ಪಹಣಿ ಆಧಾರ್ ಕಾರ್ಡ್ ಲಿಂಕ್ ಮೊಬೈಲ್ ನಲ್ಲಿ ಹೀಗೆ ಮಾಡಿ

Written by Ramlinganna

Updated on:

Pahani Aadhaarcard link : ನಕಲಿ ಭೂ ದಾಖಲೆಗಳ ಹಾವಳಿ ತಡೆಗೆ ಪಹಣಿಗಳಿಗೆ ಆಧಾರ್ ಜೋಡಣೆ ಅಭಿಯಾನ ಆರಂಭಿಸಲಾಗಿದ್ದು, ಈವರೆಗೆ 15 ಲಕ್ಷ ಪಹಣಿ ಮಾಲಿಕರು ಆಧಾರ್ ಸಂಖ್ಯೆ ಜೋಡಣೆಗೆ ಓಪ್ಪಿಗೆ ಸೂಚಿಸಿದ್ದಾರೆ. ಅಭಿಯಾನದಲ್ಲಿ ಈವರೆಗೆ 8.80 ಲಕ್ಷ ಕೃಷಿ ಭೂಮಿ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಎಷ್ಟು ಜನ Pahani Aadhaarcard link ಮಾಡಿಸಿದ್ದಾರೆ?

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಕಲಿ ಭೂ ದಾಖಲೆಗಳ ಹಾವಳಿ ತಡೆ ಸೇರಿದಂತೆ ಇನ್ನಿತರ ಕ್ರಮಕ್ಕಾಗಿ ರಾಜ್ಯದ ಎಲ್ಲಾ ಪಹಣಿಗಳಿಗೆ ಅದರ ಮಾಲಿಕರ ಆಧಾರ್ ಸಂಖ್ಯೆ ಜೋಡಣೆ ಮಾಡು ಪ್ರಕ್ರಿಯೆ ಚಾಲನೆ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ 2.30 ಕೋಟಿ ಪಹಣಿ ಹಾಗೂ 3.90 ಕೋಟಿ ಪಹಣಿ ಮಾಲಿಕರಿದ್ದು, ಅವರೆಲ್ಲರ ಪಹಣಿಯೊಂದಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗುವುದು. ಸದ್ಯ 15 ಲಕ್ಷ ಪಹಣಿ ಮಾಲಿಕರು ಆಧಾರ್ ಸಂಖ್ಯೆ ಜೋಡಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ಈವರೆಗೆ 8.80 ಲಕ್ಷ ಕೃಷಿ ಭೂಮಿ ಪಹಣಿಗೆ ಆಧಾರ್ ಸಂಖ್ಯೆ ಜೋಡಣೆ ಮಾಡಲಾಗಿದೆ. ಈ ಕ್ರಮದಿಂದ ಭೂ ದಾಖಲೆಗಳ ನಕಲಿ ಸೃಷ್ಟಿ ಮಾಡುವುದಕ್ಕೆ ತಡೆಯಾಗಲಿದೆ. ಜತೆಗೆ ಬೆಳೆ ಪರಿಹಾರ ಸೇರಿದಂತೆ ಇನ್ನಿತರ ಸೌಲಭ್ಯವನ್ನು ವಿತರಿಸುವುದು ಸುಲಭವಾಗಲಿದೆ ಎಂದರು.

