KrishiBhagya subsidy : 2024-25 ನೇ ಸಾಲಿನಲ್ಲಿ ಕೃಷಿ ಭಾಗ್ಯ ಯೋಜನೆ ಅಡಿ ವಿವಿಧ ಘಟಕಗಳ ಸೌಲಭ್ಯ ಪಡೆಯಲು ಕೊಪ್ಪಳ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಮೀಪದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯ ನಮೂನೆ ಪಡೆದು ಸಲ್ಲಿಸಬಹುದು. ರೈತರು ಕನಿಷ್ಠ 1 ಎಕರೆ ಜಮೀನನ್ನುಹೊಂದಿರಬೇಕು. ಈ ಯೋಜನೆಯನ್ನು ಜಿಲ್ಲೆಯ ರೈತರ ಅವಶ್ಯಕತೆಗನುಗುಣವಾಗಿ ಅಚ್ಚುಕಟ್ಟು ಪ್ರದೇಶವನ್ನು ಒಳಗೊಂಡಂತೆ ಅನುಷ್ಠಾನಗೊಳಿಸಲಾಗುವುದು. ಕ್ಷೇತ್ರ ಬದು ನಿರ್ಮಾಣಕ್ಕೆ (ಸಾಮಾನ್ಯವರ್ಗ ಶೇ. 80 ಸಹಾಯಧನ, ಎಸ್.ಸಿ, ಎಸ್.ಟಿಯವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
ಕೃಷಿ ಹೊಂಡ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ ಶೇ. 80 ರಷ್ಟು ಸಬ್ಸಿಡಿ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
ನೀರು ಇಂಗದಂತೆ ತಡೆಯಲು ಪಾಲಿಥಿನ್ ಹೊದಿಕೆಗೆ ಸಾಮಾನ್ಯ ವರ್ಗದವರಿಗೆ ಶೇ. 80 ರಷ್ಟುಸಬ್ಸಿಡಿ ನೀಡಲಾಗುವುದು.ಎಸ್.ಎಸಿ ಎಸ್.ಟಿ ವರ್ಗದವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
ಕೃಷಿ ಹೊಂಡ ಸುತ್ತಲೂ ತಂತಿ ಬೇಲಿ ನಿರ್ಮಾಣಕ್ಕೆ ಸಾಮಾನ್ಯ ವರ್ಗದವರಿಗೆ ಶೇ. 40 ರಷ್ಟು ಸಬ್ಸಿಡಿ ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದವರಿಗೆ ಶೇ. 50 ರಷ್ಟು ಸಹಾಯಧನ ನೀಡಲಾಗುವುದು.
ಕೃಷಿ ಹೊಂಡದಿಂದ ನೀರು ಎತ್ತಲು ಡೀಸೆಲ್, ಪೆಟ್ರೋಲ್ ಪಂಪ್ ಸೆಟ್ ಗೆ ಸಾಮಾನ್ಯ ವರ್ಗದವರಿಗೆ ಶೇ.80 ರಷ್ಟು , ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.90 ರಷ್ಟುಸಹಾಯಧನ ನೀಡಲಾಗುವುದು.
ಇದನ್ನೂ ಓದಿ : ಎಷ್ಟು ಬೆಳೆ ಹಾನಿಯಾದರೆ ಎಷ್ಟು ವಿಮೆ ಸಿಗಲಿದೆ? ಇಲ್ಲಿದೆ ಮಾಹಿತಿ
ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ ತುಂತುರು ಅಥವಾ ಹನಿ ನೀರಾವರಿಗೆ ಎಲ್ಲಾ ವರ್ಗದವರಿಗೆ ಶೇ. 90 ರಷ್ಟು ಸಬ್ಸಿಡಿ ನೀಡಲಾಗುವುದು.
ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತದಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಯೋಜನೆಯ ಉದ್ದೇಶವಾಗಿದೆ ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಟಿ.ಎಸ್. ರುದ್ರೇಶಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೃಷಿ ಭಾಗ್ಯ ಯೋಜನೆ ಅಡಿ ಸೌಲಭ್ಯ ಹಾಗೂ ಸಹಾಯಧನ ಪಡೆಯಲು ಜಿಲ್ಲೆಯ ರೈತರು ತಮ್ಮ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕೆಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕೃಷಿ ಭಾಗ್ಯ ಪ್ಯಾಕೇಜ್ ನಲ್ಲಿ ಒಟ್ಟಾರೆ 6 ಕಡ್ಡಾಯ ಘಟಕಗಳನ್ನುಒಳಗೊಂಡಿದ್ದು, ಘಟಕಗಳ ವಿವರ ಇಂತಿದೆ. ಕ್ಷೇತ್ರ ಬಹು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ ವಿನ್ಯಾಸಕ್ಕೆ), ನೀರು ಇಂಗಿಹೋಗದಂತೆ ಪಾಲಿಥೀನ್ ಹೊದಿಕೆ (ಸಾಮಾನ್ಯ ವರ್ಗಕ್ಕೆ ಗರಿಷ್ಠ 70,000 ರೂಪಾಯಿ ಹಾಗೂ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ವರ್ಗಕ್ಕೆ ಗರಿಷ್ಠ 8000 ರೂಪಾಯಿ ಮಿತಿಯೊಂದಿಗೆ ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ (ಜಿ.ಐ.ವೈರ್ ಫೆನ್ಸಿಂಗ್) ಹೊಂಡದಿಂದ ನೀರು ಎತ್ತಲೂ ಡೀಜಲ್ ಪೆಟ್ರೋಲ್ ಸೋಲಾರ್ ಪಂಪ್ ಸೆಟ್ (10 ಹೆಚ್.ಪಿ.ಯವರೆಗೆ) ಸೋಲಾರ್ ಪಂಪ್ ಸೆಟ್ ಅಳವಡಿಸಿದ ಫಲಾನುಭವಿಗಳಿಗೆ 30000 ರೂಪಾಯಿಗಳ ಪ್ರೋತ್ಸಾಹ ಧನ ನೀಡುವುದು ಹಾಗೂ ನೀರನ್ನು ಬೆಳೆಗ ಹಾಯಿಸಲು ಸೂಕ್ಷ್ಮ (ತುಂತುರು ಅಥವಾ ಹನಿ) ನೀರಾವರಿ ಯೋಜನೆಯ ಒಗ್ಗೂಡಿಸುವಿಕೆಯಡಿ ಸಬ್ಸಿಡಿ ನೀಡಲಾಗುವುದು.
KrishiBhagya subsidy ನೀರು ಬಳಕೆ ಮಾಡಿ ಆದಾಯ ಹೆಚ್ಚಿಸಿ
ಮಳೆ ಆಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿಸಲು ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಉತ್ಪಾದಕತೆ ಹೆಚ್ಚಿಸಿ, ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಮಳೆ ನೀರನ್ನು ವ್ಯರ್ಥ ಮಾಡದೆ ಆಯ್ದ ಸ್ಥಳಗಳಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ ಬೆಳೆಗಳ ಸಂದಿಗ್ದ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವುದು ಕೃಷಿ ಭಾಗ್ಯ ಪ್ಯಾಕೇಜ್ ಯೋಜನೆಯ ಪ್ರಮುಖ ಗುರಿಯಾಗಿದೆ. ಜೇಷ್ಠತಾ ಆಧಾರದ ಮೇಲೆ, ನಿಯಮಾನುಸಾರ ಪರಿಶೀಲಿಸಿ ರೈತರ ಅರ್ಜಿಗಳನ್ನು ಪುರಸ್ಕರಿಸಲಾಗುವುದು.
ಮೇಲಿನ ಸಬ್ಸಿಡಿ ಪಡೆಯಲು ಇಚ್ಚಿಸುವ ರೈತರು ಕಲಬುರಗಿ ಜಿಲ್ಲೆಯವರಾಗಿರಬೇಕು.