ಪತಿ ಪತ್ನಿ 3 ಸಾವಿರ ಪಿಂಚಣಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

Written by By: janajagran

Updated on:

pm kisan farmer get 72000 ಪಿಎಂ ಕಿಸಾನ್ ಯೋಜನೆಯ 6 ಸಾವಿರ ರೂಪಾಯಿಯಲ್ಲೇ ಪ್ರತಿ ವರ್ಷ 72 ಸಾವಿರ ರೂಪಾಯಿ (pm kisan beneficiaries farmer get 72000)ಪಡೆಯಬಹುದು. ಈ ಸೌಲಭ್ಯಕ್ಕಾಗಿ ನೀವು ನಿಮ್ಮ ಜೇಬಿನಿಂದ ಒಂದು ರೂಪಾಯಿಯನ್ನು ಖರ್ಚು ಮಾಡಬೇಕಾಗಿಲ್ಲ. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪಿಎಂ ಕಿಸಾನ್ ನಿಧಿ ಯೋಜನೆಯಡಿ  ಪ್ರತಿವರ್ಷ ರೈತರಿಗೆ 6 ಸಾವಿರ ರೂಪಾಯಿ ಫಲಾನುಭವಿಗಳಿಗೆ ಸಿಗುತ್ತದೆ. ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಪ್ರತಿವರ್ಷ 6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆಯಾಗುತ್ತದೆ. ಇದೇ ಹಣವನ್ನು ಪಿಎಂ ಕಿಸಾನ್ ಮಾನ್ ಧನ್ ಯೋಜನೆಗೆ ವರ್ಗಾಯಿಸಿದರೆ ಪತಿ-ಪತ್ನಿ ಇಬ್ಬರೂ ಪ್ರತಿತಿಂಗಳ 3 ಸಾವಿರ ರೂಪಾಯಿ ಪಿಂಚಣಿ ಪಡೆಯಬಹುದು.

ಪಿಎಂ ಕಿಸಾನ್ ಮಾನ್ ಧನ್  ಯೋಜನೆ ಅಡಿ ರೈತರಿಗೆ ಪಿಂಚಣಿ ರೂಪದಲ್ಲಿ 60 ವರ್ಷ ವಯಸ್ಸು ತುಂಬಿದ ನಂತರ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಮಾಸಿಕ ಕನಿಷ್ಠ 3000 ಪಿಂಚಣಿ ಸಿಗಲಿದೆ. ಈ ಯೋಜನೆ ಸದುಪಯೋಗ ಪಡಿಸಿಕೊಳ್ಳಲು ಗರಿಷ್ಠ 2 ಎಕರೆ ಸಾಗುವಳಿ ಭೂಮಿ ಹೊಂದಿರುವ 18 ರಿಂದ 40 ವರ್ಷದ ಒಳಗಿನ ಎಲ್ಲ ರೈತರು  ನೋಂದಣಿ ಮಾಡಿಸಬಹುದು. ಒಂದು ವೇಳೆ ಫಲಾನುಭವ ಪಡೆಯಬೇಕಿದ್ದ ರೈತ ಸಾವನ್ನಪ್ಪಿದ್ದರೆ ಅವರ ಪತ್ನಿಗೆ ಶೇ. 50ರಷ್ಟು ಪ್ರಯೋಜನ ಸಿಗಲಿದೆ. ನೋಂದಣಿ ಮಾಡಿಸಿದ ನಂತರ ವಯಸ್ಸಿನ ಆಧಾರದ ಮೇಲೆ 55 ರಿಂದ 200 ರುಪಾಯಿಯವರೆಗೆ ಮಾಸಿಕ ಹಣ ಕಟ್ಟಬೇಕು. ರೈತರು ಪಾವತಿಸುವ ಹಣಕ್ಕೆ ಸಮನಾಗಿ ಕೇಂದ್ರ ಸರ್ಕಾರವು ಪಿಂಚಣಿ ನಿಧಿ ಪಾವತಿಸುತ್ತದೆ. ಕಟ್ಟಿದ ರೈತರಿಗೆ ಅರವತ್ತು ವರ್ಷದ ನಂತರ ಮಾಸಿಕ ಪಿಂಚಣಿ ಹಣವನ್ನು ನೀಡಲಾಗುವುದು.

ರೈತ ಸಾವನ್ನಪ್ಪಿದರೆ?  ಒಂದು ವೇಳೆ 60 ವರ್ಷಗಳ ಒಳಗಾಗಿ ರೈತ ಸಾವನ್ನಪ್ಪಿದರೆ ಪತ್ನಿಗೆ ಪ್ರತಿ ತಿಂಗಳು ರೂ. 1500 ಪಿಂಚಣಿ ಸಿಗಲಿದೆ. 60 ವರ್ಷಗಳ ನಂತರ ಪ್ರಧಾನ ಮಂತ್ರಿ ಕಿಸಾನ್ ಪಿಂಚಣಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 3 ಸಾವಿರ ರೂಪಾಯಿ ಸಿಗಲಿದೆ.

pm kisan farmer get 72000 ಪಿಂಚಣಿ ಪಡೆಯಲು ಮಾಸಿಕ ಪಾವತಿ ಎಷ್ಟು?

