ಮಳೆಯ ಮುನ್ಸೂಚನೆ ಪಡೆಯಲು ಬಳಸಿ ಮೌಸಮ್ ಆ್ಯಪ್

Written by By: janajagran

Updated on:

Mausam App for weather forecasts ಯಾವ ನಗರದಲ್ಲಿ ಎಷ್ಟು ಪ್ರಮಾಣದ ಮಳೆಯಾಗುತ್ತದೆ ಅಲ್ಲಿನ ವಾತಾವರವಣ ಕುರಿತು ಸಂಪೂರ್ಣ ಮಾಹಿತಿ ನೀಡುತ್ತದೆ ಮೌಸಮ್  ಆ್ಯಪ್. ಈ ಮೌಸಮ್ ಆ್ಯಪ್ ಸಹಾಯದಿಂದಾಗಿ ರೈತರು ತಮ್ಮ ಜಿಲ್ಲೆಯ ವಾತಾವರಣ, ಮಳೆಯ ಮುನ್ಸೂಚನೆಯನ್ನು ಪಡೆಯಬಹುದು.  ಹವಾಮಾನ ವೈಪರೀತ್ಯದಿಂದಾಗಿ ಇತ್ತೀಚೆಗೆ ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟಬಾಧೆಗಳಿಗೆ ಸಲಹೆಯನ್ನು ಸಹ ನೀಡುತ್ತದೆ  ಮೌಸಮ್ ಆ್ಯಪ್.

Who designed Mousam App?

ಮೌಸಮ್ ಆ್ಯಪ್ ನ್ನು International Crops Research institute for the semi Arid Tropics (ICRISAT), Indian institute of Tropical Meteorology (IITM), India Meteorological Department (IMD) ಈ ಆ್ಯಪ್ ನ್ನು ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಆಯಾ ಸ್ಥಳದ  ಉಷ್ಣತೆ, ಆರ್ದ್ರತೆ, ಗಾಳಿಯ ವೇಗ ಹಾಗೂ ದಿಕ್ಕನ್ನು ತಿಳಿಸುತ್ತದೆ. ಪ್ರತಿ ದಿನ ಎಂಟು ಸಲ ಈ  ಆ್ಯಪ್ ನವಲ್ಲಿ ಮಾಹಿತಿ ಅಪ್ ಡೇಟ್ ಆಗುತ್ತದೆ.  ಇದರಲ್ಲಿ ದೇಶದ 450 ಕ್ಕೂ ಹೆಚ್ಚು ನಗರಗಳ ಮುಂದಿ ಏಳು ದಿನಗಳ ಹವಾಮಾನ ಮಾಹಿತಿ ಲಭ್ಯವಿರಲಿದೆ.  ರೈತರಿಗೆ, ಜನರಿರೆ ಬೆರಳ ತುದಿಯಲ್ಲಿ ಹವಾಮಾನ ಮುನ್ಸೂಚನೆ ಸಿಗಲೆಂದು ಈ ಆ್ಯಪ್ ನ್ನು ಅಭಿವೃದ್ಧಿಪಡಿಸಲಾಗಿದೆ.

How to download Mausam app?

ಮೌಸಮ್ ಆ್ಯಪ್ ಗೂಗಲ್ ಪ್ಲೇ ಸ್ಟೋರ್ ದಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಅಥವಾ ಗೂಗಲ್ ನಲ್ಲಿ Mausam app ಎಂದು ಟೈಪ್ ಮಾಡಿ ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡು appದಿಂದ ಸಿಗುವ ಮಾಹಿತಿಯನ್ನು ಪಡೆದುಕೊಳ್ಳಬಹುದು.

ಮೌಸಮ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳದೆ ಮೊಬೈಲ್ ನಲ್ಲಿಯೇ ಹವಾಮಾನದ ಮಾಹಿತಿ ನೋಡಲು ಈ

https://mausam.imd.gov.in/bengaluru/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ  ಹವಾಮಾನ ಇಲಾಖೆಯ ಕರ್ನಾಟಕದ ವೆಬ್ ಪೇಜ್ ಓಪನ್ ಆಗುತ್ತದೆ. ಇಲ್ಲಿ ರಾಜ್ಯದ ಜಿಲ್ಲೆಯಲ್ಲಿ ಹವಾಮಾನ ವರದಿ ಹಾಗೂ ಪ್ರಮುಖ ನಗರದ ತಾಪಮಾನದ ಮಾಹಿತಿಯನ್ನೂ ನೋಡಬಹುದು.

