Land EC ಜಮೀನಿನ ಇ.,ಸಿ (ಆಸ್ತಿ ಋಣಭಾರ ಪ್ರಮಾಣ ಪತ್ರ) ಪಡೆಯಲು ಸಬ್ ರಿಜಿಸ್ಟರ್ ಕಚೇರಿಯ ಮುಂದೆ ಹೋಗಿ ನಿಲ್ಲಬೇಕಿಲ್ಲ. ಮೊಬೈಲ್ ನಲ್ಲೇ ಪಡೆಯಬಹುದು.
ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಿ
ಹೌದು ಇಸಿಗಾಗಿ ನಾಲ್ಕೈದು ನೂರು ರೂಪಾಯಿ ಖರ್ಚು ಮಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ನಲ್ಲಿಯೇ ಇಸಿ ಪ್ರಮಾಣ ಪತ್ರ ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತ
Land EC ಆನ್ಲೈನ್ ಮೂಲಕ ಪಡೆಯುವುದು ಹೇಗೆ?
ಗೂಗಲ್ ನಲ್ಲಿ kaveri online service ಎಂದು ಟೈಪ್ ಮಾಡಬೇಕು. ಅಥವಾ
https://kaverionline.karnataka.gov.in/
ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ವೆಬ್ ಸೈಟ್ ಓಪನ್ ಆಗುತ್ತದೆ. ನೀವು ಅಕೌಂಟ್ ಕ್ರಿಯೇಟ್ ಮಾಡಿದ್ದರೆ ಲಾಗಿನ್ ಮತ್ತು ಪಾಸ್ವರ್ಡ್ ಹಾಗೂ ಇಮೇಜ್ ಕೋಡಿ ಹಾಕಿ ವೆಬ್ಸ್ಟೈಟ್ ಓಪನ್ ಮಾಡಬಹುದು. ಒಂದು ವೇಳೆ ನೀವು ನಿಮ್ಮ ಅಕೌಂಟ್ ಓಪನ್ ಮಾಡಿರದಿದ್ದರೆ ಲಾಗಿನ್ ಕೆಳಗಡೆ Register as new user ಮೇಲೆ ಕ್ಲಿಕ್ ಮಾಡಬೇಕು. ಇಲ್ಲಿ ನಿಮ್ಮ ಹೆಸರು ಸೇರಿದಂತೆ ವಿಳಾಸ, ನಗರ, ಪಿನ್ ಕೋಡ್, ಆಧಾರ್ ಕಾರ್ಡ್ ನಂಬರ್, ಈಮೇಲ್ ಅಡ್ರೆಸ್, ಮೊಬೈಲ್ ನಂಬರ್ ನಮೂದಿಸಿ ಐಡಿ ಕ್ರಿಯೇಟ್ ಮಾಡಿಕೊಂಡು ಲಾಗಿನ್ ಆಗಬೇಕು.
ಲಾಗಿನ್ ಆದಾಗ ಹೊಸ ವಿಂಡೋ ಓಪನ್ ಆಗುತ್ತದೆ. ಅಲ್ಲಿ ಸರ್ವಿಸೆಸ್ ಕೆಳಗಡೆ ಆನಲೈನ್ ಇಸಿ ಮೇಲೆ ಕ್ಲಿಕ್ ಮಾಡಬೇಕು. ಒಂದು ದಿನಕ್ಕೆ ಓರ್ವ ವ್ಯಕ್ತಿ 10 ಇಸಿಯನ್ನು ಪಡೆಯಬಹುದು. ಹೊಸ ಪೇಜ್ ನಲ್ಲಿ ಯಾವ ದಿನಾಂಕದಿಂದ ಯಾವ ದಿನಾಂಕದವರೆಗೆ ನಿಮಗೆ ಇಸಿ ಬೇಕೋ ಎಂಬುದನ್ನು ನಮೂದಿಸಬೇಕು. ನಂತರ ನಿಮ್ಮ ಜಿಲ್ಲೆ ಗ್ರಾಮ, ಹೋಬಳಿ ಪ್ರಾಪರ್ಟಿ ನಂಬರ್, ಸರ್ವೆ ನಂಬರ್, ಖಾತಾ ನಂಬರ್ ಆಫಷನ್ ಗಳಿರುತ್ತವೆ. ನಿಮ್ಮ ಆಸ್ತಿ ಯಾವುದಕ್ಕೆ ಬರುತ್ತದೆಯೋ ಅದನ್ನು ಕ್ಲಿಕ್ ಮಾಡಿ ಪ್ರಾಪರ್ಟಿ ಕಾಲಂನಲ್ಲಿ ಅಗ್ರಿಕಲ್ಚರ್ ನಾನ್ ಅಗ್ರಿಕಲ್ಚರ್ ನಮೂದಿಸಬೇಕು. ನಿಮ್ಮ ಜಮೀನಿನ ನಾಲ್ಕು ದಿಕ್ಕುಗಳಲ್ಲಿ ಏನೇನು ಇದೆ ಎಂಬುದನ್ನು ನಮೂದಿಸಬೇಕು. ಸರ್ವೆನಂಬರ್, ಅಥವಾ ಪ್ಲಾಟ್ ನಂಬರ್ ನಮೂದಿಸಬೇಕು. ಯೂನಿಟ್ ಆಫ್ ಮೇಸರ್ ನಲ್ಲಿ ಜಮೀನು ಪ್ಲಾಟ್ ಇದ್ದರೆ ಸೈಜ್, ಜಮೀನು ಗುಂಟೆಯಲ್ಲಿದ್ದರೆ ಗುಂಟೆ, ಎಕರೆಯಲ್ಲಿದ್ದರೆ ಎಷ್ಟು ಎಕರೆ ಎಂಬುದನ್ನು ನಮೂದಿಸಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿದಾಗ ಜಮೀನಿನ ಇಸಿ ಕಾಣುತ್ತದೆ. ಅಲ್ಲಿ ಇಸಿಯಲ್ಲಿ ಎಲ್ಲಾ ವಿವರವಿರುತ್ತದೆ.
ಒಂದು ವೇಳೆ ನಿಮಗೆ Digital sign ಇರುವ ಒರಿಜಿನಲ್ ಇಸಿ ಬೇಕಾದರೆ Proceed ಮೇಲೆ ಕ್ಲಿಕ್ ಮಾಡಿ ಇಸಿಯ ಹಣ 100 ರೂಪಾಯಿಯೊಳಗೆ ಇರುತ್ತದೆ. ಅದನ್ನು ಪೇ ಮಾಡಬೇಕು.
ಇದನ್ನೂ ಓದಿ: ನೀವು ಯಾವ ಯಾವ ಬ್ಯಾಂಕಿನಲ್ಲಿ ಎಷ್ಟೇಷ್ಟು ಸಾಲ ಪಡೆದಿದ್ದೀರಿ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
Land EC ಗಾಗಿ ಹಣ ಪಾವತಿ ಮಾಡಿದ ನಂತರ ಕಾವೇರಿ ವೇಬ್ ಸೈಟ್ ಓಪನ್ ಮಾಡಿ ಸೇವ್ಡ್ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ ಆನ್ಲೈನ್ ಇಸಿ ಅಪ್ಲಿಕೇಷನ್ ಮೇಲೆ ಕ್ಲಿಕ್ ಮಾಡಿ ಸ್ಟೇಟಸ್ ಚೆಕ್ ಮಾಡಬಹುದು. ಆನ್ಲೈನ್ ಮೂಲಕ ಈ ಪೇಮೆಂಟ್ ನಲ್ಲಿ ನಿಮ್ಮ ಬ್ಯಾಂಕ್ ನ ಮಾಹಿತಿ ಭರ್ತಿ ಮಾಡಿ ಹಣ ಪಾವತಿಸಬಹುದು. ಪೇ ರಿಸಿಪ್ಟ್ ನ್ನು ಪ್ರಿಂಟ್ ಸಹ ತೆಗೆದುಕೊಳ್ಳಬಹುದು. ನಂತರ ಸೆಂಡ್ ಫಾರ್ ಇ ಸೈನ್ ಮೇಲೆ ಕ್ಲಿಕ್ ಮಾಡಿದಾಗ ಅದರ ನಂಬರ್ ನಮೂದಿಸಬೇಕು. ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಓಟಿಪಿ ಹಾಕಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಅಪ್ಲಿಕೇಷನ್ ಯಶಸ್ವಿಯಾಗುತ್ತದೆ. ಹೀಗೆ ನೀವು ಸರಳವಾಗಿ ಮೊಬೈಲ್ ನಲ್ಲಿಯೇ ಇಸಿಯನ್ನು ಪಡೆಯಬಹುದು.