ಸಬ್ಸಿಡಿಯಲ್ಲಿ ಹಾಲು ಕರೆಯುವ ಯಂತ್ರ ನೀಡಲು ಅರ್ಜಿ ಆಹ್ವಾನ

Written by By: janajagran

Updated on:

subsidy for milking machine ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು 2021-22ನೇ  ಸಾಲಿನಲ್ಲಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಶಿವಮೊಗ್ಗ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ  (Milking machine) ಮತ್ತು ಹಸುಗಳ ರಬ್ಬರ್ ನೆಲಹಾಸುಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಕನಿಷ್ಟ 2 ಹಾಲು ಕರೆವ ಮಿಶ್ರತಳಿ ರಾಸುಗಳನ್ನು ಹೊಂದಿದ್ದು, ಕಿವಿಯೊಲೆ ಅಳವಡಿಸಿರಬೇಕು. ಸ್ಥಳೀಯ ಪಶು ವೈದ್ಯರಿಂದ ದೃಢೀಕರಣ ಪತ್ರ, ಜಾತಿ ಪ್ರಮಾಣಪತ್ರ ಹೊಂದಿರಬೇಕು. ಆಸ್ತಕ್ತರು ಅರ್ಜಿ ಆಯಾ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿ ಅವರಿಂದ ಪಡೆದು ಸೂಕ್ತ ದಾಖಲಾತಿಗಳನ್ನು ಲಗತ್ತಿಸಿ ಆಗಸ್ಟ್ 18 ರೊಳಗೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ. ಶಿವಮೊಗ್ಗ 9482635093, ಭದ್ರಾವತಿ 9986624123, ತೀರ್ಥಹಳ್ಳಿ- 9448792886, ಹೊಸನಗರ- 9448165747, ಸಾಗರ- 9448007542, ಸೊರಬ- 9481255897, ಶಿಕಾರಿಪುರ 9482635093ಗೆ ಸಂಪರ್ಕಿಸಬಹುದು.

ಹೈನುಗಾರರಿಗೆ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ 2021-22ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಗಳಡಿ ಧಾರವಾಡ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹೈನುಗಾರರಿಗೆ ವಿವಿಧ ಸೌಲಭ್ಯ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಆಗಸ್ಟ್ 31 ಕೊನೆಯ ದಿನವಾಗಿದೆ.ಕನಿಷ್ಟ 2-3 ಮಿಶ್ರತಳಿ ಹಸುಗಳನ್ನು ಹೊಂದಿರುವ ಹೈನುಗಾರರಿಗೆ ವಿದ್ಯುತ್ ಚಾಲಿತ 1 ಬಕೇಟ್ ಸಾಮರ್ಥ್ಯದ ಹಾಲು ಕರೆಯುವ ಯಂತ್ರ ಮತ್ತು ಎರಡು ರಬ್ಬರ್ ಮ್ಯಾಟ್ ಗಳನ್ನು ಶೇ. 90 ರ ಸಹಾಯಧನದಲ್ಲಿ ಶೇ. 10 ಫಲಾನುಭವು ವಂತಿಗೆಯೊಂದಿಗೆ ನೀಡುವ ಘಟಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿಗಳನ್ನು ಭರ್ತಿ ಮಾಡಿ ತಮ್ಮ ತಾಲೂಕಿನ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಅವರ ಕಚೇರಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಮೊ. 9242242399 ಗೆ ಸಂಪರ್ಕಿಸಲು ಕೋರಲಾಗಿದೆ.

subsidy for milking machine ವಿದ್ಯುತ್ ಚಾಲಿತ ಹಾಲು ಕರೆಯುವ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ

ಪ್ರಸಕ್ತ 2021-22ನೇ ಸಾಲಿನಲ್ಲಿ ಕಲಬುರಗಿ ಜಿಲ್ಲೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ವಿದ್ಯುತ್‌ಚಾಲಿತ ಹಾಲು ಕರೆಯುವ ಯಂತ್ರ ಹಾಗೂ ಪಶುಗಳಿಗೆ ರಬ್ಬರ ಹಾಸಿಗೆಗಳನ್ನು ವಿತರಿಸಲಾಗುತ್ತಿದ್ದು, ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುಪಾಲನೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.