Mausam App for weather forecasts ಮಳೆಯ ಮುನ್ಸೂಚನೆ ಬೆಳೆಗಳಿಗೆ ತಗಲುವ ರೋಗ, ಕೀಟ ಹತೋಟಿಗೆ ಸಲಹೆ

ಮಳೆಯ  ಮುನ್ಸೂಚನೆ ಹಾಗೂ ಬೆಳಗಳಿಗೆ ತಗಲುವ ಕೀಟ, ರೋಗ ಹತೋಟಿಗೆ ಮಾಹಿತಿ ಪಡೆಯಲು  Agromet Advisory ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಪಿಡಿಎಫ್ ಫೈಲ್ ಓಪನ್ ಆಗುತ್ತದೆ. ಅಥವಾ  ಈ

https://mausam.imd.gov.in/bengaluru/mcdata/agromet.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಓಪನ್ ಆಗುವ ಈ ಫೈಲ್ ನಲ್ಲಿ   ಭಾರತ ಹವಾಮಾನ ಇಲಾಖೆ, ಹವಾಮಾನ ಕೇಂದ್ರ ಬೆಂಗಳೂರು, ರಾಜ್ಯದ ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಕೃಷಿ ಹವಾಮಾನ ಇಲಾಖೆಯು ಪ್ರತಿನಿತ್ಯ ಪ್ರಕಟಣೆ ಹೊರಡಿಸುತ್ತದೆ. ಇದರಲ್ಲಿ  ರಾಜ್ಯದ ಯಾವ ಭಾಗದಲ್ಲಿ ಎಷ್ಟು ಉಷ್ಣಾಂಶದ ತಾಪಮಾನದ ಮಾಹಿತಿ ನೀಡಲಾಗಿರುತ್ತದೆ. ರಾಜ್ಯದ ಮುಂದಿನ ಐದು ದಿನಗಳಲ್ಲಿ  ಯಾವ ಭಾಗದಲ್ಲಿ ಮಳೆಯಾಗುತ್ತದೆ ಎಂಬ ಮುನ್ಸೂಚನೆ ನೀಡಲಾಗಿರುತ್ತದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಬೆಳೆಗಳಿಗೆ ಹವಾಮಾನ ವೈಪರೀತ್ಯದಿಂದಾಗಿ ತಗಲುವ ರೋಗ ಮತ್ತು ಕೀಟಗಳ ಹಾವಳಿ ತಡೆಯಲು ಯಾವ ಕ್ರಮಕೈಗೊಳ್ಳಬೇಕೆಂದು ರೈತರಿಗೆ ಸಲಹೆಯನ್ನು ಸಹ ನೀಡಲಾಗಿರುತ್ತದೆ. ಜಿಲ್ಲಾವಾರು ಬೆಳೆಯ ಬೆಳೆ ಮತ್ತು ಅಲ್ಲಿ ಬೆಳೆಗಳಿಗೆ ತಗಲುವ ರೋಗ ಕೀಟಗಳ ಹತೋಟಿಗೆ ಸಲಹೆ ನೀಡಲಾಗಿರುತ್ತದೆ.

ಹವಾಮಾನ ಆಧಾರಿತ ಬೆಳೆಯ ಸಲಹೆ

NKAFC Bulletin ಮೇಲೆ ಕ್ಲಿಕ್ ಮಾಡಿದರೆ  ಉತ್ತರ ಕರ್ನಾಟಕ ಭಾಗದ ಹವಾಮಾನ ಮತ್ತು ಕೃಷಿ ಹವಾಮಾನ ಸಲಹಾ ಪ್ರಕಟಣೆಯು ಓಪನ್ ಆಗುತ್ತದೆ. ಅಥವಾ ಈ

https://mausam.imd.gov.in/bengaluru/mcdata/nkafc.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಉತ್ತರ ಕರ್ನಾಟಕ ಕೃಷಿ ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ಕೇಂದ್ರ, ಭಾರತ ಹವಾಮಾನ ಇಲಾಖೆ ಧಾರವಾಡ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ  ಬೆಂಗಳೂರು, ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಮತ್ತು ಕೃಷಿ ಹವಾಮಾನಶಾಸ್ತ್ರ ವಿಭಾಗ ಕೃಷಿ ವಿಶ್ವವಿದ್ಯಾಲಯ ಧಾರವಾಡವು ಪ್ರಕಟಣೆ ಹೊರಡಿಸಿರುತ್ತದೆ. ಅಲ್ಲಿ ತಾಪಮಾನ, ಹವಾಮಾನ ಮುನ್ಸೂಚನೆ ನೀಡಲಾಗರುತ್ತದೆ. ಯಾವ ಜಿಲ್ಲೆಯಲ್ಲಿ ಯಾವಾಗ ಮಳೆಯಾಗುತ್ತದೆ ಎಂಬ ಮಾಹಿತಿ ನೀಡಲಾಗಿರುತ್ತದೆ. ಹವಾಮಾನ ಆಧಾರಿತ ಬೆಳೆಯ ಸಲಹೆಗಳನ್ನು ನೀಡಲಾಗಿರುತ್ತದೆ.

ಮೌಸಮ್ ಆ್ಯಪ್ ನ್ನು ಯಾವ ಸಚಿವರು ಬಿಡುಗಡೆಗೊಳಿಸಿದರು (Mausam app launched by which Minister)

ಮೌಸಮ್ ಆ್ಯಪ್ ನ್ನು  ಭೂ ವಿಜ್ಞಾನ ಸಚಿವ ಹರ್ಷವರ್ಧನ್ ರವರು ಬಿಡುಗಡೆಗೊಳಿಸಿದ್ದಾರೆ. ಈ ಆ್ಯಪ್ ದೇಶದ 200 ಮಹಾನಗರಗಳನ್ನು ಆಧರಿಸಿ ಹವಾಮಾನ ಮುನ್ಸೂಚನೆ ನೀಡುತ್ತದೆ ಎಂದು ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು.

Leave a Comment