lightning safety tips ಸಿಡಿಲಿನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ

Written by By: janajagran

Published on:

lightning safety tips ಇತ್ತೀಚೆಗೆ ಮಳೆಗಾಲ ಪೂರ್ವದಲ್ಲಿಯೇ ಸಿಡಿಲಿನಿಂದಾದ ಸಾವು-ನೋವುಗಳ ಬಗ್ಗೆ ಸಾಕಷ್ಟು ವರದಿಗಳಾಗುತ್ತಿವೆ. ಮಳೆಗಾಲ ಶುರುವಾದರೆ ಸಾಕು ಗುಡುಗು ಮಿಂಚಿನದ್ದೇ ಅಬ್ಬರವಾಗಿರುತ್ತದೆ. ಸಿಡಿಲಾಘಾತದಿಂದ ಪಾರಾಗುವುದು (escape from the lightning) ಹೇಗೆ? ಯಾವೆಲ್ಲಾ ಮುನ್ನೆಚ್ಚರೆಕೆಗಳನ್ನು ಕೈಗೊಳ್ಳಬೇಕು ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ಮಳೆಗಾಲ ಬಂದಾಗ ಇಂದ್ರನು ಐರಾವತವನ್ನೇರಿ ಭೂಮಿಯನ್ನು ಸುತ್ತಾಡಲು ಹೊರಡುತ್ತಾನೆ ಆತನನ್ನು ಸ್ವಾಗತಿಸಲು ವರುಣನು ಮಿಂಚಿನ ವರ್ಷವನ್ನೇ ಕರೆಯುತ್ತಾರೆ. ಐರಾವತದ ಕೂಗು ಗುಡುಗಾಗಿ ಮೊಳಗುತ್ತದೆ.ಇಂದ್ರನು ತನ್ನ ವಜ್ರಾಯುಧವನ್ನು ಝಳಪಿಸಿದಾಗ ಸಿಡಿಲು ಭೂಮಿಗೆ ಅಪ್ಪಳಿಸುತ್ತದೆ ಎಂದು ಪೂರ್ವಜರು ವರ್ಣಿಸಿದ್ದಾರೆ.

ಕಾವ್ಯದಲ್ಲಿ ಪುರಾಣದಲ್ಲಿ ಇದನ್ನು ಕೇಳಕ್ಕೆ ಸರಿ ಎನಿಸುತ್ತದೆ. ಆದರೆ ವಾಸ್ತವದಲ್ಲಿ ಸಿಡಿಲು ಮಾಡುವ ಅನಾಹುತ ದೊಡ್ಡದು. ಸಿಡಿಲಿನ ಕುರಿತು ಸ್ವಲ್ಪ ಎಚ್ಚರಿಕೆ ಇರುವುದು ಅಗತ್ಯ.

ಇದನ್ನೂ ಓದಿ ನಿಮ್ಮ ಜಮೀನು ಯಾರಿಂದ ಯಾರಿಗೆ ವರ್ಗಾವಣೆಯಾಗಿದೆ? ಚೆಕ್ ಮಾಡಿ

ಮಳೆ ಸುರಿಯುವಾಗ ಗುಡುಗು ಮಿಂಚಿನ ಆರ್ಭಟ ಶುರುವಾದಾಗ ಈಗಲೂ ಹಿರಿಯಲು ಮಕ್ಕಳಿಗೆ ಮನೆಯೊಳಗಡೆ ಬಾ, ಅಥವಾ ಮನೆಯೊಳಗೆ ಹೋಗು ಎಂದು ಗದರಿಸುತ್ತಾರೆ. ಇದು ಸಿಡಿಲಿನಿಂದ ತಪ್ಪಿಸಿಕೊಳ್ಳಲು ಸುರಕ್ಷತೆಯ ಮೊದಲ ಪಾಠ. ಭಾರತದಲ್ಲಿ ಸಿಡಿಲಿನಿಂದ ಸಾಯುವವರಲ್ಲಿ ಹೆಚ್ಚಿನವರು ರೈತರು. ಅದೂ ಅವರು ಹೊಲದಲ್ಲಿದ್ದ ಸಂದರ್ಭದಲ್ಲೇ ಹೀಗಾಗುತ್ತದೆ ಹೊರತು ಮನೆಯಲ್ಲಿದ್ದಾಗ ಅಲ್ಲ.

lightning safety tips ಸಿಡಿಲಿಗೆ ಹೆಚ್ಚು ಜನ ರೈತರೇಕೆ ಸಾಯುತ್ತಾರೆ?

ಸಾಮಾನ್ಯವಾಗಿ ಮುಂಗಾರು ಪೂರ್ವ ಕೆಲಸಗಳಿಗಾಗಿ ರೈತರು ಈ ಹೊತ್ತಿನಲ್ಲಿ ಹೊಲಗಳಲ್ಲಿರುತ್ತಾರೆ. ಮಳೆ ಆರಂಭವಾದರೆ ಸಾಕು ತಕ್ಷಣವೇ ಮರಗಳ ಅಡಿಗೆ ಬಂದು ನಿಲ್ಲುತ್ತಾರೆ. ಆದರೆ ಹೊಲಗಳ ನಡುವೆ ಮರ ಇದ್ದರೆ, ಸಿಡಿಲು ಬಡಿಯಲು ಮರವನ್ನೇ ಆರಿಸಿಕೊಳ್ಳುತ್ತದೆ. ಹೀಗಾಗಿ ರೈತರೇ ಹೆಚ್ಚಾಗಿ ಸಾವು ನೋವಿಗೆ ತುತ್ತಾಗುತ್ತಾರೆ.

