ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಬಿಡುಗಡೆ- ನಿಮಗೆಷ್ಟು ಜಮೆ? ಚೆಕ್

Written by Ramlinganna

Published on:

March month annabhagya money released ಅನ್ನಭಾಗ್ಯ ಯೋಜನೆಯ ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದೆ. ಹೌದು, ಮಾರ್ಚ್ ತಿಂಗಳ ಅನ್ನಭಾಗ್ಯ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಿದೆ? ಯಾವ ಬ್ಯಾಂಕ್ ಖಾತೆಗೆ ಜಮೆಯಾಗಿದೆ? ಯಾವಾಗ ಜಮೆಯಾಗಿದೆ? ಎಲ್ಲಿ ಹೇಗೆ ಚೆಕ್ ಮಾಡಬೇಕು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ತಮಗೆಲ್ಲಾ ಗೊತ್ತಿದ್ದ ಹಾಗೆ ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಹೆಚ್ಚುವರಿ ಹಣ ಫಲಾನುಭವಿಗಳ ಖಾತೆಗೆ ಅಂದರೆ ನೇರವಾಗಿ ಕುಟುಂಬದ ಮುಖ್ಯಸ್ಥರ ಖಾತೆಗೆ ಜಮೆ ಮಾಡಲಾಗುತ್ತಿದೆ. ಆ ಕುಟುಂಬದಲ್ಲಿ ಎಷ್ಟು ಜನ ಸದಸ್ಯರಿದ್ದಾರೋ ಆ ಸದಸ್ಯರುಗುಣವಾಗಿ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣ ಜಮೆ ಮಾಡಲಾಗುತ್ತಿದೆ.

March month annabhagya money released ಮಾರ್ಚ್ ತಿಂಗಳ ಅನ್ನಭಾಗ್ಯ ಹಣ  ಜಮೆಯಾಗಿದೆಯೇ? ಚೆಕ್ ಮಾಡಿ

ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆಯ ಹಣ ಜಮೆ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಫಲಾನುಭವಿಗಳು ಈ

https://ahara.kar.nic.in/lpg/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ರೇಶನ್ ಕಾರ್ಡ್ ಸ್ಟೇಟಸ್ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ ಜಿಲ್ಲೆಗಳು ಕಾಣಿಸುತ್ತವೆ. ನಿಮ್ಮ ಜಿಲ್ಲೆಯ ಮೇಲ್ಗಡೆ ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗಲಿದೆ. ಅಲ್ಲಿ ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ, ಪಡಿತರ ಚೀಟಿ ವಿವರ, ಪಡಿತರ ಚೀಟಿಯ ಬದಲಾವಣೆ ಕೋರಿಕೆ ಸ್ಥಿತಿ, ಪಡಿತರ ನಿರಾಕರಣೆ ನೋಂದಣಿ, ನೇರ ನಗದು ವರ್ಗಾವಣೆ ಸ್ಥಿತಿ (DBT) ಹೀಗೆ ವಿವಿಧ ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ನೀವು ನೇರ ನಗದು ವರ್ಗಾವಣೆಯ ಸ್ಥಿತಿ ಮೇಲೆ ಕ್ಲಿಕ್ ಮಾಡಬೇಕು.  ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪ್ರಸಕ್ತ ವರ್ಷ 2024 ಆಯ್ಕೆ ಮಾಡಿಕೊಳ್ಳಬೇಕು. ತಿಂಗಳು ನಲ್ಲಿ ನೀವು ಯಾವ ತಿಂಗಳ ಸ್ಟೇಟಸ್ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆ ಅಂದರೆ ರೇಶನ್ ಕಾರ್ಡ್ ನಂಬರ್ ಹಾಕಬೇಕು. ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Go ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಆ ತಿಂಗಳಲ್ಲಿ  ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗಿರುವುದನ್ನು ಚೆಕ್ ಮಾಡಬಹುದು.

ಅನ್ನಭಾಗ್ಯ  ಯೋಜನೆಯ ಹಣ ನಿಮಗೆ ಜಮೆಯಾಗಿಲ್ಲವೇ?

ಯಾರು ಕಳೆದ ಮೂರು ತಿಂಗಳಿಂದ ಪಡಿತರ ಅಕ್ಕಿ ಪಡೆದಿರುವುದಿಲ್ಲವೋ ಅಂತಹವರ ಖಾತೆಗೆ ಹಣ ಜಮೆಯಾಗಲ್ಲ. ಅನ್ನಭಾಗ್ಯ ಯೋಜನೆಗೆ ಎಲ್ಲಾ ಅರ್ಹತೆ ಪಡೆದಿದ್ದರೂ ಸಹ ಕಳೆದ ಮೂರು ತಿಂಗಳಿಂದ ಪಡಿತರ ಪಡೆದಿದ್ದಲ್ಲಿ ಹಣ ಜಮೆಯಾಗಲ್ಲ. ಇದರೊಂದಿಗೆ  ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಹಣ ಜಮೆಯಾಗುವುದಿಲ್ಲ.

ಇದನ್ನೂ ಓದಿ ಗೃಹಲಕ್ಷ್ಮೀ ಯೋಜನೆೆಯ 7 ನೇ ಕಂತಿನ ಹಣ ಈ ಮಹಿಳೆಯರಿಗೆ ಜಮೆ

ಯಾರು ಸರ್ಕಾರಿ ನೌಕರಿಯಲ್ಲಿರುತ್ತಾರೋ? ಕುಟುಂಬದಲ್ಲಿ ಪತಿ ಪತ್ನಿ ಅಥವಾ ಮಕ್ಕಳು ಸರ್ಕಾರಿ ನೌಕರಿಯಲ್ಲಿದ್ದರೂ ಅವರಿಗೆ ಅನ್ನಭಾಗ್ಯ ಹಣ ಜಮೆಯಾಗುವುದಿಲ್ಲ. ಪಿಂಚಣಿ ಪಡೆಯುವವರಿದ್ದರೂ ಅಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ಹಣ ಜಮೆಯಗುವುದಿಲ್ಲ.

ಅನ್ನಭಾಗ್ಯ ಹಣ ಎಷ್ಟು ಜಮೆ ಮಾಡಲಾಗುವುದು?

ಅನ್ನಭಾಗ್ಯ ಯೋಜನೆಯ ಒಬ್ಬ ವ್ಯಕ್ತಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ ಒಟ್ಟು 5 ಕೆಜಿಗೆ 170 ರೂಪಾಯಿ ಜಮೆಯಾಗುವುದು.ಕುಟುಂಬದಲ್ಲಿ ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದರೆ ಕುಟುಂಬದ ನಾಲ್ಕು ಜನ ಸದಸ್ಯರಿಗೆ 680 ರೂಪಾಯಿ ಜಮೆಯಾಗುವುದು.

Leave a Comment