Krishi mela in Dharwad : ರೈತರ ಜಾತ್ರೆ ಎಂದೇ ಕರೆಯುವ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ನಡೆಯುವ ಕೃಷಿ ಮೇಳವು ಈ ಬಾರಿ ಸಶಕ್ತ ಮಹಿಳೆ –ಸುಸ್ಥಿರ ಕೃಷಿ ಘೋಷವಾಕ್ಯದ ಅಡಿ ಸೆಪ್ಟೆಂಬರ್ 25 ರಿಂದ 28 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೃಷಿ ವಿವಿ ಕುಲಪತಿ ಡಾ. ಎನ್.ಬಿ. ಪ್ರಕಾಶ, ಸುಸ್ಥಿರ ಕೃಷಿಗಾಗಿ ತಾಂತ್ರಿಕತೆಗಳು, ಬೀಜ ಮೇಳ, ನೈಸರ್ಗಿಕ ಮತ್ತು ಸಾವಯವ ಕೃಷಿ, ಮಹಿಳಾ ಸ್ವಸಾಯ ಗುಂಪುಗಳ ಸಾಧನೆ, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಸಂಸ್ಕರಣೆ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿ ನವೋದ್ಯಮಗಳು, ಹಿಂಗಾರು ಬೆಳೆಗಳ ತಾಂತ್ರಿಕತೆಗಳು ಮಳೆ ನೀರು ಕೊಯ್ಲು ಮತ್ತ ಅಂತರ್ಜಲ ಮರುಪೂರಣ, ಕೃಷಿ ಅರಣ್ಯ ಪಶು ಸಂಗೋಪನೆ, ಸಿರಿದಾನ್ಯಗಳನ್ನು ಬೆಳೆಯಲು ಪ್ರೋತ್ಸಾಹ, ಕೃಷಿ ವಿವಿ ಸಾಧನೆಯ ಕ್ಷೇತ್ರ ಭೇಟಿ ಅಂತಹ ವಿಶೇಷತೆಗಳಿವೆ ಎಂದರು.
ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಫಲ ಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಅಲಂಕಾರಿಕ ಮೀನುಗಳ ಪ್ರದರ್ಶನ ಹಾಗೂ ಆವರಣದಲ್ಲಿ ಜಾನುವಾರು ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಹೈಟೆಕ್ ತೋಟಗಾರಿಕೆ, ವಿಶೇಷ ಸಾಧನೆಗೈದ ಮಹಿಳಆ ರೈತರೊಂದಿಗೆ ಸಂವಾದ, ಕೃಷಿಯಲ್ಲಿ ಡ್ರೋನ್ ಬಳಕೆ ಸೇರಿದಂತೆ ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ, ನವೀನ ಆವಿಷ್ಕಾರಗಳು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರವಾಗಿ ಈ ಮೇಳವನ್ನು ರೂಪಿಸಲಾಗಿದೆ ಎಂದು ಡಾ. ಎನ್. ಬಿ. ಪ್ರಕಾಶ ಹೇಳಿದರು.
ಕೃಷಿ ಮೇಳದಲ್ಲಿ 168 ಹೈಟೆಕ್ ಮಳಿಗೆ, 293 ಸಾಮಾನ್ಯ ಮಳಿಗೆ, 75 ಯಂತ್ರೋಪಕರಣಗಳ ಮಳಿಗೆ, 28 ಟ್ರ್ಯಾಕ್ಟರ್ ಮಳಿಗೆ, 30 ಆಹಾರ ಮಳಿಗೆ ಗಳು ಸೇರಿದಂತೆ ಒಟ್ಟು 625 ಮಳಿಗೆ ಹಾಕಲಾಗಿದ್ದು, ಸುಮಾರು 20 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಮೇಳಕ್ಕೆ ಬರುವ ಪ್ರತಿಯೊಬ್ಬರ ನೋಂದಣಿ ಹಾಗೂ ವಿಮಾ ವ್ಯವಸ್ಥೆ ಸಹ ಮಾಡಲಾಗಿದೆ. ಬೀಜ ಮೇಳದಲ್ಲಿ 390 ಕ್ವಿಂಟಾಲ್ ವಿವಿಧ ಹಿಂಗಾರಿ ಬೀಜ ಮಾರಾಟ ಸಹ ಮಾಡಲು ಯೋಜಿಸಲಾಗಿದೆ ಎಂದರು.
Krishi mela in Dharwad ಸ್ಮಾರ್ಟ್ ಕೃಷಿ
ವಿವಿ ಒಂದು ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಕೃಷಿ ಜ್ಞಾನಗಳಾದ ಎಐ ಆಧಾರಿತ ಕೊಳವೆ ಬಾವಿ ನೀರು ನಿರ್ವಹಣಾ ವ್ಯವಸ್ಥೆ, ಎಐ ಆಧಾರಿತ ಮೊಳಕೆ ಹಂತದ ಕಳೆ ತೆಗೆಯುವ ಯಂತ್ರ, ದ್ರಾತ್ರಿ ಬೆಳೆಗೆ ಕೃಷಿ ಸಲಹೆ ಹಾಗೂ ಮಾರ್ಗದರ್ಶನ ಯಾಪ್, ಸ್ವಯಂ ಚಾಲಿತ ಸಮರ್ಪಕ ಸಿಂಪಡಣೆ ಡ್ರೋಣ, ಸೌರಶಕ್ತಿ ಚಾಲಿತ ಮೂರು ಸಾಲಿನ ಕಡಲೆ ನಿಪ್ಟಿಂಗ್ ಯಂತ್ರ, ಬ್ಯಾಟರಿ ಮತ್ತು ಮೊಬೈಲ್ ಮೂಲಕ ಸ್ವಯಂ ಚಾಲಿತ ವಾಲ್ ಅಂತಹ ಕೃಷಿ ಚಂತ್ರಜ್ಞಾನಗಳ ಪ್ರಾತ್ಯಕ್ಷಿಯೂ ಇದೆ ಎಂದು ಕುಲಪತಿ ಡಾ. ಎನ್.ಬಿ. ಪ್ರಕಾಶ ಹೇಳಿದರು.
ಹಾರ್ವಸ್ಟರ್ ಹಬ್ ಯೋಜನೆಗೆ ಅರ್ಜಿ ಆಹ್ವಾನ
ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ಆಧಾರದಲ್ಲಿ ರೈತರಿಗೆ ವಿತರಿಸುವ ಉದ್ದೇಶದಿಂದ ಗದಗ ಜಿಲ್ಲೆ ಸಾಮಾನ್ಯ ವರ್ಗ ಘಟಕದ ವೈಯಕ್ತಿಕ ಫಲಾನುಭವಿಗೆ 1 ಶುಗರ್ ಕೇನ್ ಹಾರ್ವೆಸ್ಟರ್ ಹಬ್ ಹಾಗೂ 1 ಕಂಬೈನ್ಡ್ ಹಾರ್ವೆಸ್ಟರ್ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಆಸಕ್ತರು ಅರ್ಜಿಯನ್ನು ನಿಗದಿತ ನಮೂನಯಲ್ಲಿ ಅಗತ್ಯ ದಾಖಲಾತಿಯೊಂದಿಗೆ ಸೆಪ್ಟೆಂಬರ್ 30 ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಇದನ್ನೂ ಓದಿ ದ್ವಿಚಕ್ರ ವಾಹನ ಖರೀದಿಗೆ ಮೀನು ಮರಿ ಖರೀದಿಗೆ ಸಹಾಯಧನ ನೀಡಲು ಅರ್ಜಿ ಆಹ್ವಾನ
ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.





