ಕೇಂದ್ರ ಸರ್ಕಾರವು ಮಂಡಿಸಿದ ಬಜೆಟ್ ನಲ್ಲಿ ಕೃಷಿಯಲ್ಲಿ ಡ್ರೋನ್ ಗಳ ಬಳಕೆ, ರಾಸಾಯನಿಕ ಮುಕ್ತ ಸಹಜ ಕೃಷಿ ಪದ್ಧತಿ ಹಾಗೂ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಉತ್ತೇಜನ ನೀಡಲಿದೆ. ಕೃಷಿಯಲ್ಲಿ ಕಿಸಾನ್ ಡ್ರೋನ್ ಗಳ ಬಳಕೆಗೆ ಉತ್ತೇಜನ ನೀಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಘೋಷಿಸಿದ್ದಾರೆ.

ಬೆಳೆ ಮೌಲ್ಯ ಮಾಪನ, ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಕೀಟನಾಶಕಗಳ ಸಿಂಪರಣೆಗೆ ಈ ಡ್ರೋನ್ ಗಳನ್ನು ಬಳಸುವುದು ಸರ್ಕಾರದ ಆಶಯವಾಗಿದೆ. ಇನ್ನೂ ಮುಂದೆ ರೈತರಿಗೆ ಕಿಸಾನ್ ಡ್ರೋನ್ ಪರಿಚಯಿಸಲಾಗುವುದು. ಬೆಳೆಗಳ ಸಮೀಕ್ಷೆ, ಕ್ರಿಮಿನಾಶಕ ಹಗೂ ಪೋಷಕಾಂಶಗಳ ಸಿಂಪರಣೆಗೆ ಡ್ರೋನ್ ಗಳನ್ನು ಬಳಸಲು ಸರ್ಕಾರ ಯೋಚಿಸಿದೆ. ಕಿಸಾನ್ ಡ್ರೋನ್ ನಿಂದಾಗಿ ಕೃಷಿ ವಲಯದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚುವ ನಿರೀಕ್ಷೆಯಿದೆ ಎಂದು ಅವರು ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಅಲ್ಲದೆ ಎಂಟು ಭಾಷೆಗಳಲ್ಲಿ ಭೂದಾಖಲೆಗಳ ಡಿಜಿಟಲೀಕರಣ ಮಾಡಲಿದೆ.  ಸ್ಥಳೀಯ ಆಹಾರಧಾನೇಯ ಸಾಗಣೆ, ಸ್ಪರ್ಧಾತ್ಮಕ ದರ ಮತ್ತು ಮೌಲ್ಯವರ್ಧನೆಗೆ ಪೂರಕವಾಗಿ ಒನ್ ನೇಷನ್ ಒನ್ ಪ್ರೊಡಕ್ಟ್  ಯೋಜನೆ ಪ್ರಕಟಿಸಿದೆ. ರೈತರು ಮತ್ತು ವರ್ತಕರನ್ನು ಆರ್ಥಿಕವಾಗಿ ಬಲವಡಿಸುವುದೇ ಇದರ ಮುಖ್ಯ ಉದ್ದೇಶವಾಗಿದೆ.

ಏನಿದು ಬೆಳೆ ಸಮೀಕ್ಷೆ? ಬೆಳೆ ಸಮೀಕ್ಷೆ ಮಾಡುವುದು ಹೇಗೆ?

ರೈತರಿಗೆ ಬೆಳೆಗಳ ಸೌಲಭ್ಯ ಪಡೆಯಬೇಕಾದರೆ ಬೆಳೆ ಸಮೀಕ್ಷೆಯಾಗಿರಲೇಬೇಕು. ಮೊದಲು ರೈತರು ತಮ್ಮ ಬೆಳೆಗೆ ತಾವೇ ಸಮೀಕ್ಷೆ ಮಾಡಲು ಅನವು ಮಾಡಿಕೊಡಲಾಗಿತ್ತು. ರೈತರ ಹತ್ತಿರ ಸ್ಮಾರ್ಟ್ ಮೊಬೈಲ್ ಫೋನಿದ್ದರೆ ಸಾಕು, ಜಮೀನಿನಲ್ಲಿರುವ ಮುಂಗಾರು, ಹಿಂಗಾರು ಬೆಳೆಗಳ ಸಮೀಕ್ಷೆಯನ್ನು ರೈತರ ಮಾಡಬಹುದಿತ್ತು. ಇದು ರೈತರಿಗೆ ವರದಾನವಾಗಿತ್ತು.  ಈಗಾಗಲೇ ರೈತರು ಮೊಬೈಲ್ ನಲ್ಲಿಯೇ ಬೆಳೆ ಸಮೀಕ್ಷೆ ಮಾಡಲು ರೂಢಿಸಿಕೊಂಡಿದ್ದರು.ಆದರೂ ಇನ್ನೂ ಕೆಲವು ರೈತರು ಬೆಳೆ ಸಮೀಕ್ಷೆ ಮಾಡಿಸದೆ ಸರ್ಕಾರದ ಸೌಲಭ್ಯದಿಂದಾಗಿ ವಂಚಿತರಾಗುತ್ತಿದ್ದರು. ಈ ಕಾರಣಕ್ಕಾಗಿಯೇ ಈ ವರ್ಷದ ಬಜೆಟ್ ನಲ್ಲಿ ಬೆಳೆ ಸಮೀಕ್ಷೆಗೆ ಡ್ರೋನ್ ಬಳಕೆ ಘೋಷಣೆ ಮಾಡಿರಬಹುದು.

