ಕಡಿಮೆ ದರದಲ್ಲಿ ವಿವಿಧ ಜಾತಿಗಳ ಸಸಿಗಳು ಇಲ್ಲಿ ಸಿಗುತ್ತವೆ

Written by Ramlinganna

Published on:

plants available in subsidy : 2024-25ನೇ ಸಾಲಿಗೆ ಅರಣ್ಯ ಇಲಾಖೆಯ ಪ್ರಾದೇಶಿಕ ಅರಣ್ಯ ಕಲಬುರಗಿ ವಿಭಾಗದ ವತಿಯಿಂದ ಮಳೆಗಾಲದಲ್ಲಿ ನೆಡಲು ವಿವಿಧ  ಯೋಜನೆಗಳಡಿ ವಿವಿಧ ಜಾತಿಯ ಮತ್ತು ವಿವಿಧ ಅಳತೆಯ ಸಸಿಗಳನ್ನು ಪ್ರಾದೇಶಿಕ ಅರಣ್ಯ ವಲಯಗಳ ವಲಯ ಅರಣ್ಯ ಅಧಿಕಾರಿಗಳ ಕಚೇರಿಗಳಾದ ಆಳಂದ, ಚಿತ್ತಾಪುರ, ಚಿಂಚೋಳಿ, ಮತ್ತು ಕಲಬುರಗಿ ವಲಯಗಳ ಸಂಬಂಧಪಟ್ಟ ಸಸ್ಯಕ್ಷೇತ್ರಗಳಲ್ಲಿ ಬೆಳೆಸಲಾಗಿದ್ದು,  ಈ ಸಸಿಗಳು ವಿತರಿಸಲು ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಪಾಟೀಲ್ ಅವರು ತಿಳಿಸಿದ್ದಾರೆ.

Plants available in subsidy ವಿವಿಧ ಜಾತಿಯ ಸಸಿಗಳ ಅಳತೆ ಮತ್ತು ಸಸಿಗಳ ಸಂಖ್ಯೆ ವಿವರ

6 x 9 ಅಳತೆಯ 95,000 ಸಸಿಗಳು, 8 x 12 ಅಳತೆಯ 97627 ಸಸಿಗಳು, 10 x 16 ಅಳತೆಯ 99580 ಸಸಿಗಳು ಹಾಗೂ 14 x 20 ಅಳತೆಯ 50041 ಸಸಿಗಳು ಲಭ್ಯವಿರುತ್ತವೆ.

ಆರ್.ಎಶ್.ಪಿಡಿ ಯೋಜನೆಯಡಿ 6 x 9 ಅಳತೆಯ 95000 ಸಸಿಗಳು ಮತ್ತು 8 x 12 ಅಳತೆಯ 40000 ಸಸಿಗಳು ಇದ್ದು, ಇದರಲ್ಲಿ ನುಗ್ಗೆ, ಪೇರು, ಸಾಗುವನಿ, ಶ್ರೀಗಂಧ, ಕರಿಬೇವು, ಹುಣಸೆ, ಜಾತಿ ಸಸಿಗಳನ್ನು ಬೆಳೆಸಲಾಗಿದೆ. ಈ  ಸಸಿಗಳು ಪ್ರಾದೇಶಿಕ ಅರಣ್ಯ ವಲಯಗಳಲ್ಲಿ ಲಭ್ಯವಿರುತ್ತದೆ. 6 x 9 ಅಳತೆಯ ಪ್ರತಿ ಸಸಿಗೆ ದರ 3 ರೂಪಾಯಿ ಇರುತ್ತದೆ. 8 x 12 ಅಳತೆಯ ಪ್ರತಿ ಸಸಿಗೆ ದರ 6 ರೂಪಾಯಿ ಇರುತ್ತದೆ.ಸಾರ್ವಜನಿಕರು ವಲಯ ಕಚೇರಿಗಳಲ್ಲಿ ಸಸಿಗಳನ್ನು ಪಡೆಯಹುದಾಗಿದೆ.

ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಮತ್ತು ಸಾರ್ವಜನಿಕರಿಗೆ ತಾಲೂಕಿಗೆ ಸಂಬಂಧಪಟ್ಟವಲಯ ಕಚೇರಿಗಳಲ್ಲಿ ಫಲಾನುಭವಿಗಳ ರೈತರ ಜಮೀನಿನ ಪಹಣಿ, ಬ್ಯಾಂಕ್ ಪಾಸ್ ಬುಕ್, ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ನಂಬರ್, ಈ ಎಲ್ಲಾ ದಾಖಲಾತಿಗಳ್ನು ವಲಯ ಕಚೇರಿಗಳಲ್ಲಿ ನೀಡಿ ಸಸಿಗಳನ್ನು ಪಡೆಯಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ ನಿಮ್ಮ ಹಳೆಯ ಪಹಣಿ Mobileನಲ್ಲಿ ಡೌನ್ಲೋಡ್ ಮಾಡಿ

