ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ 9ನೇ ಕಂತಿನ ಹಣ ಆಗಸ್ಟ್ ತಿಂಗಳಲ್ಲಿ ಜಮೆಯಾಗುವ ಸಾಧ್ಯತೆಯಿದೆ. ಇದಕ್ಕಾಗಿ ಈಗಾಗಲೇ 9ನೇ ಕಂತಿನ ಫಲಾನುಭವಿಗಳ ಲಿಸ್ಟ್ (PM Kisan Beneficiary List released) ಬಿಡುಗಡೆಯಾಗಿದೆ.

ರೈತರ ಆದಾಯ ದ್ವಿಗುಣಗೊಳಿಸುವ ಉದ್ದೇಶದಿಂದ ರೈತರಿಗೆ ಅಲ್ಪಸಹಾಯವಾಗಲೆಂದು ಕೇಂದ್ರ ಸರ್ಕಾರವು ಆರಂಭಿಸಿದ ಪಿಎಂ ಕಿಸಾನ್ ಯೋಜನೆ ಹೆಚ್ಚು ಪ್ರಸಿದ್ಧಿಹೊಂದಿದೆ. ಈಗಾಗಲೇ ದೇಶದ ರೈತರಿಗೆ 8 ಕಂತಿನ ಹಣ ಬಿಡುಗಡೆ ಮಾಡಿದೆ. ರೈತರ ಖಾತೆಗೂ ಹಣ ಜಮೆಯಾಗಿದೆ. ಈಗ ಶೀಘ್ರದಲ್ಲಿ 9ನೇ ಕಂತಿನ ಹಣ ಬಿಡುಗಡೆ ಮಾಡಲಾಗುವುದು. 9ನೇ ಕಂತಿನ ಲಿಸ್ಟ್ ಬಿಡುಗಡೆ ಮಾಡಲಾಗಿದೆ.  ಇದಕ್ಕಾಗಿ ರೈತರು ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

https://pmkisan.gov.in/Rpt_BeneficiaryStatus_pub.aspx  ಕ್ಲಿಕ್ ಮಾಡಿದಾಗ ವೆಬ್ ಪೇಜ್ ಓಪನ್ ಆಗುತ್ತದೆ ಇಲ್ಲಿ ನಿಮ್ಮ ರಾಜ್ಯ ಜಿಲ್ಲೆ ತಾಲೂಕು ಹಾಗೂ ಗ್ರಾಮವನ್ನು ಆಯ್ಕೆ ಮಾಡಿಕೊಂಡು ನ ಹೊಸ beneficiary ಲಿಸ್ಟ್ ನಲ್ಲಿ ನಿಮ್ಮ ಹೆಸರು ಇರುವುದನ್ನು ಚೆಕ್ ಮಾಡಿ, ಇಲ್ಲಿ A to z ಕ್ರಮವಾಗಿ ಹೆಸರು ಇರುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಆರಂಭವಾಗುತ್ತದೆ ಎಂಬುದನ್ನು ನೋಡಿ ಕೆಳಗಡೆ ಕ್ಲಿಕಿ ಮಾಡಿದರೆ ಸಾಕು ಅಲ್ಲಿ ನಿಮ್ಮ ಹೆಸರು ಇರುವುದನ್ನು ನೋಡಿಕೊಳ್ಳಬಹುದು.

ಸ್ಟೇಟಸ್ ಚೆಕ್ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು,  https://pmkisan.gov.in/beneficiarystatus.aspx  ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ಓಪನ್ ಆಗುತ್ತದೆ.  ಇಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ಒಂದು ವೇಳೆ ನೀವು ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಂಡರೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಗೆಟ್ ಡಾಟಾ (Get Data) ಮೇಲೆ ಕ್ಲಿಕ್ ಮಾಡಬೇಕು. ಆಗ ಇಲ್ಲಿಯವರೆಗೆ ನಿಮ್ಮ ಯಾವ ಖಾತೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ. ಹಾಗೂ ಈಗ ಜಮೆಯಾಗಲಿರುವ ಕಂತಿನ ಸ್ಥಿತಿಗತಿ ಅಂದರೆ ಸ್ಟೇಟಸ್ ತಿಳಿದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಕರೆ ಮಾಡಿ ಸಂಪರ್ಕಿಸಬಹುದು.

Leave a Reply

Your email address will not be published. Required fields are marked *