ಬೆಳೆ ಸಮೀಕ್ಷೆ ಏಕೆ ಬೇಕು?

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಬೆಳೆಗಳ ವಿಸ್ತೀರ್ಣ ಎಣಿಕಾ ಕಾರ್ಯದಲ್ಲಿ ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಬೆಳೆ ಹಾನಿ ಕುರಿತು ವರದಿ ಸಿದ್ದಪಡಿಸುವಲ್ಲಿಯೂ ಬೆಳೆ ಸಮೀಕ್ಷೆ ಬೇಕಾಗುತ್ತದೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ತಯಾರಿಸುವ ಸಂದರ್ಭದಲ್ಲಿ ಬೆಳೆ ವಿಮಾ ಯೋಜನೆ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಬೆಳೆ ಖರೀದಿಸಲು ಬೆಳೆ ಸಮೀಕ್ಷೆಯ ಅವಶ್ಯಕತೆಯಿರುತ್ತದೆ. ಕೃಷಿ, ರೇಷ್ಮೆ, ತೋಟಗಾರಿಕೆ, ಇಲಾಖೆಯ ಬೆಲೆ ಮಾನದಂಡಗಳಿಗೆ ಅನುಗುಣವಾಗಿ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕಾಗಿ ಅರ್ಹ ಫಲಾನುಭವಿಗಳನ್ನು ಗುರುತಿಸಲು ಪಹಣಿಯಲ್ಲಿ ಬೆಳೆ ವಿವರ ದಾಖಲಾತಿಗಾಗಿ ಉಪಯೋಗಿಸಲಾಗುತ್ತದೆ.

ಇದನ್ನೂ ಓದಿ : ಸಿಬಿಲ್ ಸ್ಕೋರ್ ಮೊಬೈಲ್ ನಲ್ಲಿಯೇ ಉಚಿತವಾಗಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಆತ್ಮನಿರ್ಭರ ಭಾರತ ಮತ್ತು ಮೇಕ್ ಇನ್ನ ಇಂಡಿಯಾ ಯೋಜನೆಯಡಿಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಕೃಷಿ ಉಪಕರಣಗಳನ್ನು ತಯಾರಿಸಲು ಪ್ರೋತ್ಸಾಹ, ಅನುಭವ ರೈತರಿಗೆ ಸ್ಥಳೀಯ ಮಟ್ಟದಲ್ಲೂ ಕೃಷಿ ಉಪಕರಣಗಳನ್ನು ತಯಾರಿಕೆಗೆ ಒತ್ತು ನೀಡಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನಾ ಸಾಂಕ್ರಾಮಿಕ ರೋಗ ತಂದೊಡ್ಡಿದ್ದ ಆರ್ಥಿಕ ಸಂಕಷ್ಟದ ಸುಳಿಯಿಂದ ದೇಶವನ್ನು ಪಾರು ಮಾಡುವಲ್ಲಿ ಕೃಷಿ ಹಾಗೂ ಸಂಬಂಧಿಸಿದ ಕ್ಷೇತ್ರ ನಿರ್ಣಾಯಕ ಪಾತ್ರ ವಹಿಸಿದೆ. ಕೃಷಿ ಉನ್ನತಿಯೇ ಆರ್ಥಿಕತೆಯ ಜೀವಾಳವೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2021-22ನೇ ಸಾಲಿನ ಬಜೇಟ್ ನಲ್ಲಿ ಸಾರಿದ್ದಾರೆ.

ಸ್ಥಳೀಯವಾಗಿ ಎಣ್ಣೆಕಾಳು ಬೆಳೆಯುವುದಕ್ಕೆ ಉತ್ತೇಜಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ.ಆ ಮೂಲಕ ಅಮದು ಖಾದ್ಯ ತೈಲದ ಮೇಲಿನ ಅವಲಂಬನೆ ಕ್ರಮೇಣ ತಗ್ದಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *