ಶೇ. 50 ರಿಂದ ಶೇ. 90 ರವರೆಗೆ ರೈತರಿಗೆ ಸಿಗುವ ಸಬ್ಸಿಡಿ

Written by Ramlinganna

Updated on:

National Horticulture Mission subsidy ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಕೃಷಿ ಚಟುವಟಿಕೆಗಳಿಗಾಗಿ ರೈತರಿಗೆ ಶೇ. 50 ರಿಂದ ಶೇ. 90 ರವರೆಗೆ ಸಬ್ಸಿಡಿ ನೀಡಲಾಗುವುದು. ಹೌದು, ರೈತರ ಆದಾಯ ಮತ್ತು ಜೀವನಮಟ್ಟ ಹೆಚ್ಚಿಸಲು ಕೇಂದ್ರ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಪರಂಪರಾಗತ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರೈತರಿಗೆ ಕೃಷಿ ಚಟುವಟಿಕೆಗೆ ನೀಡುವ ಸಬ್ಸಿಡಿಯಂತೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನಯಡಿಯಲ್ಲಿಯೂ ರೈತರಿಗೆ ಸಬ್ಸಿಡಿನೀಡಲಾಗುವುದು. ಹಾಗಾದರೆ ಯಾವ್ಯಾವುದಕ್ಕೆ ಸಬ್ಸಿಡಿ ನೀಡಲಾಗುತ್ತದೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಾಷ್ಟೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಪ್ಯಾಕ್ ಹೌಸ್ ನಿರ್ಮಾಣ, ಅಣಬೆ ಬೇಸಾಯ, ಸಾವಯವ ಕೃಷಿ, ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಸಹಾಯಧನ ನೀಡಲಾಗುವುದು.  ಹಣ್ಣುಗಳ ಮಾಸುವ ಘಟಕ, ಬೀಜೋತ್ಪಾದನೆಗೆ ಮೂಲ ಸೌಕರ್ಯ,  ಶೀತಲ ವಾಹನ ಖರೀದಿಗೂ ಸಹಾಯಧನ ನೀಡಲಾಗುವುದು. ಅದರಂತೆ ಯಾಂತ್ರೀಕರಣ ಯೋಜನೆಯಡಿಯಲ್ಲಿ ಹೆಚ್ಚಿನ ರೈತರು ಸಹಾಯಧನ ಪಡೆಯುತ್ತಿದ್ದಾರೆ.

National Horticulture Mission subsidy ಯಾಂತ್ರೀಕರಣ ಯೋಜನೆಯಡಿಯಲ್ಲಿ ಯಾವ ಯಾವ ಸೌಲಭ್ಯ ಸಿಗುತ್ತದೆ?

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ಯಾಂತ್ರೀಕರಣ ಕಾರ್ಯಕ್ರಮದಡಿ ರೈತ ಫಲಾನುಭವಿಗಳಿಗೆ ಟ್ಯಾಕ್ಟರ್, ಪವರ್ ಟಿಲ್ಲ, ಸ್ವಯಂ ಚಾಲಿತ ಕೃಷಿ ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುವುದು. ತೋಟಗಾರಿಕೆಯಲ್ಲಿ ಮಾನವ ಶಕ್ತಿಯ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಯಾಂತ್ರೀಕರಣವನ್ನು ಉತ್ತೇಜಿಸಲು ರೈತರಿಗೆ 20 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯವಿರುವ ಟ್ರ್ಯಾಕ್ಟರ್ಮತ್ತು 8 ಹೆಚ್.ಪಿ ವರೆಗಿನ ಪವರ್ ಟಿಲ್ಲರ್ ಖರೀದಿಗಾಗಿ ಸಹಾಯಧನ ನೀಡಲಾಗುವುದು.

ಭೂಮಿ ಸಿದ್ದತೆ, ಅಂತರ ಬೇಸಾಯ, ಸಸ್ಯ ಸಂರಕ್ಷಣೆ, ಗೊಬ್ಬರ, ತೋಟಗಾರಿಕೆ ಉತ್ಪನ್ನಗಳ ಮತ್ತು ಇತರೆ ಅವಶ್ಯಕ ಸಾಮಾಗ್ರಿಗಳನ್ನು ಸಾಗಿಸಲು ಟ್ರ್ಯಾಕ್ಟರ್, ಪವರ್ ಟಿಲ್ಲರ್ ಮತ್ತು ಟ್ರ್ಯಾಕ್ಟರ್ ಚಾಲಿತ ಇತರ ಅವಶ್ಯಕ ಉಪಕರಣಗಳನ್ನು ಖರೀದಿಸಲು ಸಹಾಯಧನ ನೀಡಲಾಗುವುದು.