ಸಸಿಗಳನ್ನು ನೆಟ್ಟು ಬೆಳೆಸಿದಲ್ಲಿ1ನೇ ವರ್ಷದ, 2ನೇ ವರ್ಷದ, 3ನೇ  ವರ್ಷದ ಹಾಗೂ 3 ನೇ ವರ್ಷದ ಸಸಿಗಳಿಗೆ ನಿರ್ವಹಣೆ ಮಾಡಿದಲ್ಲಿ ಫಲಾನುಭವಿಗಳಿಗೆ ಬದುಕುಳಿದ ಸಸಿಗಳಿಗೆ ಪ್ರತಿ ವರ್ಷ ಸರ್ಕಾರ ನಿಗದಿಪಡಿಸಿದ ದರದಂತೆ ಪ್ರೋತ್ಸಾಹ ಧನ ನೀಡಲಾಗುವುದು. ರೈತರು ಮತ್ತು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು.  ಇವುಗಳನ್ನುಹೊರತುಪಡಿಸಿ ಅರಣ್ಯಇಲಾಖೆಯ ಪ್ರಾದೇಶಿಕ ಅರಣ್ಯ ವಲಯಗಳುಆಳಂದ, ಚಿತ್ತಾಪುರ, ಚಿಂಚೋಳಿ, ಚಿಂಚೋಳಿ ವನ್ಯಜೀವಿ,  ಮತ್ತು ಕಲಬರಗಿ ವಲಯಗಳಲ್ಲಿ ಆರ್.ಎಸ್.ಪಿ ಯೋಜನೆಯಡಿ ಅರಣ್ಯ ಪ್ರದೇಶದಲ್ಲಿ ಬೇವು, ಹೊಂಗೆ, ನೆರಳೆ ಚಳ್ಳೆ, ಮಹಾಗನಿ, ಸೀತಾಫಲ, ಮಾವು, ಸಿರಸ್, ಬಿದಿರು,  ಹೆಬ್ಬೇವು, ಅರಳಿ, ಸೀಮಾರೂಬಾ, ತಪ್ಸಿನಿ, ಬಿಲ್ವಪತ್ರೆ, ಕಮರ, ಚಿರಂಜಿ ಜಾತಿಯ ವಿವಿಧ ಅಳತೆಯ ಸಸಿಗಳನ್ನು ಬೆಳೆಸಲು 94 ಕಿ. ಮೀ ಮತ್ತು 479 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ನೆಡತೋಪು ನಿರ್ಮಾಣ ಮಾಡಲಾಗುತ್ತಿದೆ.

ಜಿಯುಎ (ನಗರ ಹಸೀರೀಕರಣ) ಮತ್ತು ಆರ್.ಎಸ್.ಪಿ ಯೋಜನೆಯಡಿ ಬೇವು, ಹೊಂಗೆ, ನೆರಳೆ, ಚಳ್ಳೆ, ಮಹಾಗನಿ, ಸೀತಾಫಲ, ಮಾವು, ಬಸರಿ, ಸಿರಸ್, ಬಿದಿರು, ಹೆಬ್ಬೇವು, ಅರಳಿ, ಸೀಮಾರೂಬಾ, ಕಮರ, ಚಿರಂಜಿ ಜಾತಿಯ ಸಸಿಗಳನ್ನು ಕಲಬುರಗಿ ಪಟ್ಟಣ, ಅಫಜಲ್ಪುರ ಪಟ್ಟಣ, ಜೇವರ್ಗಿ ಪಟ್ಟಣ  ಮತ್ತು ಚಿತ್ತಾಪುರ ಪಟ್ಟಣ ಬ್ಲಾಕ್ ಮತ್ತು ರಸ್ತೆಬದಿಗಳಲ್ಲಿ ನೆಡುತೋಪು ನಿರ್ಮಾಣ ಮಾಡಲಾಗುತ್ತಿದೆ.

ಎನ್.ಸಿಎಪಿ ಯೋಜನೆಯಡಿ ಕಲಬುರಗಿ ನಗರದಲ್ಲಿ ಹಸಿರು ಹೆಚ್ಚಿಸಲು ಹಸಿರು ಹೆಚ್ಚಿಸಲು, ನಗರ ಹಸೀರೀಕರಣಕ್ಕಾಗಿ ವಾಯು ಮಾಲಿನ್ಯ ತಡೆಯಲು ನಗರಾಭಿವೃದ್ಧಿ ಪ್ರಾಧಿಕಾರ ಕಲಬುರಗಿ ಇವರ ಸದುಪಯೋಗದೊಂದಿಗೆ ಕಲಬುರಗಿ ನಗರ ಪ್ರದೇಶದಲ್ಲಿ 4950 ಸಸಿಗಳನ್ನು ಹಚ್ಚಲು ನೆಡತೋಪು ನಿರ್ಮಾಣ ಮಾಡಲಾಗುತ್ತಿದ್ದು, ನೆಡುತೋಪು ನಿರ್ಮಾಣ ಅಭಿಯಾನಕ್ಕೆ ಅರಣ್ಯ ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ಕಲಬುರಗಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮನವಿ ಮಾಡಿದ್ದಾರೆ.

Leave a Comment