ಪಿಎಂ ಕಿಸಾನ್ ಯೋಜನೆ ಫಲಾನುಭವಿಗಳಿಗೆ 10ನೇ ಕಂತಿನ ಹಣ ಪಡೆಯಲು ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ತಂದಿದೆ. ಇನ್ನೂ ಮುಂದೆ ಇ-ಕೆವೈಸಿ ಪೂರ್ಣಗೊಳಿಸಿದರೆ ಮಾತ್ರ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ 10ನೇ ಕಂತಿನ ಹಣ ಸಿಗಲಿದೆ. ಇ-ಕೆವೈಸಿ ಪೂರ್ಣಗೊಳಿಸದಿದ್ದರೆ 10ನೇ ಕಂತಿನ ಹಣ ಸ್ಥಗಿತಗೊಳ್ಳಬಹುದು.
ಪಿಎಂ ಕಿಸಾನ್ ಯೋಜನೆಯ 10ನೇ ಕಂತಿನ ಹಣ ಡಿಸೆಂಬರ್ 15 ರೊಳಗೆ ರೈತರ ಖಾತೆಗೆ ಜಮೆಯಾಗುವ ಸಾಧ್ಯತೆಯಿದೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಕಳೆದ ವರ್ಷ ಡಿಸೆಂಬರ್ 25 ರಂದು ಪಿಎಂ ಕಿಸಾನ್ ಯೋಜನೆಯ ಹಣ ರೈತರ ಖಾತೆಗೆ ಜಮೆ ಮಾಡಿತ್ತು. ಈ ವರ್ಷ ಡಿಸೆಂಬರ್ 15 ರೊಳಗೆ ಜಮೆಯಾಗುವ ಸಾಧ್ಯತೆಯಿದೆ.
ಇ-ಕೆವೈಸಿ ಮಾಡಿಸುವುದು ಹೇಗೆ? How to do E-KYC?
ಪಿಎಂ ಕಿಸಾನ್ ಯೋಜನೆಯ ಪೋರ್ಟಲ್ ನಲ್ಲಿ ಆಧಾರ್ ಆಧಾರಿತ ಓಟಿಪಿ ದೃಢೀಕರಣಕ್ಕಾಗಿ ಕಿಸಾನ್ ಕಾರ್ನರ್ ನಲ್ಲಿರುವ ಇ-ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ ಮತ್ತು ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಹತ್ತಿರದ ಸಿ.ಎಸ್.ಸಿ ಕೇಂದ್ರಗಳಿಗೆ ಸಂಪರ್ಕಿಸಬೇಕೆಂದು ಪೋರ್ಟಲ್ ನಲ್ಲಿ ತಿಳಿಸಲಾಗಿದೆ. ಇ-ಕೆವೈಸಿಯನ್ನು ರೈತರು ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿಯೇ ಸ್ವತಃ ಮಾಡಿಕೊಳ್ಳಬಹುದು.
ರೈತರು ಈ https://www.pmkisan.gov.in/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಆಗ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ಓಪನ್ ಆಗುತ್ತದೆ. ಅಲ್ಲಿ E-KYC is Mandidory for pm kisan registered farmer ಎಂಬ ಸಂದೇಶ ಮೇಲ್ಗಡೆ ಸ್ಕ್ರಾಲ್ ಆಗುತ್ತಿರುತ್ತದೆ. ವೆಬ್ ಪೇಜ್ ಬಲಗಡೆ ಕಾಣುವ e-KYC New ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಥವಾ ಈ https://pmkisan.gov.in/aadharekyc.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ನಂಬರ್ ನಮೂದಿಸಿ ಇಮೇಜ್ ಟೆಕ್ಸ್ಟ್ ಬಾಕ್ಸ್ ನಲ್ಲಿ ಮುಂದುಗಡೆ ಕಾಣುವ ಕೋಡ್ ಹಾಕಿ ಸರ್ಚ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ಮೊಬೈಲ್ ನಂಬರ್ ನಮೂದಿಸಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಆಧಾರ್ ಕಾರ್ಡ್ ಇ-ಕೆವೈಸಿ ಆಗುತ್ತದೆ. ಒಂದು ವೇಳೆ ಇ-ಕೆವೈಸಿ Invalid ಅಂತ ಕಂಡರೆ ನೀವು ಹತ್ತಿರದ CSC ಸೆಂಟರ್ ಗೆ ಹೋಗಿ ಸರಿಪಡಿಸಬಹುದು. ಅಥವಾ ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ 155261 ಅಥವಾ 011 24300606 ಗೆ ಕರೆ ಮಾಡಬಹುದು.