ರೈತರಿಗಿಲ್ಲಿದೆ ಸಂತಸದ ಸುದ್ದಿ. ರೈತರು ಈಗ ತಮ್ಮ ಜಮೀನಿನ ಸರ್ವೆ ಮಾಡಿಸಲು ಸರ್ವೆಯರ್ ಬರುವಿಕೆಗೆ ಕಾಯಬೇಕಿಲ್ಲ. ರೈತರೇ ಸ್ವಯಂ ತಮ್ಮ ಮೊಬೈಲ್ ನಲ್ಲಿ ಭೂಮಿಯನ್ನು ಸರ್ವೆ ಮಾಡಬಹುದು. ಹೌದು ಇಂತಹದೊಂದು ಹೊಸ ಆ್ಯಪ್ ಅತೀ ಶೀಘ್ರದಲ್ಲಿ ಬರಲಿದೆ.
ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಸರ್ಕಾರವು ಈ ಆ್ಯಪ್ ಜಾರಿಗೆ ತರಲು ಮುಂದಾಗಿದೆ. ಭೂ ಸರ್ವೆ ಇಲಾಖೆಯು ಈ ಮೊಬೈಲ್ ಆ್ಯಪ್ ನ್ನು ಸಿದ್ದಪಡಿಸಿದೆ. ಮುಂದಿನ ವರ್ಷದ ಆರಂಭದಲ್ಲಿಯೇ ರಾಜ್ಯದ ಜನತೆಗೆ ಈ ಆ್ಯಪ್ ಸಿಗಲಿದೆ. ಒಂದು ವೇಳೆ ಮುಂದಿನ ವರ್ಷದ ಜನವರಿ ತಿಂಗಳಲ್ಲಿಯೇ ಈ ಆ್ಯಪ್ ನ್ನು ಸರ್ಕಾರದ ಅಭಿವೃದ್ಧಿಪಡಿಸಿದರೆ ರಾಜ್ಯದಲ್ಲಿ ಮೊಬೈಲ್ ಭೂ ಸರ್ವೆ ಪದ್ಧತಿ ಅನುಷ್ಠಾನಗೊಳಿಸಿದ ರಾಜ್ಯ ಕರ್ನಾಟಕವಾಗಲಿದೆ.
ರೈತರೇ ಈಗ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ಮಾಡುತ್ತಿದ್ದಾರೆ. ಇದಕ್ಕೆ ಉತ್ತಮ ಪ್ರತಿಕ್ರಿಯೆಯೂ ಬರುತ್ತಿದೆ. ಹಾಗಾಗಿ ಸರ್ಕಾರವು ಭೂ ಸರ್ವೆ ಆ್ಯಪ್ ಬಿಡುಗಡೆ ತಯಾರಿ ನಡೆಸಿದೆ.
ಭೂ ಸರ್ವೆ ಹೇಗೆ ಕೆಲಸ ಮಾಡಲಿದೆ?
ಮೊಬೈಲ್ ಮೂಲಕ ಭೂ ಸರ್ವೆ ಆ್ಯಪ್ ಡೌನ್ಲೋಡ್ ಮಾಡಿಕೊಂಡ ನಂತರ ಜಮೀನಿನ ಸರ್ವೆ ನಂಬರ್ ಹಾಕಬೇಕು. ನಂತರ ಸೆಟಲೈಟ್ ಮೂಲಕ ಚಿತ್ರಿಸಿರುವ ಭೂಮಿಯ ಸ್ಕೆಚ್ ಬರುತ್ತದೆ. ಇಲ್ಲಿ ರೈತರು ಅಲ್ಲಿ ಕೇಳದ ಕೆಲವು ಅಗತ್ಯ ಮಾಹಿತಿಯನ್ನು ನಮೂದಿಸಿದನಂತರ ಭೂ ಸರ್ವೆ ಕಾರ್ಯ ಪೂರ್ಣಗೊಳಿಸಬಹುದು. ಮೊಬೈಲ್ ಆ್ಯಪ್ ಮೂಲಕ ಸರ್ವೆ ಮಾಡಿದ ನಂತರ ಭಊಮಿಯ ಸ್ಕೆಚ್ ಪಡೆಯುವ ವ್ಯವಸ್ಥೆಯೂ ಇರಲಿದೆ.
ಉಪಯೋಗಗಳು:
ರೈತರು ಮನೆಯಲ್ಲಿಯೇ ಕುಳಿತು ಸರ್ವೆ ಮಾಡಬಹುದು. ಭೂ ಸರ್ವೆ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗುತ್ತದೆ. ಆದರೆ ಸರ್ವೆಗೆ ಇಂತಿಷ್ಟು ಹಣವೆಂದು ಇನ್ನೂ ನಿರ್ಧಾರವಾಗಿಲ್ಲ. ಆಯಪ್ ಅಭಿವೃದ್ಧಿಪಡಿಸಿದ ನಂತರ ಜನವರಿ ತಿಂಗಳಲ್ಲಿ ನಿರ್ಧಾರವಾಗಲಿದೆ. ಪೋಡಿ, ಹದ್ದುಬಸ್ತು ಭೂ ಮಾಲಿಕರೇ ಚರ್ಚೆಯ ಮೂಲಕ ಸೌಹಾರ್ಧಯುತವಾಗಿ ಮಾಡಿಕೊಳ್ಳಬಹುದು.
ಯಾವುದಾದರೂ ವಿರೋಧ ತಕರಾರು ಇದ್ದಾಗ ಮಾತ್ರ ಸರ್ವೆಯರ್ ಗಳು ಬರುತ್ತಾರೆ. ವಿರೋಧ ವ್ಯಕ್ತವಾದರಷ್ಟೇ ಸರ್ವೆಯರ್ ಗಳ ಮೂಲಕ ಸರ್ವೆ ಮಾಡಿಸಿಕೊಳ್ಳಬಹುದು. ಆ ವ್ಯವಸ್ಥೆ ಮುಂದುವರೆಯಲಿದೆ. ಶುಲ್ಕ ಕಟ್ಟಿ ಸರ್ವೆಯರ್ ಗಳು ಬಂದಾಗ ಸರ್ವೆ ಆಗುತ್ತದೆ.
ಮೊಬೈಲ್ ಆ್ಯಪ್ ನಲ್ಲಿ ಸರ್ವೆ ಮಾಡಿಕೊಳ್ಳಲು ಆಧಾರ್ ಕಾರ್ಡ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು. ಸರ್ವೆ ಮಾಡಿಕೊಳ್ಳುವ ಇಬ್ಬರು ಮಾಲೀಕರ ಆಧಾರ್ ನಂಬರ್ ಬೇಕಾಗುತ್ತದೆ. ಇಲ್ಲದಿದ್ದರೆ ಭೂಮಿಯ ಸ್ಕೆಚ್ ಮೊಬೈಲ್ ನಲ್ಲಿ ಬರುವುದಿಲ್ಲ. ಹಾಗೂ ಸಮೀಕ್ಷೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ.
ಕೃಪೆ: ವಿಜಯವಾಣಿ