Written by By: janajagran

Updated on:

ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ ರೈತರ ಖಾತೆಗೆ 6000 ರೂಪಾಯಿಯನ್ನು ಮೂರು ಕಂತುಗಳಲ್ಲಿ ಹಾಕುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಆದರೆ ಪಿಎಂ ಕಿಸಾನ್ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿಯವರೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವುದು ಬಹುತೇಕ ರೈತರಿಗೆ ಗೊತ್ತಿರಲಿಕ್ಕಿಲ್ಲ. ಹೌದು, ಪಿಎಂ ಕಿಸಾನ್ ಫಲಾನುಭವಿಗಳಿಗೆ 3 ಲಕ್ಷ ರೂಪಾಯಿಯವರೆಗೆ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲಸೌಲಭ್ಯವಿದೆ. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಸಂಪೂರ್ಣ ಮಾಹಿತಿ.

ಕೇಂದ್ರ ಸರ್ಕಾರವು ಈಗ PM Kisan samman yojana ಹಾಗೂ kisan credit card ಅನ್ನು ಲಿಂಕ್ ಮಾಡಿದೆ. ಈ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗಲಿದೆ.  ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ರೈತರು ಒಂದು ವರ್ಷದವರೆಗೆ ಅಥವಾ ನಿಗದಿತ ಅವಧಿಯವರೆಗೆ ವಾರ್ಷಿಕ 7 ರ ದರದಲ್ಲಿ ಬಡ್ಡಿ ಸಿಗುತ್ತದೆ. ಒಂದು ವೇಳೆ ರೈತ ನಿಗದಿತ ಅವಧಿಗೂ ಮೊದಲೇ ರೈತ ಸಾಲ ಮರುಪಾವತಿ ಮಾಡಿದರೆ ಬಡ್ಡಿದರದಲ್ಲಿ ಶೇ. 3 ರಷ್ಟು ರಿಯಾಯಿತಿ ಪಡೆಯಬಹುದು. ಅಂದರೆ ರೈತರು ಕೇವಲ ಶೇ. 4 ರಷ್ಟು ಬಡ್ಡಿ ಪಾವತಿಸಿದಂತಾಗುತ್ತದೆ. ಬೆಳೆ ಸಾಲಗಳಿಗೆ ಮರುಪಾವತಿ ಅವಧಿಯನ್ನು ನಿರೀಕ್ಷಿತ ಕೊಯ್ಲು ಮತ್ತು ಮಾರುಕಟ್ಟೆ ಅವಧಿಗೆ ಅನುಗುಣವಾಗಿ ನೀಗದಿಪಡಿಸಲಾಗುವುದು.

ಇದನ್ನೂ ಓದಿ : ಭೂಮಿ ಸರ್ವೆ ಮಾಡುವ ಭೂ ಸರ್ವೆ ಆ್ಯಪ್ ; ಭೂ ಸರ್ವೆ ಆ್ಯಪ್ ಹೇಗೆ ಕೆಲಸ ಮಾಡಲಿದೆ? ಭೂ ಸರ್ವೆ ಆ್ಯಪ್ ದಿಂದ ಆಗುವ ಉಪಯೋಗಗಳ ಸಂಪೂರ್ಣ ಮಾಹಿತಿ

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯಡಿಯಲ್ಲಿ ಕೇವಲ ಕೃಷಿಕರಿಗೆ ಮಾತ್ರವಲ್ಲ, ಪಶುಸಂಗೋಪನೆ ಮತ್ತು ಮೀನುಗಾರಿಕೆಗೂ ಸಾಲ ನೀಡಲಾಗುವುದು.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆ  ಎಂದರೇನು (do you know  about PM kisan credit card)

ಕೇಂದ್ರ ಸರ್ಕಾರವು 1998 ರಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ ನ್ನು ಆರಂಭಿಸಿದೆ. ಈಗ ಈ ಯೋಜನೆಯನ್ನು ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೇಡಿಟ್ ಕಾರ್ಡ್ ಯೋಜನೆಯನ್ನು ಸೇರಿಸಿದ್ದಾರೆ. ಈ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಪ್ರದೇಶದಲ್ಲಿ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ವಿತರಿಸುವ ಅಭಿಯಾನವನ್ನು ಚಾಲನೆ ನೀಡಿದ್ದಾರೆ.

ಕಿಸಾನ್ ಕ್ರೇಡಿಟ್ ಕಾರ್ಡ್ ಗೆ ಯಾವ ರೈತರು ಅರ್ಹರು

ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳು ಕಿಸಾನ್ ಕ್ರೇಡಿಟ್ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಕಿಸಾನ್ ಕ್ರೇಡಿಟ್ ಕಾರ್ಡ್ ಮೂಲಕ ಸಾಲ ಪಡೆದ ರೈತರ ಬೆಳೆಗಳಿಗೆ ಬೆಳೆ ವಿಮೆ ಕೂಡ ಲಭ್ಯವಿದೆ.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಗೆ ಬೇಕಾಗುವ ದಾಖಲಾತಿಗಳು (Documents)

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್  ಪಡೆಯಲು ರೈತರು ವಿಳಾಸದ ಪುರಾವೆಗಾಗಿ ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್  ಹೊಂದಿರಬೇಕು. ಪ್ಯಾನ್ ಕಾರ್ಡ್, ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹೊಂದಿರಬೇಕು.  ಬ್ಯಾಂಕ್ ಪಾಸ್ಬುಕ್, ಜಮೀನಿನ ದಾಖಲೆಗಳು ಹೊಂದಿರಬೇಕು. ಬ್ಯಾಂಕಿನಿಂದ ಯಾವುದೇ ಸಾಲವನ್ನು ತೆಗೆದುಕೊಂಡಿಲ್ಲ ಎಂದು ಅಫಿಡಿವೆಟ್ ಮೂಲಕ ಬ್ಯಾಂಕಿಗೆ ತಿಳಿಸಬೇಕಾಗುತ್ತದೆ.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಒದಗಿಸುವ ಬ್ಯಾಂಕುಗಳು

ಕಿಸಾನ್ ಕ್ರೇಡಿಟ್ ಕಾರ್ಡನ್ನು ಸಾರ್ವಜನಿಕ ವಲಯದ ಬ್ಯಾಂಕುಗಳು, ,ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳು ನೀಡುತ್ತವೆ.

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಅರ್ಜಿ ಎಲ್ಲಿ ಸಿಗುತ್ತದೆ?

ಪಿಎಂ ಕಿಸಾನ್ ಕ್ರೇಡಿಟ್ ಕಾರ್ಡ್ ಬೇಕಾದರೆ ರೈತರು ಮೊದಲು  ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ ನ ಈ

https://pmkisan.gov.in/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ  ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ ಓಪನ್ ಆಗುತ್ತದೆ. ಅಲ್ಲಿ  ಬಲಗಡೆ ಡೌನ್ಲೋಡ್ ಕೆಸಿಸಿ ಫಾರ್ಮ್ (Download KCC Form)  ಮೇಲೆ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ https://pmkisan.gov.in/Documents/Kcc.pdf

ಲಿಂಕ್ ಮೇಲೆ ಕ್ಲಿಕ್ ಮಾಡಿ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿಕೊಂಡು ಅರ್ಜಿ ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸಿದ ನಂತರ ಬ್ಯಾಂಕಿನವರು ದಾಖಲಾತಿಗಳನ್ನು ಪರಿಶೀಲಿಸಿ 3 ಲಕ್ಷ ರೂಪಾಯಿಯವರೆಗೆ ಸಾಲ ನೀಡುತ್ತಾರೆ.

Leave a Comment