ಇದನ್ನೂ ಓದಿ : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಸಣ್ಣಮತ್ತು ಮಧ್ಯಮ ವರ್ಗದ ರೈತರು ಹಾಗೂ ರೈತ ಮಹಿಳೆಯರಿಗೆ 20 ಹೆಚ್.ಪಿ ಗಿಂತ ಕಡಿಮೆ ಸಾಮರ್ಥ್ಯದ ಟ್ರ್ಯಾಕ್ಟರ್ ಗಳಿಗೆ ಹಾಗೂ 8 ಹೆಚ್ ಪಿ ವರಿಗಿನ ಪವರ್ ಟಿಲ್ಲರ್, ಸ್ವಯಂ ಚಾಲಿತ ತೋಟಗಾರಿಕೆ

ಯಂತ್ರಗಳಿಸಿ ಸಹಾಯಧನ ನೀಡಲಾಗುವುದು.

ಫಲಾನುಭವಿಗಳ ಅರ್ಹತೆ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲಿಚ್ಚಿಸುವ ರೈತರ ಹೆಸರಿನಲ್ಲಿ ಜಮೀನು ಇರಬೇಕು ಫಲಾನುಭವಿಯು ತನ್ನ ಕುಟುಂಬದ ತಂದೆ, ತಾಯಿ, ಹೆಂಡತಿ ಹಾಗೂ ಮಕ್ಕಳ ಹೆಸರಿನಲ್ಲಿರುವ ಪಹಣಿ ನೀಡಿದ್ದಲ್ಲಿ ಒಪ್ಪಿಗೆ ಪತ್ರ ಪಡೆದಿರಬೇಕು. ಒಪ್ಪಿಗೆ ಪತ್ರಕ್ಕೆ ಕಡ್ಡಾಯವಾಗಿ ನೋಟರಿ ಮಾಡಿಸಬೇಕು. ಗ್ರಾಮ ಲೆಕ್ಕಾಧಿಕಾರಿಗಳಿದ ದೃಢೀಕೃತ ವಂಶವೃಕ್ಷ ಲಗತ್ತಿಸಬೇಕು, ಮಹಿಳೆಯ ಹೆಸರಿನಲ್ಲಿ ಅರ್ಜಿ ಸಲ್ಲಿಸಿದರೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಫಲಾನುಭವಿಗೆ ಕಡ್ಡಾಯವಾಗಿ ಕನಿಷ್ಠ 1 ಹೆಕ್ಟೇರ್ ಜಮೀನು ಇರಬೇಕು. 0.50 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆದಿರಬೇಕು. ಈಗಾಗಲೇ ಸರ್ಕಾರದ ವಿವಿಧ ಯೋಜನೆಯಡಿ ಟ್ರ್ಯಾಕ್ಟರ್ ಸಹಾಯಧನ ಪಡೆದಿರುವ ಕುಟುಂಬಕ್ಕೆ ಮತ್ತೆ ಸಹಾಯಧನ ನೀಡುವುದಿಲ್ಲ. ಸಹಾಯಧನ ಪಡೆದಿರುವ ಟ್ರ್ಯಾಕ್ಟರ್, ಟ್ರ್ಯಾಕ್ಟರ್ ಚಾಲಿತ ಕೃಷಿ ಉಪಕರಣಗಳನ್ನು ಕನಿಷ್ಠ 5 ವರ್ಷಗಳ ಕಾಲ ಬೇರೆಯವರಿಗೆ  ಪರಭಾರೆ ಮಾಡಬಾರದು.

ರಾಜ್ಯದ ಆಯಾ ಜಿಲ್ಲೆಯ ತೋಟಗಾರಿಕೆ ಉಪ ನಿರ್ದೇಶಕರು (ಜಿಪಂ) ರವರು ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಯಾಂತ್ತೀಕರಣ ಕಾರ್ಯಕ್ರಮದ ಮಾರ್ಗಸೂಚಿ ಪ್ರಕಾರ ಅರ್ಹ ರೈತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿರುತ್ತದೆ. ಆಯಾ ಜಿಲ್ಲೆಯ ಪತ್ರಿಕೆಗಳಲ್ಲಿ ಹಾಗೂ ಸೂಚನಾ ಫಲಕದಲ್ಲಿ ಪ್ರಕಟಣೆ ಹೊರಡಿಸಿದಾಗ ರೈತರು ಅರ್ಜಿ ಸಲ್ಲಿಸಿ ಸೌಲಭ್ಯ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದು.

Leave a Comment