ಇದನ್ನೂ ಓದಿ ಮೊಬೈಲ್ ನಲ್ಲೇ ಜಮೀನಿನ ಸ್ಕೆಚ್ ನಕ್ಷೆ ಹೀಗೆ ಪಡೆಯಿರಿ

ಫಲಾನುಭವಿಗಳು ಹೈನುಗಾರಿಕೆಯಲ್ಲಿ ಅನುಭವ ಹೊಂದಿರಬೇಕು. ಕನಿಷ್ಠ 2 ಹಾಲು ಕರೆಯುವ ಮಿಶ್ರತಳಿ ರಾಸುಗಳನ್ನು ಹೊಂದಿರಬೇಕು. ರಾಸುಗಳಿಗೆ ಕಿವಿಯೋಲೆ ಅಳವಡಿಸಿರಬೇಕು. ಈ ಕುರಿತು ಸ್ಥಳೀಯ ಪಶು ವೈದ್ಯರಿಂದ ದೃಢೀಕರಣ ಪತ್ರ ಪಡೆದಿರಬೇಕು. ಜಾತಿ ಪ್ರಮಾಣಪತ್ರ ಹೊಂದಿರಬೇಕು. ಫಲಾನುಭವಿಗಳ ಆಯ್ಕೆಯನ್ನು ಸಂಬAದಪಟ್ಟ ವಿಧಾನಸಭಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿಯಿಂದ ಮಾಡಲಾಗುತ್ತದೆ.

ಆಸಕ್ತಿಯುಳ್ಳ ಫಲಾನುಭವಿಗಳು ಸಂಬAಧಪಟ್ಟ ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿ ಅವಶ್ಯಕ ದಾಖಲೆಗಳೊಂದಿಗೆ 2021ರ ಆಗಸ್ಟ್ 9 ರಿಂದ 2021ರ ಸೆಪ್ಟೆಂಬರ್ 9ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕು. ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಹಾವೇರಿ ಜಿಲ್ಲೆಯ ರೈತರಿಂದ ಹಾಲು ಕರೆಯುವ ಯಂತ್ರ ಸಹಾಯಧನಕ್ಕೆ ಅರ್ಜಿ ಆಹ್ವಾನ

ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕನಿಷ್ಟ ಎರಡು ಮಿಶ್ರ ತಳಿ ಹಸುಗಳನ್ನು ಹೊಂದಿರುವ ಹಾವೇರಿ ಜಿಲ್ಲೆಯ ಹೈನುಗಾರರಿಂದ ಒಬ್ಬರಿಗೆ ಒಂದು ವಿದ್ಯುತ್ ಚಾಲಿತ ಒಂದು ಬಕೆಟ್ ಸಾಮರ್ಥ್ಯದ ಹಾಲು ಕರೆಯುವ ಯಂತ್ರ ಹಾಗೂ ಎರಡು ರಬ್ರ್ ಮ್ಯಾಟ್ ಗಳನ್ನು ಶೇ. 90 ರ ಸಹಾಯಧನ ಮತ್ತು ಶೇ. 10 ರ ಫಲಾನುಭವಿಯ ವಂತಿಕೆಯೊಂದಿಗೆ ನೀಡುವ ಘಟಕ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ನಿಗದಿ ಅರ್ಜಿಯನ್ನು ಹಾವೇರಿ ಜಿಲ್ಲೆಯ ಆಯಾ ತಾಲೂಕಿನ ಸಹಾಯ ನಿರ್ದೇಶಕರು, ಪಶು ಆಸ್ಪತ್ರೆಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಅರ್ಜಿಯನ್ನು ಆಗಸ್ಟ 20 ರೊಳಗೆ ಸಲ್ಲಿಸಲು ಕೋರಲಾಗಿದೆ.

