3 ಎಖರೆಗಿಂತ ಕಡಿಮೆ ಭೂಮಿಯಿರುವ ರೈತರಿಗೆ ಗುಡ್ ನ್ಯೂಸ್ ಇಲ್ಲಿದೆ

Written by Ramlinganna

Published on:

Mukyamantri Negilayogi scheme : ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಅಡಿಯಲ್ಲಿ ಸರ್ಕಾರದ ವತಿಯಿಂದಲೇ ಟ್ರ್ಯಾಕ್ಟರ್ ಗಳನ್ನು ಬಾಡಿಗೆಗೆ ಪಡೆದು ರೈತರ ಜಮೀನುಗಳಲ್ಲಿ ಉಚಿತವಾಗಿ ಉಳುಮೆ ಮಾಡಿಕೊಡಲಾಗುತ್ತದೆ. 3 ಎಕರೆ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ರೈತರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.

3 ಎಕರೆ ಕಡಿಮೆ ಕೃಷಿ ಭೂಮಿ ಹೊಂದಿರುವ ಬಡ ರೈತರಿಗೆ ಸರ್ಕಾರದಿಂದಲೇ ಉಳುವೆ ಮಾಡಲು ಮುಖ್ಯಮಂತ್ರಿ ನೇಗಿಲಯೋಗಿ ಯೋಜನೆ ಜಾರಿಗೆ ತರಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ ಸರ್ಕಾರ ನೂರು ದಿನ ಪೂರೈಸಿಸುತ್ತಿರುವ ಸಂದರ್ಭದಲ್ಲಿ ರೈತರು ಕಾರ್ಮಿಕರು ಹಾಗೂ ವಸತಿ ರಹಿತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನೂತನ ಕಾರ್ಯಕ್ರಮಗಳನ್ನು ಸರ್ಕಾರ ಘೋಷಿಸಿದೆ.

3 ಎಕರೆಗಿಂತ ಕಡಿಮೆ ಜಮೀನು ಇರುವ ರೈತರು ಜಮೀನುಗಳಲ್ಲಿ ಸರ್ಕಾರವೇ ಟ್ರ್ಯಾಕ್ಟರ್ ಗಳನ್ನು ಬಾಡಿಗೆ ಪಡೆದು ಉಚಿತವಾಗಿ ಉಳುಮೆ ಮಾಡಿಕೊಡಲಿದೆ. ಇಧರಿಂದ 59 ಲಕ್ಷ ರೈತರಿಗೆ ವರದಾನವಾಗಲಿದೆ. ಜಿಲ್ಲೆಗೊಂದರಂತೆ 31 ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲು ಉದ್ದೇಶಿಸಲಾಗಿದ್ದು ಇದಕ್ಕಾಗಿ 152 ಕೋಟಿ ರೂಪಾಯಿ ಅನುದಾನ ಮೀಸಲಿಟ್ಟಿದೆ.

ಕೃಷಿ ಇಲಾಖೆಯಿಂದ ಅನುಷ್ಠಾನದ ಜವಾಬ್ದಾರಿ ಹೊರಲಿದೆ. ಕೃಷಿಯಿಂದ ವಿಮುಕ್ತರಾಗುತ್ತಿರುವ ಬಡ ರೈತರಿಗೆ ಅನುಕೂಲವಾಗಲಿದೆ.

Mukyamantri Negilayogi scheme ಜಮೀನಿನ ಇ ಸ್ಕೆಚ್ ಪಡೆಯುವುದು ಹೇಗೆ?

ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲಿ ಜಮೀನಿನ ಇ ಸ್ಕೆಚ್ ಪಡೆಯಲು ಈ

https://www.landrecords.karnataka.gov.in/service2/RTC.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ Bhoomi Online Land Records View ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮಗೆ current Year, Old year, Mr, Mutation status, Khata Extract, Survey Document, Akarband, RTCwith Skecth, E chawadi  ಹಾಗೂ Survey Sketch ಕಾಣಿಸುತ್ತದೆ. ಅಲ್ಲಿ ನೀವು Survey Sketch ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಇನ್ನೊಂದು ಪೇಜ್ ತೆರೆದುಕೊಳ್ಳತ್ತದೆ. ಡಿಜಿಟೈಸ್ಡ್ ಸಮೀಕ್ಷೆ ನಕ್ಷೆ  ಪೇಜ್ ಓಪನ್ ಆಗುತ್ತದೆ. ಅಲ್ಲಿ  ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ  ಗ್ರಾಮ ಹುಡುಕಾಟ Village Search ಕಾಣಿಸುತ್ತದೆ. ಅಲ್ಲಿ ನೀವು ನಿಮ್ಮ ಊರನ್ನು ಟೈಪ್ ಮಾಡಬೇಕು. ಆಗ ಅದರ ಕೆಳಗಡೆ ನಿಮಗೆ ನಿಮ್ಮ ಊರು, ಹೋಬಳಿ, ತಾಲೂಕು ಹಾಗೂ ಜಿಲ್ಲೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ನಮೂದಿಸಬೇಕು. ನಂತರ ಸರ್ನಾಕ್  ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಹಿಸ್ಸಾ ನಂಬರ್ ನಮೂದಿಸಬೇಕು. ನಂತರ ಹುಡುಕು Search ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಕಾಣಿಸುತ್ತದೆ. ಅಲ್ಲಿ ನೀವು ನಮೂದಿಸಿದ ಸರ್ವೆ ನಂಬರಿನಲ್ಲಿ ಯಾರ ಯಾರ ಹೆಸರಿದೆ ಅವರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬ ಮಾಹಿತಿ ಕಾಣಿಸುತ್ತದೆ. ಅದರ ಕೆಳಗಡೆ ನಿಮಗೆ ಜಮೀನಿನ ಸ್ಕೆಚ್ ಕಾಣಿಸುತ್ತದೆ. ನಿಮ್ಮ ಜಮೀನಿನ ಆಕಾರ ಕಾಣಿಸುತ್ತದೆ. ಇದನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

ಜಮೀನಿನ ಸ್ಕೆಚ್ ಮ್ಯಾಪ್ ಪಡೆಯುವುದು ಹೇಗೆ?

ನಿಮ್ಮ ಜಮೀನನ ಸ್ಕೆಚ್ ಮ್ಯಾಪ್ ಬೇಕಾದರೆ ನೀವು ಅಲ್ಲಿ ಕಾಣುವ View Sketch on Map ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೊಲ ಅಂದರೆ ಜಮೀನು ಕಾಣಿಸುತ್ತದೆ. ಜಮೀನಿನ ಆಕಾರ ಸಂಪೂರ್ಣವಾಗಿ ಕಲರ್ ನಲ್ಲಿ ಕಾಣಿಸುತ್ತದೆ. ಇದನ್ನು ನೀವು ಡೌನ್ಲೋಡ್ ಮಾಡಿಟ್ಟುಕೊಳ್ಳಬೇಕು. ಇದರಿಂದ ನಿಮ್ಮ ಜಮೀನು ಸ್ಪಷ್ಟವಾಗಿ ಕಾಣಿಸುತ್ತದೆ. ಒಮ್ಮೆ ಇದನ್ನು ಚೆಕ್ ಮಾಡಿ ನೋಡಿ ಖುಷಿ ಎನಿಸುತ್ತದೆ.

ಇದನ್ನೂ ಓದಿ ಇಲ್ಲಿ ಬಯೋಮೆಟ್ರಿಕ್ ಇಕೆವೈಸಿ ಮಾಡಿದರೆ ಮಾತ್ರ ಪಿಎಂ ಕಿಸಾನ್ ಕಂತಿಣ ಜಮೆ

ಇದೇ ರೀತಿ ನಿಮಗೆ ಜಮೀನಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀವು ನಿಮ್ಮ ಬಳಿಯಿರುವ ಮೊಬೈಲ್ ನಲ್ಲೇ ಪಡೆದುಕೊಳ್ಳಬಹುದು. ಸರ್ಕಾರವು ಸಹ ರೈತರಿಗೆ ಸುಲಭವಾಗಿ ಜಮೀನಿನ ಮಾಹಿತಿ ಸಿಗಲೆಂದು ಆನ್ಲೈನ್ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ. ಇತ್ತೀಚೆಗೆ ರೈತರು ಕೇವಲ ಮೊಬೈಲ್ ಬಳಸುವ ಜ್ಞಾನವಿದ್ದರೆ ಸಾಕು ಮನೆಯಲ್ಲಿಯೇ ಕುಳಿತು ಯಾರ ಸಹಾಯವೂ ಇಲ್ಲದೆ ತಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಕ್ಷಣಾರ್ಧದಲ್ಲಿ ಪಡೆದುಕೊಳ್ಳಬಹುದು.

Leave a Comment