ಮಳೆಗಾಲದಲ್ಲಿ ರೈತರು ಮತ್ತು ಸಾರ್ವಜನಿಕರು ಸಿಡಿಲಿನಿಂದ ಸಾವಿಗೀಡಾಗುವುದನ್ನು ತಪ್ಪಿಸಲು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಸಲಹೆಗಳನ್ನು ನೀಡಿದೆ.

  1. ಗುಡುಗು ಮಿಂಚು ಬರುವುದು ಗೊತ್ತಾದರೆ, ಬಯಲಿನಲ್ಲಿದ್ದವರು ತಕ್ಷಣವೇ ತಗ್ಗು ಪ್ರದೇಶಕ್ಕೆ ಹೋಗಿ ಕುಳಿತುಕೊಳ್ಳಬೇಕು. ಮರಗಳಿದ್ದರೆ ಅವಗಳಿಂದಲೂ ದೂರ ನಿಲ್ಲಬೇಕು. ಸಿಡಿಲು ಮತ್ತು ಗುಡುಗು ಹಸಿ ವಸ್ತುಗಳಿಗೆ ಹೆಚ್ಚು ಆಕರ್ಷಿತಗೊಳ್ಳುತ್ತವೆ. ಹೀಗಾಗಿ ಮರಗಳ ಕೆಳಗೆ ನಿಲ್ಲುವುದು ಸುರಕ್ಷಿತವಲ್ಲ.
  2. ರೈತರು ಕುರಿ ಮಂದೆ ಅಥವಾ ದನಗಳ ಮಧ್ಯೆ ಇದ್ದರೆ, ಅವುಗಳ ಸಂದಿಯಲ್ಲಿ ಕುಳಿತುಕೊಳ್ಳಬೇಕು. ಎದ್ದು ನಿಂತರೆ ಎತ್ತರ ಇರುವ ಮನುಷ್ಯನಿಗೆ ಮೊದಲು ಸಿಡಿಲು ಬಡಿಯುತ್ತದೆ. ವಿದ್ಯುತ್ ಕಂಬ, ಮೊಬೈಲ್, ಟವರ್, ಟ್ರಾನ್ಸಫಾರ್ಮರ್ ಗಳಿಂದ ದೂರ ಇರಬೇಕು.

3, ಮನೆಯ ಕಿಟಕಿ ಪಕ್ಕದಲ್ಲಿ ನಿಲ್ಲುವುದರ ಬದಲು ಮನೆಯ ಮಧ್ಯದಲ್ಲಿ ಇರಬೇಕು. ಮೊಬೈಲ್ ಫೋನ್ ಮಾಡಬಾರದು. ಕಾರು, ಚಲಾಯಿಸಿದರೆ ಗ್ಲಾಸ್ ಹಾಕಿಕೊಳ್ಳಬೇಕು. ಕಾರಿಗೆ ಒರಗಿ ಕೂಡುವ ಬದಲು ಮಧ್ಯದಲ್ಲಿ ಕೂಡಬೇಕೆಂದು ಇಲಾಖೆ ಸಲಹೆ ನೀಡಿದೆ.

  1. ಗುಡುಗು- ಮಿಂಚು ಬರಲಿದೆ ಎಂದು ಗೊತ್ತಾದಾಗ ನೀವು ಹೊಲದಲ್ಲಿದ್ದರೆ, ಹತ್ತಿರದಲ್ಲಿರುವ ಯಾವುದೇ ಕಟ್ಟಡದಲ್ಲಿ ಅಥವಾ ಪಂಪ್‌ಹೌಸ್‌ನಲ್ಲಿ ಆಶ್ರಯ ಪಡೆಯಿರಿ.

ಯಾವುದೇ ಲೋಹದ ವಸ್ತುಗಳನ್ನು (ಉದಾ: ಕುಡುಗೋಲು, ಕೊಡಲಿ, ಹಾರೆ) ದೂರವಿರಿಸಿ.

  1. ತಂತಿಬೇಲಿ, ಬಟ್ಟೆ ಒಣಹಾಕುವ ತಂತಿ, ರೈಲ್ವೆ ಹಳಿ, ಲೋಹದ ಗೇಟ್ ಮತ್ತು ಪೈಪ್‌ಗಳಿಂದ ದೂರವಿರಿ. ಇವು ದೂರದಿಂದಲೇ ಮಿಂಚನ್ನು ಸೆಳೆಯುತ್ತವೆ.
  2. ಗುಡುಗು-ಸಿಡಿಲಿನ ಸಂದರ್ಭದಲ್ಲಿ ಫೋನ್‌ ಮಾಡಬೇಡಿ. ಅದನ್ನು ದೂರವಿರಿಸಿ. ಅದನ್ನು ಚಾರ್ಜ್‌ ಮಾಡುವ ಸಾಹಸವೂ ಬೇಡ. ಮೇಲಿನ ಮುನ್ನೆಚ್ಚರಿಕೆ ತೆಗೆದುಕೊಂಡರೆ ನೀವು ಸಿಡಿಲಿನ ಆಘಾತದಿಂದ ತಪ್ಪಿಸಿಕೊಳ್ಳಬಹುದು.

Leave a Comment