ಪಿಂಚಣಿದಾರರ ವಯಸ್ಸು 18 ಆದರೆ 60ನೇ ವರ್ಷದವರೆಗೆ ಪ್ರತಿ ತಿಂಗಳು 55 ರೂಪಾಯಿಯಂತೆ 60 ವರ್ಷ ತುಂಬುವವರೆಗೆ ಅಂದರೆ 48 ವರ್ಷ ಪ್ರತಿ ತಿಂಗಳು 55 ರೂಪಾಯಿಯಂತೆ 27720 ರೂಪಾಯಿ ಕಟ್ಟುತ್ತಾನೆ. ಕೇಂದ್ರ ಸರ್ಕಾರವು ಸರಿಸಮನಾಗಿ ಅಷ್ಟೇ ಹಣವನ್ನು ಕಟ್ಟುತ್ತದೆ. 60 ವರ್ಷ ತುಂಬಿದ ನಂತರ 3 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಾರೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಒಂದು ವೇಳೆ ರೈತ 40 ವರ್ಷದವರಾಗಿದ್ದರೆ ಪ್ರತಿ ತಿಂಗಳು 200 ರೂಪಾಯಿಯಂತೆ ವರ್ಷಕ್ಕೆ 2400 ರೂಪಾಯಿ ಕಟ್ಟುತ್ತಾನೆ. 20 ವರ್ಷಗಳವರೆಗೆ 48 ಸಾವಿರ ರೂಪಾಯಿ ಕಟ್ಟುತ್ತಾನೆ. ಕೇಂದ್ರ ಸರ್ಕಾರವು ಸರಿಸಮನಾಗಿ ಹಣ ಕಟ್ಟುತ್ತದೆ. 60 ವರ್ಷ ತುಂಬಿದ ರೈತನಿಗೆ ಪ್ರತಿತಿಂಗಳು 3 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ.

ಕೇಂದ್ರ ಸರ್ಕಾರವು ನೀಡುವ ಪಿಎಂ ಕಿಸಾನ್ ಯೋಜನೆಯ 6 ಸಾವಿರ ರೂಪಾಯಿ ಹಣದಲ್ಲಿ ಪತಿ ಪತ್ನಿಯರಿಬ್ಬರ ಪೆನ್ಷನ್ ಮಾಡಿಸಬಹುದು. ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ ನೀಡುತ್ತದೆ ಇದೇ ಹಣದಲ್ಲಿ ಪತಿ ಪತ್ನಿಯರಿಬ್ಬರೂ ಪಿಎಂ ಕಿಸಾನ್ ಮಾನ್ ಧನ್ ಯೋಜನೆಯಡಿ ಹಣ ಕಟ್ಟಿ ಪ್ರತಿತಿಂಗಳು ಇಬ್ಬರೂ 6 ಸಾವಿರ ಪಿಂಚಣಿ ಪಡೆಯಬಹುದು.

ಪ್ರಧಾನಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ನೋಂದಣಿ ಮಾಡಿಸಲು ಎಲ್ಲಾ ನಾಗರಿಕ ಸೇವಾ ಕೇಂದ್ರಗಳಲ್ಲೂ ಅವಕಾಶ ಕಲ್ಪಿಸಲಾಗಿದೆ. ಈ ಯೋಜನೆ ನೊಂದಣಿ ಮಾಡಲು ರೈತರು ನಾಗರಿಕ ಸೇವಾ ಕೇಂದ್ರಗಳಿಗೆ ಹೋಗಿ ನೋಂದಣಿ ಮಾಡಿಸಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ಕಿಸಾನ್ ಕಾಲ್ ಸೆಂಟರ್ ನಂಬರ್ 1800-180-1551 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ವಂತಿಕೆಯ ಚಾರ್ಟ್‍

ಪ್ರವೇಶ ವಯಸ್ಸು ವಯೋನಿವೃತ್ತಿಯ ವಯಸ್ಸು ಸದಸ್ಯರ ಮಾಸಿಕ ವಂತಿಕೆ (ರೂಗಳಲ್ಲಿ) ಕೇಂದ್ರ ಸರ್ಕಾರದ ಸಮಾನಾಂತರ ಮಾಸಿಕ ವಂತಿಕೆ (ರೂಗಳಲ್ಲಿ) ಒಟ್ಟು ಮಾಸಿಕ ವಂತಿಕೆ
18 60 55 55 110
19 60 58 58 116
20 60 61 61 122
21 60 64 64 128
22 60 68 68 136
23 60 72 72 144
24 60 76 76 152
25 60 80 80 160
26 60 85 85 170
27 60 90 90 180
28 60 95 95 190
29 60 100 100 200
30 60 105 105 210
31 60 110 110 220

Leave a Comment