ಸ್ವಯಂ ಉದ್ಯೋಗಕ್ಕೆ ಕಿಟ್ ವಿತರಣೆ ಮಾಡಲು ಅರ್ಜಿ ಆಹ್ವಾನ

Written by Ramlinganna

Updated on:

kit distribution for self employment ಕಲ್ಯಾಣ ಕರ್ನಾಟಕ ಮಾನವ  ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಿಂದ ಕೌಶಲ್ಯ ಅಭಿವೃದ್ಧಿ ವಿಭಾಗದಡಿ ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯ 7 ಜಿಲ್ಲೆಗಳಲ್ಲಿನ ರೈತರಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಡಲು ಹಾಗೂ ಪ್ರೋತ್ಸಾಹಿಸಲು ವಿವಿಧ ಕಿರು ಉದ್ಯಮ ನಿರ್ವಹಿಸಲು ತರಬೇತಿ ಹಾಗೂ ಕಿಟ್ ವಿತರಣೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಕಲ್ಯಾಣ ಕರ್ನಾಟಕ ವಿಭಾಗದ ಕಲಬುರಗಿ, ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳ ಅರ್ಹ ರೈತರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈಗಾಗಲೇ 2023ರ ಮಾರ್ಚ್ 3ರಿಂದ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆರಂಭಗೊಂಡಿದ್ದು, ಆಸಕ್ತಿಯುಳ್ಳ ಅರ್ಜಿದಾರರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ರೈತರು ತಮ್ಮ ಅರ್ಜಿಯನ್ನು ಮಾರ್ಚ್ 9 ರ ಸಂಜೆ 5.30 ರೊಳಗಾಗಿ ಸಲ್ಲಿಸಲು ಕೋರಲಾಗಿದೆ.

kit distribution for self employment ಕಿಟ್ ವಿತರಣೆಗೆ ಮಾರ್ಗಸೂಚಿ

ಕಲ್ಯಾಣ ಕರ್ನಾಟಕ ವಿಭಾಗ ವ್ಯಾಪ್ತಿಯಲ್ಲಿ ಕ್ಲಸ್ಟರ್ ಮಾದರಿಯಲ್ಲಿ ಹಲವು ಹಳ್ಳಿಗಳ ಗುಂಪು ಒಳಗೊಂಡ ಕ್ಲಸ್ಟರನ್ನು ಜಿಲ್ಲೆಗೆ ಒಂದರಂತೆ ರೂಪಿಸಿ ಸದರಿ ಕ್ಲಸ್ಟರನಲ್ಲಿ ಒಳಗೊಂಡಿರುವ ಗ್ರಾಮಗಳ ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕಿರು ಉದ್ದಿಮೆ ನಿರ್ವಹಿಸಲು ತರಬೇಕಿ ಹಾಗೂ ಕಿಟ್ ವಿತರಣೆ ವಿತರಿಸಲಾಗುವುದು.

ನಿರುದ್ಯೋಗ ಯುವಕ-ಯುವತಿಯರಿಗೆ ಸ್ವಾವಲಂಬಿ ಜೀವನ ರೂಪಿಸಲು ಅನುಕೂಲ ಕಲ್ಪಿಸುವುದಕ್ಕಾಗಿ ವಿವಿಧ ಕಿರು ಉದ್ದಿಮೆ ನಿರ್ವಹಿಸಲು ತರಬೇತಿ ನೀಡಿ ಕಿಟ್ ವಿತರಣೆ ಕಾರ್ಯಾಗಾರ ಆಯೋಜಿಸಲಾಗಿದೆ. ಮೊದಲ ಹಂತದಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಮಾದರಿ ಯೋಜನೆಯಾಗಿ ಕ್ಲಸ್ಟರ್ ರೂಪಿಸಲಾಗಿದೆ.

ಇದನ್ನೂ ಓದಿ : ಜಮೀನಿನ ಓರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಮೊಬೈಲಿನಲ್ಲಿ ಒಂದೇ ನಿಮಿಷದಲ್ಲಿ ಡೌನ್ಲೋಡ್ ಮಾಡಿ

ನಿಗದಿತ ಅವಧಿಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾಗದಿದ್ದಲ್ಲಿಕಾರ್ಯಾಗಾರ ನಿಗದಿಪಡಿಸಿರುವ ದಿನದಂದು ಕಾರ್ಯಾಗಾರಕ್ಕೆ ಹಾಜರಾಗುವ ಯುವಕ ಯುವತಿಯರಿಂದ ನಿಗದಿತ ನಮೂನೆಯಲ್ಲಿ ಅರ್ಜಿ ಪಡೆದು ಯೋಜನೆ ಅನುಷ್ಠಾನಗೊಳಿಸಲಾಗುವುದು.

