Marriage Registration Mobile ನಲ್ಲೇ ಅರ್ಜಿ ಹೀಗೆ ಸಲ್ಲಿಸಿ

Written by Ramlinganna

Updated on:

Marriage Registration Mobile ನಲ್ಲೇ ಸಲ್ಲಿಸಬಹುದು. ಹೌದು, ರಾಜ್ಯದಲ್ಲಿ ವಿವಾಹ ನೋಂದಣಿ ಪ್ರಕ್ರಿಯೆ ಇನ್ನೂ ಅತ್ಯಂತ ಸರಳವಾಗಲಿದೆ.  ಆನ್ಲೈನ್ ನಲ್ಲೇ ಅರ್ಜಿ ಸಲ್ಲಿಸಬಹಬುದು.

ಇನ್ನೂ ಮುಂದೆ ವಿವಾಹ ನೋಂದಣಿಯನ್ನು ರಿಜಸ್ಟ್ರಾರ್ ಕಚೇರಿಗೆ ಹೋಗದೆ ಮನೆಯಲ್ಲಿಯೇ ಕುಳಿತು ಆನ್ಲೈನ್ ನಲ್ಲಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅದು ಹೇಗೆ? ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ.

ರಾಜ್ಯದಲ್ಲಿ ಆನ್ಲೈನ್ ನಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಲು ಅನುವಾಗುವಂತೆ ಹಿಂದೂ ವಿವಾಹಗಳ ನೋಂದಣಿ (ಕರ್ನಾಟಕ) ತಿದ್ದುಪಡಿ ನಿಯಮಗಳು-2024 ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿಅನುಮೋದನೆ ನೀಡಲಾಗಿದೆ.

ಹೀಗಾಗಿ ಇನ್ನೂ ವಿವಾಹ ನೋಂದಣಿಗೆ ಕಡ್ಡಾಯವಾಗಿ ಉಪ ನೋಂದಣಿಗೆ ಕಡ್ಡಾಯವಾಗಿ ಉಪ ನೋಂದಣಿ ಅಧಿಕಾರಿಗಳ ಕಚೇರಿಗೆ ಹೋಗಬೇಕು ಎಂಬ ನಿಯಮವಿಲ್ಲ. ಕಾವೇರಿ 2.0 ತಂತ್ರಾಂಶದ ಮೂಲಕ ಆನ್ಲೈನ್ ನಲ್ಲೇ ವಿವಾಹ ನೋಂದಣಿ ಮಾಡಿಕೊಳ್ಳಬಹುದು. ವಧು-ವರ ಹಾಗೂ ಸಾಕ್ಷಿದಾರರ ಆಧಾರ್ ಕಾರ್ಡ್ ಸೇರಿ ಇತರೆ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಪ್ರಮಾಣ ಪತ್ರ ಪಡೆಯಬಹುದು.

ಈ ಬಗ್ಗೆ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಚಿವ ಎಚ್.ಕೆ. ಪಾಟೀಲ್, ವಿವಾಹ ನೋಂದಣಿಯ ಪ್ರಕ್ರಿಯೆಯನ್ನು ಸರಳಗೊಳಿಸಿ, ಜನಸ್ನೇಹಿಗೊಳಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿತ್ತು. ಇದರಂತೆ ಕಾವೇರಿ 2.0 ತಂತ್ರಾಂಶದ ಮೂಲಕ ಆನ್ಲೈನ್ ನೋಂದಣಿ, ಜತೆಗೆ ಗ್ರಾಮ ಪಂಚಾಯ್ತಿಗಳಲ್ಲಿನ ಬಾಪೂಜಿ ಸೇವಾ ಕೇಂದ್ರ ಹಾಗೂ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು. ಮುಂದೆ ವಿವಾಹ ನೋಂದಣಿ ಸರಳೀಕರಣವಾಗಲಿದೆ. ಈ ಹಿಂದೆ ನೋಂದಣಿಗೆ ಕಚೇರಿಗಳಿಗೆ ತೆರಳುವ ಅನಿವಾರ್ಯತೆ ಇತ್ತು. ಆದರೆ ಇನ್ನೂ ಆನ್ಲೈನ್ ಮೂಲಕವೇ ನೋಂದಣಿಗೆ ಅವಕಾಶವಾಗಲಿದೆ.

Marriage Registration Mobile ಮುಸ್ಲಿಂ ಕ್ರಿಶ್ಚಿಯನ್ನರಿಗೆ ಅನ್ವಯವಿಲ್ಲ

ಹಿಂದೂ ವಿವಾಹ ನೋಂದಣಿ ಅಧಿನಿಯಮವು ಹಿಂದೂಗಳು, ಬೌದ್ಧರು, ಸಿಖ್ಥರು, ಬ್ರಹ್ಮೋ, ಪ್ರಾರ್ಥನಾ ಅಥವಾ ಆರ್ಯ ಸಮಾಜದ ಅನುಯಾಯಿಗಳಿಗೆ ಅನ್ವಯಿಸುತ್ತದೆ. ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ ಅಥವಾ ಯಹೂದಿಗಳಿಗೆ ಈ ಕಾಯ್ದೆಯು ಅನ್ವಯಿಸುವುದಿಲ್ಲ.

ಆನ್ಲೈನ್ ನಲ್ಲಿ ರಿಜಿಸ್ಟರ್ ಮುದುವೆ ಸಾಧ್ಯವಿಲ್ಲ

ಈ ನಿಯಮ ವಿವಾಹ ನೋಂದಣಿಗಷ್ಟೇ ಸೀಮಿತವೇ ಹೊರತು ವಿಶೇಷ ಮದುವೆ ಕಾಯ್ದೆಯಡಿ ರಿಜಿಸ್ಟರ್ ಮ್ಯಾರೇಜ್(ನೋಂದಾಯಿತ ಮದುವೆ) ಆಗಲು ಅನ್ವಯವಾಗುವುದಿಲ್ಲ.

ಇದನ್ನೂ ಓದಿ : ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರಿ? ಇಲ್ಲೇ ಚೆಕ್ ಮಾಡಿ

ಉದಾಹರಣೆಗೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳಲು ಬಯಸಿರುವ ವಧು-ವರರಿಬ್ಬರೂ ನಿಗದಿಪಡಿಸಿ ನೋಟಿಸನ್ನು ದ್ವಿಪ್ರತಿಯಲ್ಲಿ ಭರ್ತಿ ಮಾಡಿ ನೋಂದಣಿ ಅಧಿಕಾರಿಗಳಿಗೆ ಸಲ್ಲಿಸಬೇಕು.

ನೋಟಿಸ್ ನೋಡಿದ 30 ದಿನಗಳೊಳಗೆ ಆಕ್ಷೇಪಣೆ ಬಾರದಿದ್ದಾಗ ಮುಂದಿನ 30 ದಿನಗಳೊಳಗೆ ಮೂವರು ಸಾಕ್ಷಿಗಳೊಂದಿಗೆ ಮದುವೆ ಅಧಿಕಾರಿಯ ಮುಂದೆ ಹಾಜರಾಗಿ ಸಹಿ ಮಾಡಬೇಕು.

Leave a Comment