ಈ ಬೆಳೆಗಳಿಗೆ ವಿಮೆ ಮಾಡಿಸಲು ಉಳಿಯಿತು ಕೇವಲ ಐದು ದಿನ

Written by Ramlinganna

Updated on:

five days left to insure crops ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಕೆಲವು ಹಿಂಗಾರು ಬೆಳೆಗಳ ವಿಮೆ ಮಾಡಿಸಲು ಇನ್ನೂ ಐದು ದಿನ ಮಾತ್ರ ಅವಕಾಶವಿದೆ. ಐದು ದಿನದೊಳಗಾಗಿ ಬೆಳೆ ವಿಮೆಮಾಡಿಸಿ ವಿಮಾ ಸೌಲಭ್ಯ ಪಡೆಯಲು ಅರ್ಜಿ ಕರೆಯಲಾಗಿದೆ.

ಹೌದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಹಿಂಗಾರು ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವ ಕೊನೆಯ ದಿನಾಂಕ ಜಿಲ್ಲಾವಾರು ವ್ಯತ್ಯಾಸವಿದೆ. ಕೆಲವು ಜಿಲ್ಲೆಗಳಲ್ಲಿ ಕೆಲವು ಬೆಳೆಗಳಿಗೆ ವಿಮೆ ಮಾಡಿಸಲು ಎರಡು ದಿನ ಉಳಿದರೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ಅದೇ ಬೆಳೆಗಳಿಗೆ ಐದು ದಿನ ಬಾಕಿಯಿದೆ. ಹಾಗಾಗಿರೈತರು ತಮ್ಮ ಜಿಲ್ಲೆಗ ಬೆಳೆಗಳ ವಿಮೆ ಮಾಡಿಸಲು ಕೊನೆಯ ದಿನಾಂಕ ಯಾವುದೆಂಬುದನ್ನು ಚೆಕ್ ಮಾಡಿ ಬೆಳೆ ವಿಮೆ ಮಾಡಿಸಿಕೊಳ್ಳಬಹುದು.

five days left to insure crops ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನವಾಗಿದೆ?

ಬಾಗಲಕೋಟೆ ಜಿಲ್ಲೆಯಲ್ಲಿ ಗೋಧಿ, ಕುಸುಮೆ, ಸೂರ್ಯಕಾಂತಿ, ಮುಸುಕಿನ ಜೋಳ, ಈರುಳ್ಳಿ, ಜೋಳ, ಅಗಸೆ, ಕಡಲೆ  ಬೆಳೆಗಳಿಗೆ ವಿಮೆ ಮಾಡಿಸಲು ನವೆಂಬರ್ 30 ಕೊನೆಯ ದಿನವಾಗಿದೆ.  ಅದೇ ರೀತಿ ಆಲುಗಡ್ಡೆ, ಟೊಮ್ಯಾಟೋ ಬೆಳೆಗಳಿಗೆ ವಿಮೆ ಮಾಡಿಸಲು ಡಿಸೆಂಬರ್ 16 ಕೊನೆಯ ದಿನವಾಗಿದೆ.

ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸುವುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ?

ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಕೊನೆಯ ದಿನಾಂಕ ಯಾವುದೆಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಬೆಳೆ ವಿಮೆಯ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡ ನಂತರ  ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಬೆಳೆ ವಿಮೆ ಮಾಡಿಸಲು ಇನ್ನೂ ಎಷ್ಟುದಿನ ಉಳಿದಿದೆ ಎಂಬ ಮಾಹಿತಿ ಕಾಣುತ್ತದೆ. ಈ ಆಧಾರದ ಮೇಲೆ ರೈತರು ಬೆಳೆ ವಿಮೆ ಮಾಡಿಸಿಕೊಳ್ಳಬಹುದು.

ಉದಾಹರಣೆಗೆ ಗೋಧಿ ಬೆಳೆಗೆ ವಿಮೆಮಾಡಿಸಲು ಒಂದು ಎಕರೆಗೆ ರೈತರು 176 ರೂಪಾಯಿ ಪಾವತಿಸಬೇಕು. ಪ್ರಕೃತಿ ವಿಕೋಪದಿಂದಾಗಿ ಬೆಳೆ ನಷ್ಟವಾದರೆ ರೈತರಿಗೆ 11700 ರೂಪಾಯಿಯವರೆಗೆ ವಿಮೆಪರಿಹಾರ ನೀಡಲಾಗುವುದು. ಇದೇ ರೀತಿ ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಲು 157 ರೂಪಾಯಿ ಪಾವತಿಸಬೇಕು. ಬೆಳೆ ನಷ್ಟವಾದರೆ ರೈತರಿಗೆ 10500 ರೂಪಾಯಿಯವರೆಗೆ ವಿಮೆ ಹಣ ಪಾವತಿಸಲಾಗುವುದು.  ಜೋಳ ಬೆಳೆಗೆ ವಿಮೆ ಮಾಡಿಸಲು ರೈತರು 242 ರೂಪಾಯಿ ವಿಮೆ ಪಾವತಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಂಗೆ ಸೇರಿದಂತೆ 2688 ರೂಪಾಯಿಯವರೆಗೆ ವಿಮೆ ಹಣ ಪಾವತಿಸಬೇಕು. ಬೆಳೆ ಹಾನಿಯಾದಾಗ ರೈತರಿಗೆ 16100 ರೂಪಾಯಿಯವರೆಗೆ ಬೆಳೆ ವಿಮೆ ಹಣ ಪಾವತಿಸಲಾಗುವುದು. ಮೆಕ್ಕೆಜೋಳಕ್ಕೆ ಬೆಳೆ ವಿಮೆ ಮಾಡಿಸಲು 358 ರೂಪಾಯಿ ರೈತರು ಪಾವತಿಸಬೇಕು. ಕೇಂದ್ರ ಸರ್ಕಾರವು 1577 ರೂಪಾಯಿ ಪಾವತಿಸುತ್ತದೆ. ಅದೇ ರೀತಿ ರಾಜ್ಯ ಸರ್ಕಾರವು 1577 ರೂಪಾಯಿ ಪಾವತಿಸುತ್ತದೆ. ಒಟ್ಟು 3512 ರೂಪಾಯಿ ಬೆಳೆ ವಿಮೆ ಹಣ ಪಾವತಿಸಲಾಗುವುದು. ಬೆಳೆ ಹಾಳಾದಾಗ  ರೈತರಿಗೆ 23877 ರೂಪಾಯಿಯವರೆಗೆ ಬೆಳೆ ವಿಮೆ ಹಣ ಪಾವತಿಸಲಾಗುವುದು.

ಇದನ್ನೂ ಓದಿ ಮುಂಗಾರು ಹಂಗಾಮಿನ ಈ ಬೆಳೆಗಳಿಗೆ ವಿಮೆ ಹಣ ಬಿಡುಗಡೆ: ಯಾವ ಬೆಳೆಗೆ ಎಷ್ಟು ಜಮೆಯಾಗಲಿದೆ? 

ಬೆಳೆ ವಿಮೆ ಪಾವತಿಸುವ ಮುನ್ನ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಂಡು ಆ ವಿಮಾ ಕಂಪನಿಯ ಮೊಬೈಲ್ ನಂಬರ್ ಇಟ್ಟುಕೊಳ್ಳಬೇಕು.ಬೆಳೆ ಹಾನಿಯಾದಾಗ ರೈತರು ದೂರು ನೀಡಲು ಸಹಾಯವಾಗುತ್ತದೆ.

Leave a Comment