Kisan Call Center ಬೆಳೆಗಳಿಗೆ ತಗಲುವ ದಿನಕ್ಕೊಂದು ಹೊಸ ರೋಗಗಳು, ಕೀಟಗಳ ಹಾವಳಿಯಿಂದ ರೈತರಿಗೆ ಅಪಾರ ಹಾನಿಯಾಗುತ್ತಿರುತ್ತದೆ. ಹವಾಮಾನ ವೈಪರೀತ್ಯದಿಂದಾಗಿ ತಗಲುವ ರೋಗ ಹಾಗೂ ಕೀಟಗಳ ನಿಯಂತ್ರಣಕ್ಕೆ ಕೀಟನಾಶಕಗಳ ಮಾಹಿತಿಯಿಲ್ಲದೆ ಬೆಳೆ ಹಾನಿಯಾಗುತ್ತಿರುತ್ತದೆ. ಕೀಟಗಳ ನಿಯಂತ್ರಣಕ್ಕೆ ರೈತರಿಗೆ ಸರಿಯಾದ ಮಾಹಿತಿಯಿರುವುದಿಲ್ಲ. ರೈತರು ಕೃಷಿ ಇಲಾಖೆಗಳಿಗೆ ಸುತ್ತಾಡುವುದನ್ನು ತಪ್ಪಿಸಲು ಸಮಯ ಹಾಗೂ ಹಣ ವ್ಯರ್ಥ ಆಗುವುದನ್ನು ತಪ್ಪಿಸುವ ಉದ್ದೇಶದಿಂದ ಸಹಾಯವಾಣಿ ಆರಂಭಿಸಲಾಗಿದೆ.
ಕೃಷಿ ಇಲಾಖೆ ಆರಂಭಿಸಿದ ಉಚಿತ ಸಹಾಯವಾಣಿಗೆ ಕರೆ ಮಾಡಿದರೆ ಸಾಕು ರೈತರು ಮನೆಯಲ್ಲಿಯೇ ಕುಳಿತು ಬೆಳಗಳಿಗೆ ತಗಲುವ ರೋಗ, ಕೀಟಗಳ ನಿಯಂತ್ರಣಕ್ಕೆ ಸಲಹೆ ಪಡೆಯಬುದು. ಕೃಷಿ, ತೋಟಗಾರಿಕೆ, ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಅರಣ್ಯ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಬಹುದು.
ರೈತರು ಕೃಷಿ ಸಂಬಂಧಿಸಿದ ಬೆಳೆವಿಮೆ ಕುರಿತು, ಸಮಗ್ರ ಬೇಸಾಯ, ಕಾಲಕಾಲಕ್ಕೆ ಬೆಳೆಗಳಿಗೆ ಬರುವ ರೋಗ, ನಿಯಂತ್ರಣ ವಿಧಾನ ಸೇರಿದಂತೆ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ನೇರವಾಗಿ ಸಹಾಯವಾಣಿ ಕೇಂದ್ರದ ತಜ್ಞರೊಂದಿಗೆ ಮಾಹಿತಿ ಪಡೆಯಬಹುದು.
ರೈತರು ಕೃಷಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಕಿಸಾನ್ ಕಾಲ್ ಸೆಂಟರ್1800 180 1551 ಗೆ ಕರೆ ಮಾಡಿದರೆ ಸಾಕು, ರೈತರು ತಾವಿದ್ದ ಸ್ಥಳದಿಂದಲೇ ಉಚಿತವಾಗಿ ಕೃಷಿ ತಜ್ಞರಿಂದ ಸಲಹೆ ಪಡೆಯಬಹುದು. ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ರೇಷ್ಮೆ, ಕೃಷಿ ಸಂಬಂಧಿಸಿದ ಮಾಹಿತಿಗಳನ್ನು ರೈತರಿಗೆ ಒದಗಿಸುವುದಕ್ಕಾಗಿ ಈ ಸಹಾಯವಾಣಿಯನ್ನು ಆರಂಭಿಸಲಾಗಿದೆ.
ರೈತರು ಈ ಉಚಿತ ಕಿಸಾನ್ ಕಾಲ್ ಸೆಂಟರ್ ನಂಬರಿಗೆ ಕರೆ ಮಾಡಿ ಕೇವಲ ಬೆಳೆಗಳಿಗೆ ತಗಲುವ ರೋಗ, ಕೀಟಗಳ ನಿಯಂತ್ರಣಕ್ಕೆ ಸಂಬಂಧಿಸಿದ ಮಾಹಿತಿಯಷ್ಟೇ ಅಲ್ಲ, ಹೆಚ್ಚು ಇಳುವರಿ ಕೊಡುವ ತರಕಾರಿ, ತೋಟಗಾರಿಕೆ, ಬೆಳೆಗಳ ಬಗ್ಗೆ ಮಾಹಿತಿಯನ್ನು ನೀಡಲಾಗುವುದು.
ಇದನ್ನೂ ಓದಿ : ಮೊಬೈಲ್ ನಲ್ಲೇ ಜಮೀನಿನ ಅಳತೆ ಮಾಡುವುದು ಹೇಗೆ? ಇಲ್ಲಿದೆ ರೈತರಿಗೆ ಸಂಪೂರ್ಣ ಮಾಹಿತಿ
ಸರ್ಕಾರದಿಂದ ಆರಂಭವಾಗಿರುವ ಯೋಜನೆಗಳ ಬಗ್ಗೆ ಅಂದರೆ, ಪಿಎಂ ಕಿಸಾನ್, ಬೆಳೆ ವಿಮೆ ಸೇರಿದಂತೆ ರೈತರಿಗಾಗಿ ಆರಂಭವಾಗಿರುವ ಇತರ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು.
Kisan Call Center ಪಶುಪಾಲನೆ ಮಾಡುವ ರೈತರಿಗೂ ಆರಂಭವಾಗಿದೆ ಉಚಿತ ಸಹಾಯವಾಣಿ
ಕುರಿ, ಮೇಕೆ ಸಾಕಾಣಿಕೆ, ಕೋಳಿ ಸಾಕಾಣಿಕೆ, ಮೊಲ ಸಾಕಾಣಿಕೆ, ಹೈನುಗಾರಿಕೆ ಮಾಡಲಿಚ್ಚಿಸುವ ರೈತರ ಅನುಕೂಲಕ್ಕಾಗಿಯೂ ಉಚಿತ ಸಹಾಯವಾಣಿ ಆರಂಭವಾಗಿದೆ. ಜಾನುವಾರುಗಳಿಗೆ ತಗಲುವ ರೋಗ ನಿಯಂತ್ರಣಕ್ಕಾಗಿ ಮಾಹಿತಿ ನೀಡಲಾಗುವುದು. ಪಶುಪಾಲನೆಗೆ ರೈತರಿಗೆ ನೀಡುವ ತರಬೇತಿಯ ಕುರಿತು ತಿಳಿಸಲಾಗುವುದು.
ರೈತರು 8277 100 200 ಗೆ ಕರೆ ಮಾಡಿದರೆ ಕೃಷಿ ತಜ್ಞರು ಕರೆ ಸ್ವೀಕರಿಸಿ ರೈತರಿಗೆ ಅಗತ್ಯ ಮಾಹಿತಿಗಾಗಿ ಆಯಾ ಜಿಲ್ಲೆಗೆ ಸಂಬಂಧಿಸಿದ ಪಶು ಇಲಾಖೆ ವೈದ್ಯಾಧಿಕಾರಿಗಳಿಗೆ ಕರೆ ಸಂಪರ್ಕ ಕಲ್ಪಿಸುತ್ತಾರೆ. ರೈತರು ಕೇಳುವಮಾಹಿತಿಗೆ ಅಗತ್ಯ ಮಾಹಿತಿ ನೀಡಲು ಅನುವು ಮಾಡಿಕೊಡುತ್ತಾರೆ.
ಪಶುಪಾಲನೆಗೆ ವಿವಿಧಬ್ಯಾಂಕುಗಳಿಂದ ಸಾಲ ಸೌಲಭ್ಯ ಮಾಹಿತಿಯೊಂದಿಗೆ ಪಶುಗಳಿಗೆ ರೋಗ, ಲಸಿಕಾ ಕಾರ್ಯಕ್ರಮ, ಜಾನುವಾರು ರೋಗ ತಡೆಗಟ್ಟಲು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುವುದು. ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಲು ಯಾವುದೇ ಶುಲ್ಕ ಪಾವತಿಸಬೇಕಿಲ್ಲ. ಮನೆಯಲ್ಲಿಯೇ ಕುಳಿತು ದಿನದ 24 ಗಂಟೆಗಳ ಕಾಲ ಮಾಹಿತಿ ಪಡೆಯಬಹುದು.