PM kisan money credited ಚೆಕ್ ಮಾಡಿ

Written by Ramlinganna

Updated on:

Pm kisan money credited ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗಿಲ್ಲಿದೆ ಸಂತಸದ ಸುದ್ದಿ. ಕೊನೆಗೂ ಪಿಎಂ ಕಿಸಾನ್ ಹಣ ಜಮೆಗೆ ದಿನಾಂಕ ನಿಗದಿಯಾಗಿದೆ. ಹೌದು, ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ ಹಣ ರೈತರ ಖಾತೆಗೆ ಇದೇ ಸೆಪ್ಟೆಂಬರ್ 15 ರಂದು ಜಮೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಸಲ ಅಂದರೆ 12ನೇ ಕಂತಿನ ಹಣ ಕೆಲವು ರೈತರಿಗೆ ಜಮೆಯಾದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಲ್ಲ. ಏಕೆಂದರೆ ಇಕೆವೈಸಿ ಕಡ್ಡಾಯಗೊಳಿಸಿದ್ದರಿಂದ ಇಕೆವೈಸಿ ಮಾಡಿಸಿದವರಿಗೆ ಮಾತ್ರ ಜಮೆಯಾಗಲಿದೆ.

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಕೊಂಡ ಎಲ್ಲಾ ರೈತರಿಗೆ ಈ ಸಲ ಜಮೆಯಾಗಲ್ಲ.  ಯಾರು ಇಕೆವೈಸಿ ಮಾಡಿಸಿಲ್ಲವೋ ಅಂತಹ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆಯಾಗುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಇಕೆವೈಸಿ ಮಾಡಿಸಲು ರೈತರಿಗೆ ಮೂರ್ನಾಲ್ಕು ಸಲ ವಿಸ್ತರಣೆ ಮಾಡಲಾಗಿತ್ತು. ಆದರೂ ಇನ್ನೂ ಕೆಲವು ರೈತರು ಇಕೆವೈಸಿ ಮಾಡಿಸಿಲ್ಲ.ಇಕೆವೈಸಿ ಮಾಡಿಸದೇ ಇರುವ ರೈತರು ಸೆಪ್ಟೆಂಬರ್ 7 ರವರೆಗೆ ಇಕೆವೈಸಿ  ಮಾಡಿಸಬಹುದು.

Pm kisan money credited ಪಿಎಂ ಕಿಸಾನ್ ಯೋಜನೆಯ 12 ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 12ನೇ ಕಂತಿನ ಫಲಾನುಭವಿಗಳ ಪಟ್ಟಿಯಲ್ಲಿ ರೈತರ ಹೆಸರಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದು, ರೈತರು ಈ

https://pmkisan.gov.in/Rpt_BeneficiaryStatus_pub.aspx

ಲಿಂಕ್ ಮೇಲೆ ಕ್ಲಿಕ್ ಮಾಡಿ ಚೆಕ್ ಮಾಡಬಹುದು. ರಾಜ್ಯ  ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮ ಆಯ್ಕೆ ಮಾಡಿಕೊಂಡರೆ ಸಾಕು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿ ಓಪನ್ ಆಗುತ್ತದೆ.

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರಿಲ್ಲಿದ್ದರೆ ಈ ನಂಬರಿಗೆ ಕರೆ ಮಾಡಿ

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದಿದ್ದರೆ ಸಹಾಯವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಬಹುದು. ಪಿಎ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿ ನಂಬರ್ 155261 ಅಥವಾ 011 24300606 ಗೆ ಕರೆ ಮಾಡಿ ವಿಚಾರಿಸಬಹುದು.

ಇಕೆವೈಸಿ ಮಾಡಿಸದ ರೈತರಿಗೆ ಸೆಪ್ಟೆಂಬರ್ 7 ರವರೆಗೆ ಅವಕಾಶ

ಪಿಎಂ ಕಿಸಾನ್ ಇಕೆವೈಸಿ ಮಾಡಸಲು ಮತ್ತೇ ಸೆಪ್ಟೆಂಬರ್ 7 ರವರೆಗೆ ವಿಸ್ತರಿಸಲಾಗಿದೆ ಎಂದು ತರಿಕೇರಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಎಸ್.ಟಿ. ರಮೇಶ ತಿಳಿಸಿದ್ದಾರೆ. ಸೆಪ್ಟೆಂಬರ್ 7 ರೊಳಗೆ ಇಕೆವೈಸಿ ಮಾಡಿಸಿಕೊಂಡ ರೈತರಿಗೆ ಮಾತ್ರ ಸೆಪ್ಟೆಂಬರ್ 15 ರಂದು ಮಂದಿನ ಕಂತು ಬಿಡುಗಡೆ ಮಾಡಲಾಗುವುದು. ರೈತರು ತಮ್ಮ ಮೊಬೈಲ್ ನಲ್ಲೇ ಓಟಿಪಿ ಆಧಾರಿತ ಇಕೆವೈಸಿ ಮಾಡಿಕೊಳ್ಳಬಹುದು.

ಇದನ್ನೂ ಓದಿ : ಮೊಬೈಲ್ ನಲ್ಲೇ ಚೆಕ್ ಮಾಡಿ ನಿಮ್ಮ ಪಿಎಂ ಕಿಸಾನ್ ಇಕೆವೈಸಿ ಸ್ಟೇಟಸ್

ರೈತರು ತಮ್ಮ ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸಲು ಪಿಎಂ ಕಿಸಾನ್ ಪೋರ್ಟಲ್ ನಲ್ಲಿ ಫಾರ್ಮರ್ ಕಾರ್ನರ್ ಗೆ ಹೋಗಿ ಆಧಾರ್ ಸಂಖ್ಯೆ ಮತ್ತು ಆಧಾರ್ ನೊಂದಿಗೆ ನಮೂದಿಸಿ, ನಂತರ ತಮ್ಮ ಮೊಬೈಲಿಗೆ ಬರುವ ಓಟಿಪಿ ದಾಖಲಿಸಿದರೆ ಇಕೆವೈಸಿ ಯಶಸ್ವಿಯಾಗಿದೆ ಎಂದು ಬರುತ್ತದೆ. ಒಂದು ವೇಳೆ ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ ಜೋಡಣೆಯಾಗದಿದ್ದರೆ, ಹತ್ತಿರದ ಪೋಸ್ಟ್ ಆಫೀಸ್ ಅಥವಾ ಸಿಎಸ್.ಸಿ ಕೇಂದ್ರಗಳಿಗೆ ಹೋಗಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿಯನ್ನು ಸಹ ಮಾಡಿಸಬಹುದು ಎಂದು ತಿಳಿಸಿದ್ದಾರೆ.

ರೈತರು ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಬೇಕೆಂದರೆ ಇನ್ನೂ ನಾಲ್ಕು ದಿನಗಳಲ್ಲಿ ಇಕೆವೈಸಿಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಇಕೆವೈಸಿ  ಮಾಡಿಸಿಕೊಳ್ಳದಿದ್ದರೆ ರೈತರು ಮುಂದಿನ ಕಂತಿನಿಂದ ವಂಚಿತರಾಗುವ ಸಾಧ್ಯತೆಯಿದೆ.

Leave a Comment