ಹೆಚ್ಚಿನ ಮಾಹಿತಿಗೆ ಹಾವೇರಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಡಿ.ಸಿ. 9480422963, ರಾಣಿ ಬೆನ್ನೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಪರಮೇಶ ಎನ್. 9480667062, ಬ್ಯಾಡಗಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಎನ್.ಎಸ್. ಚೌಡಾಳ 9901784498, ಶಿಗ್ಗಾಂವಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಆರ್. ವೈ ಹೊಸಮನಿ 91085 79345, ಸವಣೂರು ಪಶು ಆಸ್ಪತ್ರೆ ಸಹಾಯಕ ನಿರ್ದೇಶಕಡಾ. ರವೀಂದ್ರ ಹುಜರತ್ತಿ 9740821508, ಹಾನಗಲ್ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಗಿರೀಶ ರಡ್ಡೇರ 9901118508, ಹಿರೇಕೇರೂರ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಕಿರಣ ಎಲ್ ಸಹಾಯಕ ನಿರ್ದೇಶಕ (ಪ್ರಭಾರ) ಮೊ. 7022075545, ರಟ್ಟಿಹಳ್ಳಿ ಪಶು ಆಸ್ಪತ್ರೆ ಸಹಾಯಕ ನಿರ್ದೇಶಕ ಡಾ. ಸುಮಂತ ಕಟ್ಟಿಮನಿ ಮೊ. 7411450502ಗೆ ಸಂಪರ್ಕಿಸಲು ಕೋರಲಾಗಿದೆ.

ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ತರಬೇತಿ: ಅರ್ಜಿ ಆಹ್ವಾನ

ಪ್ರಸಕ್ತ 2021-22ನೇ ಸಾಲಿನಲ್ಲಿ ಇದೇ ಆಗಸ್ಟ್ 17 ರಿಂದ 19ರವರೆಗೆ ರೈತರಿಗೆ ಆನ್‌ಲೈನ್ ಮೂಲಕ ಮೂರು ದಿನಗಳ ಕಾಲ ಉಚಿತವಾಗಿ ರೈತರಿಗೆ ವೈಜ್ಞಾನಿಕ ಹೈನುಗಾರಿಕೆ ತರಬೇತಿಯನ್ನು ಕಲಬುರಗಿಯ ಸೇಡಂ ರಸ್ತೆಯ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಪಶು ಆಸ್ಪತ್ರೆಯ ಆವರಣದಲ್ಲಿ ನೀಡಲಾಗುತ್ತಿದ್ದು, ಇದಕ್ಕಾಗಿ ಆಸಕ್ತಿಯುಳ್ಳ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕರು ತಿಳಿಸಿದ್ದಾರೆ.

ನಿಗದಿತ ಅರ್ಜಿ ನಮೂನೆಯನ್ನು ಕಲಬುರಗಿಯ ಪಶುವೈದ್ಯಕೀಯ ಪರೀಕ್ಷಕರ ತರಬೇತಿ ಕೇಂದ್ರದಿAದ ಅಥವಾ  ಆಯಾ ತಾಲೂಕಿನ ಸಹಾಯಕ ನಿರ್ದೇಶಕರ ಕಚೇರಿಯಿಂದ ಪಡೆಯಬೇಕು.  ತರಬೇತಿಗೆ ಭಾಗವಹಿಸುವ ರೈತರಿಗೆ ಯಾವುದೇ ಭತ್ಯೆ ಇರುವುದಿಲ್ಲ. ಅರ್ಜಿ ಸಲ್ಲಿಸಲು 2021ರ ಆಗಸ್ಟ್ 13 ಕೊನೆಯ ದಿನವಾಗಿದೆ.

ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರಗಳು, ಆಧಾರ್ ಕಾರ್ಡ್ ಝೆರಾಕ್ಸ್, ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಹಾಗೂ ವಾಟ್ಸ್ ಆಪ್ ಇರುವ ಮೊಬೈಲ್ ಸಂಖ್ಯೆಗಳ ವಿವರದೊಂದಿಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಪ್ರಥಮ ದರ್ಜೆ ಸಹಾಯಕರಾದ ಸುನೀಲ ಇವರ ಮೊಬೈಲ್ ಸಂಖ್ಯೆ 7676475317ಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment