Drought taluka list ಬರ ಘೋಷಣೆಯಾದ ತಾಲೂಕುಗಳ ಪಟ್ಟಿ

Written by Ramlinganna

Updated on:

ರಾಜ್ಯದಲ್ಲಿ ಈಗಾಗಲೇ 195 ತಾಲೂಕುಗಳಲ್ಲಿ Drought taluka list ಮಾಡಿ ಕೇಂದ್ರ ಸರ್ಕಾರಕ್ಕೆ ಪರಿಹಾರಕ್ಕಾಗಿ ಮನವಿ ಸಲ್ಲಿಸಲಾಗಿದೆ.ಈಗ ಮತ್ತೇ 21 ತಾಲೂಕಲ್ಲಿ ಬರ ಘೋಷಣೆಗೆ ಸಿದ್ದತೆ ನಡೆಸಲಾಗಿದೆ.

ಹೌದು, ಬರ ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ.ಆ ಬಗ್ಗೆ ಪರಿಶೀಲನೆ ನಡೆಸಿದ ಕೇಂದ್ರ ಬರ ಅಧ್ಯಯನ ತಂಡ ನಮ್ಮ ಮನವಿಗೆ ಪೂರಕವಾಗಿ ಸ್ಪಂದಿಸಿದೆ. ಜೊತೆಗೆ ಹೆಚ್ಚುವರಿಯಾಗ ಬರ ಎದುರಿಸುತ್ತಿರುವ ಇನ್ನೂ 21 ತಾಲೂಕುಗಳಲ್ಲಿ ಪರಿಶೀಲನೆ ನಡೆಸುತ್ತಿದ್ದು, ಅವುಗಳನ್ನು ಬರಪೀಡಿತ ತಾಲೂಕುಗಳಾಗಿ ಘೋಷಿಸಿ ಕೇಂದ್ರಕ್ಕೆ ಮನವಿ ಸಲ್ಲಿಸುತ್ತೇವೆ ಎದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಬರ ಸಮೀಕ್ಷೆ ನಡೆಸಿದ ತಾಲೂಕುಗಳು ಯಾವುವು?

ರಾಜ್ಯದಲ್ಲಿ ಬರ ಸಮೀಕ್ಷೆ ನಡೆಸಿದ 195 ತಾಲೂಕುಗಳೊಂದಿಗೆ ಇನ್ನೂ 21 ತಾಲೂಕುಗಳನ್ನು ಘೋಷಣೆ ಮಾಡಲು ಸಿದ್ದತೆ ನಡೆಸಲಾಗಿದೆ. ಹೌದು, ಚಾಮರಾಜನಗರ, ಯಳಂದೂರು, ಕೃಷ್ಣರಾಜನಗರ, ಬೆಳಗಾವಿ, ಖಾನಾಪುರ, ಮಂಡರಗಿ, ಬ್ಯಾಡಗಿ, ಹಾನಗಲ್, ಶಿಗ್ಗಾವ್, ಕಲಘಟಗಿ, ಅಳ್ನಾವರ, ಅಣ್ಣಿಗೇರಿ, ಆಲೂರ, ಅರಸಿಕೇರೆ, ಹಾಸನ, ಮೂಡಿಗೆರೆ, ತರಿಕೇರೆ, ಪೊನ್ನಂಪೆಟೆ, ಹೆಬ್ರಿ, ಸಿದ್ದಾಪೂರ ಹಾಗೂ ದಾಂಡೇಲಿ ತಾಲೂಕುಗಳನ್ನು ಬರಗಾಲ ತಾಲೂಕುಗಳೆಂದು ಘೋಷಿಸಿಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : ಈ ಪಟ್ಟಿಯಲ್ಲಿರುವ ರೈತರಿಗೆ ಈ ದಿನ ಪಿಎಂ ಕಿಸಾನ್ ಹಣ ಜಮೆ- ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಕಳೆದ ನಾಲ್ಕು ದಿನಗಳ ಕಾಲ ಬರ ಪರಿಶೀಲನೆ ನಡೆಸಿದ ಕೇಂದ್ರ ಬರ ಅಧ್ಯಯನ ತಂಡದ ಜತೆಗಿನ ಸಭೆ ಬಳಿಕ ಬರ ನಿರ್ವಹಣಾ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಕೃಷ್ಣ ಭೈರೇಗೌಡ ಅವರು ಕೃಷಿ ಸಚಿವ ಎನ್.ಚೆಲುವರಾಯ ಸ್ವಾಮಿ, ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರೊಂದಿಗೆ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಮೊದಲ ಹಂತದಲ್ಲಿ 195 ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ತಾಲೂಕು ಎಂದು ಘೋಷಿಸಲಾಗಿದೆ. ಉಳಿದ ತಾಲೂಕುಗಳ ಪೈಕಿ 21 ತಾಲೂಕುಗಳಲ್ಲಿ ಬರ ಎದುರಾಗಿದೆ.