ಇದನ್ನೂ ಓದಿ ನಿಮ್ಮ ಜಮೀನಿನ ಭೂ ಮಾಲಿಕರ ವಿವರ ಮೊಬೈಲ್ ನಲ್ಲೇ ಚೆಕ್ ಮಾಡಿ

ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯದಲ್ಲಿನ ಬಾಕಿಯಿರುವಪೋಡಿ ಮತ್ತು ದುರಸ್ತ್ ಪ್ರಕರಣಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಮುಖವಾಗಿ ಸರ್ಕಾರ ಮಂಜೂರು ಮಾಡಿರುವ ಭೂಮಿಯ ಸರ್ವೆ ಸಂಖ್ಯೆ ಸರಿಪಡಿಸಲು ಅಗತ್ಯವಿರುವ ದುರಸ್ತ್ ಕಾರ್ಯವನ್ನು ಮಾಡುವುದಕ್ಕೂ ಮುನ್ನ ಪಹಣಿಯಲ್ಲಿ ಆಕಾರ್ ಬಂದ್ ಸರಿಪಡಿಸಬೇಕು. ಅದಕ್ಕಾಗಿ ಬಾಕಿ ಇರುವ 65 ಲಕ್ಷ ಆಕಾರ್ ಬಂದ್ ನ್ನು ಡಿಜಿಟಲೈಸ್ ಮಾಡಲು ಸೂಚಿಸಲಾಗಿದೆ. ಅದಾದ ನಂತರ ಸರ್ಕಾರದಿಂದ ಮಂಜೂರಾದ ಭೂಮಿಗಳ ದಾಖಲೆ ಪರಿಶೀಲಿಸಿ, ಪಹಣಿ, ಸಾಗುವಳಿ ಚೀಟಿ, ಪಕ್ಕಾ ದಾಖಲೆಗಳಿದ್ದರೂ ಪ್ರತ್ಯೇಕ ಸರ್ವೆ ಸಂಖ್ಯೆ ಇಲ್ಲದ ಭೂಮಿಗಳನ್ನು ಸರ್ವೆ ಮಾಡಿ ದುರಸ್ತ್ ಮಾಡಲಾಗುವುದು. ಈ ಕ್ರಮದಿಂದ 40 ವರ್ಷಗಳಿಂದ ಬಗೆಹರಿಯದ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದು ತಿಳಿಸಿದರು.

ಮೊಬೈಲ್ ನಲ್ಲಿPahani Aadhaarcard link

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಪಹಣಿ ಆಧಾರ್ ಲಿಂಕ್ ಮಾಡಲು ಈ

https://landrecords.karnataka.gov.in/service4

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ನಾಗರಿಕ ಸೇವೆಗಳು (Bhoomi Citizen Services) ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ಮೊಬೈಲ್ ನಂಬರ್ ಹಾಕಬೇಕು. ನಂತರ ಕ್ಯಾಪ್ಚ್ಯಾ ಕೋಡ್ ಹಾಕಿ Send OTP ಮೇಲೆ ಕ್ಲಿಕ್ ಮಾಡಬೇಕು.  ನಂತರ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ಬಾಕ್ಸ್ ನಲ್ಲಿ ಹಾಕಿ ಲಾಗಿನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೇಳಲಾದ ಅಗತ್ಯ ಮಾಹಿತಿ ಭರ್ತಿ ಮಾಡಿ ಲಿಂಕ್ ಮಾಡಬೇಕು.

ಸರ್ವೆಗಾಗಿ ಸರ್ವೆಯರ್ ನೇಮಕ

ಸರ್ವೆ ಕಾರ್ಯಕ್ಕೆವೇಗ ನೀಡುವ ಸಲುವಾಗಿ 991 ಪರವಾನಗಿ ಸರ್ವೆಯರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದರ ಜತೆಗೆ 364 ಸರ್ಕಾರಿ ಸರ್ವೆಯರ್ ಗಳ ನೇಮಕಾತಿಗೆ ಕೆಪಿಎಸ್.ಸಿ ಅಧಿಸೂಚನೆ ಪ್ರಕಟಿಸಿದೆ. ಸರ್ವೆ ಕೆಲಸದ ಮೇಲುಸ್ತುವಾರಿಗೆ 27 ಎಡಿಎಲ್ಆರ್ ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಅದರ ಜೊತೆಗೆ ಸರ್ವೇ ಕೆಲಸವನ್ನು ವೇಗವಾಗಿಸಲು ಎಲ್ಲಾ ತಾಲೂಕುಗಳಿಗೂ ಸರ್ವೆ ರೋವರ್ ಉಪಕರಣ ಖರೀದಿಸಲಾಗುತ್ತಿದೆ. ಒಟ್ಟು 372 ರೋವರ್ ಗಳನ್ನು ಖರೀದಿಸಲಾಗುತ್ತಿದ್ದು, ಅದಕ್ಕಾಗಿ 18 ಕೋಟಿ ರೂಪಾಯಿ ವ್ಯಯಿಸಲಾಗುತ್ತಿದೆ. ಹಾಗೆಯೇ ತಾಲೂಕುಗಳಿಗೆ ಟೋಟಲ್ ಸ್ಟೇಟಶನ್ ಸರ್ವೆ ಉಪಕರಣಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷ್ಣ ಭೈರೇಗೌಡ ಹೇಳಿದರು.

Leave a Comment