ರಾಜ್ಯದಲ್ಲಿ ಮೇ 22 ರಿಂದ 18-45 ವಯೋಮಾನದವರಿಗೆ ಕೊರೋನಾ ಲಸಿಕೆ ಅಭಿಯಾನ ಪುನಾರಂಭಿಸಲಾಗಿದೆ. ಈಗಾಗಲೇ ಲಾಕ್ಡೌನ್ ಜಾರಿಯಿರುವುದರಿಂದ ಹೊರಗಡೆ ಲಸಿಕಾ ಕೇಂದ್ರಗಳಿಗೆ ಹೋಗಿ ಹೆಸರು ನೋಂದಾಯಿಸಿಕೊಳ್ಳಲು ಸಮಸ್ಯೆಯಾಗುತ್ತಿದ್ದರೆ. ಮನೆಯಲ್ಲಿಯೇ ಕುಳಿತು ಲಸಿಕೆಗೆ ಮೊಬೈಲಿನಲ್ಲಿಯೇ (online register for covid vaccine) ಹೆಸರು ನೋಂದಾಯಿಸಿಕೊಳ್ಳಬಹುದು.
ಲಸಿಕಾ ಕೇಂದ್ರಗಳ ಬಳಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮವನ್ನು ಜಾರಿಗೆ ತಂದಿದೆ. ಆನ್’ಲೈನ್ ಮೂಲಕ ಹೆಸರು ನೊಂದಾಯಿಸಿದವರಿಗೆ ಲಸಿಕೆ ನೀಡಲಾಗುವುದು. ಈಗ 45 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ನಾಗರೀಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುತ್ತಿದೆ.
ಹೆಸರು ನೋಂದಾಯಿಸಿದ ನಂತರ ನಿಗದಿಪಡಿಸಿದ ಸ್ಥಳ ಹಾಗೂ ದಿನಾಂಕದಂದು ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೆಸರು ನೋಂದಾಯಿಸುವುದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ ಮಾಹಿತಿ.
https://www.cowin.gov.in/home ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ವೆಬ್ ಪೇಜ್ಓಪನ್ ಆಗುತ್ತದೆ.
ವೆಬ್ಸೈಟ್ನ ಬಲಭಾಗದ ಮೇಲ್ಗಡೆ ರೆಜಿಸ್ಟರ್/ಸೈನ್ ಇನ್ ಯುವರ್ ಸೆಲ್ಫ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಕ್ಲಿಕ್ ಮಾಡಿದ ನಂತರ ಮೊಬೈಲ್ ನಂಬರ್ ನಮೂದಿಸಬೇಕು. ಆಗ ನಿಮ್ಮ ಮೊಬೈಲಿಗೆ ಒಟಿಪಿ ಬರುತ್ತದೆ. ಆ ಒಟಿಪಿ ಸಂಖ್ಯೆಯನ್ನು ಹಾಕಿದ ಕೂಡಲೇ ಪೇಜ್ವೊಂದು ತೆರೆಯಲ್ಪಡುತ್ತದೆ. ಅದರಲ್ಲಿ ನಿಮ್ಮ ಹೆಸರು, ವಯಸ್ಸು, ಲಿಂಗ, ನೀವಿರುವ ಪ್ರದೇಶ, ಸಂಪೂರ್ಣ ವಿಳಾಸ, ಪಿನ್ ಕೋಡ್ಗಳನ್ನು ನಮೂದಿಸಬೇಕು.
ಇಷ್ಟಾದ ಬಳಿಕ ಲಸಿಕೆಯಿದೆಯೇ…. ನಿಮ್ಮ ಹತ್ತಿರದ ಲಸಿಕಾ ಕೇಂದ್ರಕ್ಕೆ ಯಾವಾಗ ಹೋಗಬೇಕೆಂಬುದರ ಮಾಹಿತಿಯೂ ಸಿಗುತ್ತದೆ. ನಿಮ್ಮ ಪ್ರದೇಶದ ಸುತ್ತಮುತ್ತ ಇರುವ ಆಸ್ಪತ್ರೆಗಳ ಲಿಸ್ಟ್ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ನಿಮಗೆ ಯಾವುದು ಸೂಕ್ತವೆನಿಸುತ್ತದೆಯೋ ಆ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಅಥವಾ ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಮೊಬೈಲ್ ನಂಬರ್ 9013151515 ನಿಮ್ಮ ಮೊಬೈಲಿಗೆ ಸೇವ್ ಮಾಡಿಕೊಳ್ಳಬೇಕು. ವ್ಯಾಟ್ಸ್ ಅಪ್ ನಲ್ಲಿ ನಿಮ್ಮ ಪ್ರದೇಶದ ಪಿನ್ ನಂಬರ್ ನಮೂದಿಸಿದರೆ ಸಾಕು, ನಿಮ್ಮ ಪ್ರದೇಶದಲ್ಲಿ ಲಸಿಕೆ ಇದೆಯೋ ಇಲ್ಲವೋ ಎಂಬ ಮಾಹಿತಿ ಗೊತ್ತಾಗುತ್ತದೆ. ಈ ಮೊಬೈಲ್ ನಂಬರ್ ಪಿನ್ ನಂಬರ್ ನಮೂದಿಸಿದ ತಕ್ಷಣ ನಿಮಗೆ ಒಂದು ಲಿಂಕ್ ಕಳಿಸಲಾಗುತ್ತದೆ. ಆ ಲಿಂಕ್ ಮೂಲಕವೂ ನೀವು ಲಸಿಕೆಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಒಂದು ಮೊಬೈಲ್ ನಂಬರ್ ನಿಂದ ನಾಲ್ಕು ಜನರ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ.