ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ನಿರೀಕ್ಷೆಯಲ್ಲಿರುವ ರೈತರಿಗೆ ಕೇಂದ್ರ ಸರ್ಕಾರ ಬಿಕ್ ಶಾಕ್ ನೀಡಿದೆ. ಈಗಾಗಲೇ ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಫಲಾನುಭವಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿರುವ ಎಷ್ಟೋ ರೈತರ ಹೆಸರನ್ನು ತೆಗೆದುಹಾಕಲಾಗಿದೆ. ಇದೇ ತಿಂಗಳು 10ನೇ ಕಂತಿನ ಹಣ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿರುವ ಸರ್ಕಾರವು ರೈತರಿಗೆ ಶಾಕ್ ನೀಡಿದೆ.

ಈಗಾಗಲೇ 9 ಕಂತಿನ ಹಣ ಪಡೆದ ರೈತರ ಹೆಸರನ್ನೂ ಸಹ ಕೈಬಿಡಲಾಗಿದೆ. ಫಲಾನುಭವಿಗಳ ಪಟ್ಟಿಯಲ್ಲಿರುವ ರೈತರಿಗೆ ಬಿಕ್ ಶಾಕ್ ನೀಡಿದಂತಾಗಿದೆ. ಫಲಾನುಭವಿಗಳ ಕೆಲವು ರೈತರ ಹೆಸರು ಕೈಬಿಟ್ಟಿರುವುದಕ್ಕೆ ಇನ್ನೂ ಕೇಂದ್ರ ಸರ್ಕಾರ ಕಾರಣ ನೀಡಿಲ್ಲ. ಆದರೆ ಪಿಎಂ ಕಿಸಾನ್ ಯೋಜನೆಯ ಪಟ್ಟಿಯಲ್ಲಿರುವ ರೈತರಿಗೆ ಕಾರಣ ಇನ್ನೂ ತಿಳಿಸಿಲ್ಲ. ಆದರೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಸ್ಟೇಟಸ್ ಚೆಕ್ ಮಾಡಲು ಹೋದರೆ installment payment stopped by state on request of District ಎಂಬ ಮೆಸೆಜ್ ಕಾಣುತ್ತಿದೆ. ಹೀಗಾಗಿ ಮೇಲೆ ಸಂದೇಶವಿರುವ ರೈತರಿಗೆ  10ನೇ ಕಂತಿನ ಹಣ ಈ ತಿಂಗಳ ಜಮೆಯಾಗುವುದಿಲ್ಲ.

ಮೊಬೈಲ್ ನಲ್ಲೇ ನಿಮ್ಮ ಹೆಸರು ಚೆಕ್ ಮಾಡಿ (How to check pm kisan status)

ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ತೆಗೆದುಹಾಕಲಾಗಿದೆಯೇ ಎಂಬುದನ್ನು ಚೆಕ್ ಮಾಡಲು ಈ https://pmkisan.gov.in/BeneficiaryStatus.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೆಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ಅಥವಾ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್   ಈ ಮೂರರಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿಕೊಂಡು ಸ್ಟೇಟಸ್ ನೋಡಬಹುದು. ಉದಾಹರಣೆಗೆ ಮೊಬೈಲ್ ನಂಬರ್ ನಮೂದಿಸಿದ ನಂತರ ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ. ಈಗಿನ ಕಂತಿನಲ್ಲಿ ನಿಮ್ಮ ಹೆಸರು ರದ್ದುಪಡಿಸಿದ್ದರೆ installment payment stopped by state on request of District ಎಂದು ಬರುತ್ತದೆ. ಒಂದು ವೇಳೆ ಅಲ್ಲಿ Rft signed by state for installment ಎಂದು ಇದ್ದರೆ ನಿಮಗೆ 10ನೇ ಕಂತಿನ ಹಣ ನಿಮ್ಮ ಖಾತೆಗೆ ಬರಲಿದೆ.

10ನೇ ಕಂತಿನ ಹಣದಲ್ಲಿ ಕೆಲವು ರೈತರ ಹೆಸರನ್ನು ಯಾಕೆ ಕೈಬಿಡಲಾಗಿದೆ ಎಂಬುದು ಇನ್ನೂವರೆಗೆ ಕಾರಣ ಗೊತ್ತಾಗಿಲ್ಲ. ಅತೀ ಶೀಘ್ರದಲ್ಲಿ ಕೇಂದ್ರ ಸರ್ಕಾರವು ಈ ಕುರಿತು ಹೇಳಿಕೆ ನೀಡುವ ಸಾಧ್ಯತೆಯಿದೆ. 10ನೇ ಕಂತಿನ ಹಣದ ನಿರೀಕ್ಷೆಯಲ್ಲಿರುವ ರೈತರಿಗೆ ಇದೊಂದು ದೊಡ್ಡ ಶಾಕ್ ನೀಡಿದಂತಾಗಿದೆ.

ಏನಿದು ಪಿಎಂ ಕಿಸಾನ್ ಯೋಜನೆ?

ಸಣ್ಣ ಮತ್ತು ಅತೀ ಸಣ್ಣ ರೈತರ ಆದಾಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2018 ರಲ್ಲಿ ಆರಂಭಿಸಿದೆ. 2 ಹೆಕ್ಟೇರ್ ಗಿಂತ ಕಡಿಮೆ ಕೃಷಿ ಭೂಮಿಯಿರುವ ಸಣ್ಣ ಮತ್ತು ಅತೀ ಸಣ್ಣ ರೈತರಿಗಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.  ಈ ಯೋಜನೆ ಆರಂಭವಾದಾಗಿನಿಂದ ಪ್ರತಿವರ್ಷ 3 ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಿಂತೆ ವರ್ಷಕ್ಕೆ 6 ಸಾವಿರ ರೂಪಾಯಿ ಜಮೆ ಮಾಡುತ್ತಿದೆ. ಇಲ್ಲಿಯವರೆಗೆ 9 ಕಂತುಗಳಲ್ಲಿ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗಿದೆ.

ಪಿಎಂ ಕಿಸಾನ್ ಯೋಜನೆಯನ್ನು ಪ್ರತಿವರ್ಷ ಏಪ್ರೀಲ್ ತಿಂಗಳಿಂದ ಜುಲೈ ತಿಂಗಳ ಅವಧಿಯಲ್ಲಿ ಒಂದು ಕಂತು, ಆಗಸ್ಟ್ ತಿಂಗಳಿಂದ ನವೆಂಬರ್ ತಿಂಗಳ ಅವಧಿಯಲ್ಲಿ ಎರಡನೇ  ಹಾಗೂ ಡಿಸೆಂಬರ್ ತಿಂಗಳಿಂದ ಮಾರ್ಚ್ ತಿಂಗಳಿನಲ್ಲಿ ಮೂರನೇ ಕಂತಿನ ಹಣ ಬಿಡುಗಡೆ ಮಾಡಲಾಗುತ್ತದೆ. ಈ ವರ್ಷದ ಎರಡನೇ ಕಂತನ್ನು ಆಗಸ್ಟ್ ತಿಂಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗಿತ್ತು. ಹಾಗಾಗಿ ಡಿಸೆಂಬರ್ ತಿಂಗಳ 15 ರೊಳಗೆ ರೈತರ ಖಾತೆಗೆ ಜಮೆ ಮಾಡುವ ಸಾಧ್ಯತೆಯಿದೆ. . ಆದರೆ ಈಗ ಕೆಲವು ರೈತರ ಹೆಸರನ್ನು ಕೈಬಿಡಲಾಗಿದೆ.

Leave a Reply

Your email address will not be published. Required fields are marked *