ನಿಗದಿತ ಅವಧಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸ್ವೀಕೃತವಾದ ಪಕ್ಷದಲ್ಲಿ ಆಯಾ ಜಿಲ್ಲಾವಾರು ಮತ್ತು ಆಯಾ ವರ್ಗವಾರು ಅರ್ಜಿ ಸಲ್ಲಿಕೆ ಕ್ರಮ ಸಂಖ್ಯೆಗೆ ಅನುಗುಣವಾಗಿ ಫಿಪೋ ಮಾದರಿಯಲ್ಲಿ (ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ ನೀಡಿ) ಫಲಾನುಭವಿಗಳನ್ನು ಆಯ್ಕೆ ಮಾಡಿ ಕಾರ್ಯಾಗಾರ ಆಯೋಜಿಸಲಾಗುವುದು.

ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ಕಾರ್ಯಾಗಾರ ಜರುಗುವ ದಿನದಂದು ವಿವಿಧ ಕಿರು ಉದ್ದಿಮೆ ಕಿಟ್ ಗಳನ್ನು ವಿತರಿಸಲಾಗುವುದು.

ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಸ್ವಯಂ ಉದ್ಯೋಗಕ್ಕಾಗಿ ಕಿಟ್ ಪಡೆಯಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದಕ್ಕಾಗಿ ಈ

https://infionebusiness.com/kkhracsindustry/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.ಆಗ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಹೆಸರು ತಂದೆಯ ಹೆಸರು ಭರ್ತಿ ಮಾಡಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ವಿಳಾಸಭರ್ತಿ ಮಾಡಬೇಕು. ಮೊಬೈಲ್ ನಂಬರ್ ಹಾಕಿ ಜಾತಿ ಆಯ್ಕೆ ಮಾಡಿಕೊಳ್ಳಬೇಕು.

ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬಿಪಿಎಲ್ ಕಾರ್ಡ್ ನ್ನು ಅಪ್ಲೋಟ್ ಮಾಡಬೇಕು. ಅಂಗವಿಕಲರಾಗಿದ್ದರೆ ಯಸ್ ಇಲ್ಲದಿದ್ದರೆ ನೋ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ನಮೂದಿಸಿ ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ಇದಾದ ಮೇಲೆ ಈ ಹಿಂದೆ ಸರ್ಕಾರದಿಂದ ಈ ರೀತಿಯ ಸೌಲಭ್ಯ ಪಡೆದಿಲ್ಲವೆಂಬುದನ್ನು ದೃಢೀಕರಿಸಬೇಕು.ಇದಾದ ಮೇಲೆ ಕಿಟ್ ಪಡೆಯಲು ನೋಂದಣಿ ಮಾಡಲು ಕೋರುತ್ತೇನೆ ಎಂಬ ಟರ್ಮ್ ಆ್ಯಂಡ್ ಕಂಡಿಶನ್ ನಲ್ಲಿ ಬಾಕ್ಸ್ ಯ್ಕೆ ಮಾಡಿಕೊಳ್ಳಬೇಕು. ಇದಾದ ಮೇಲೆ ಅರ್ಜಿಯನ್ನು ಸಬ್ಮಿಟ್ ಮಾಡಿದರೆ ಸಾಕು, ಆನ್ಲೈನ್ ನಲ್ಲಿ ನಿಮ್ಮ ಅರ್ಜಿ ಸಬ್ಮಿಟ್ ಆಗುತ್ತದೆ.

ಹೆಚ್ಚಿನ ಮಾಹಿತಿಗಾಗಿ 08472227712 ನಂಬರಿಗೆ ಕಚೇರಿ ಸಮಯ ಬೆಳಗ್ಗೆ 10 ರಿಂದ ಸಾಯಂಕಾಲ 5ರೊಳಗಾಗಿ ಕರೆ ಮಾಡಿ ವಿಚಾರಿಸಬಹುದು.

Leave a Comment