ಈ ಹಿಂದೆ ಬರಗಾಲ ಘೋಷಣೆಯ 195 ತಾಲೂಕುಗಳು ಪಟ್ಟಿ ಇಲ್ಲಿದೆ

ರೈತರು ತಮ್ಮ ತಾಲೂಕು ಬರಗಾಲ ಪೀಡಿತ ಪ್ರದೇಶದಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

file:///C:/Users/ADMIN/Downloads/%E0%B2%AC%E0%B2%B0%E0%B2%97%E0%B2%BE%E0%B2%B2%20%E0%B2%98%E0%B3%8B%E0%B2%B7%E0%B2%A3%E0%B3%86.pdf

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ 2023 ರ ಮುಂಗಾರಿನಲ್ಲಿ ತೀವ್ರ ಬರ ಪೀಡಿತ 161 ತಾಲೂಕುಗಳಪಟ್ಟಿ,  ಹಾಗೂ 2023 ರ ಮುಂಗಾರಿನಲ್ಲಿ ಸಾಧಾರಣ ಬರ ಪೀಡಿತ 34 ತಾಲೂಕುಗಳ ಪಟ್ಟಿ ಕಾಣಿಸುತ್ತದೆ..

Drought taluka list ತೀವ್ರ ಬರಪೀಡಿತ 161 ತಾಲೂಕುಗಳ ಪಟ್ಟಿ

ಬೆಂಗಳೂರು ಪೂರ್ವ, ದೇವನಹಳ್ಳಿ, ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ, ಕಲಕಪುರ, ರಾಮನಗರ, ಹಾರೋಹಳ್ಳಿ, ಬಂಗಾರಪೇಟೆ, ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಕೆಜಿಎಫ್, ಬಾಗೇಪಲ್ಲಿ, ಚಿಕ್ಕಬಳ್ಳಾಪರ, ಚಿಂತಾಮಣಿ, ಗೌರಿಬಿದನೂರು, ಗುಡಿಬಂಡೆ, ಶೀಡ್ಲಘಟ್ಟ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಕೊರಟಗೆರೆ, ಕುಣಿಗಲ್, ಮಧುಗಿರಿ, ಪಾವಘಡ, ಶಿರಾ, ತಿಪಟೂರು, ತುರುವೆಕೆರೆ, ಚಳ್ಳಕೆರೆ, ಚಿತ್ರದುರ್ಗ, ಹಿರಿಯೂರು, ಹೊಳಲಕೆರೆ, ಹೊಸದುರ್ಗ, ಮೊಳಕಾಲ್ಮೂರ, ಚನ್ನಗಿರಿ, ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು, ನ್ಯಾಮತಿ, ಹೆಚ್.ಡಿ. ಕೋಟೆ, ಹುಣಸೂರು, ಮೈಸೂರು, ನಂಜನಗೂಡು, ಪಿರಿಯಾಪಟ್ಟಣ, ಟಿ.ನರಸಿಪುರ, ಸರಗೂರು, ಸಾಲಿಗ್ರಾಮ, ಕೃಷ್ಣರಾಜಪೇಟೆ, ಮದ್ದೂರು, ಮಳವಳ್ಳಿ, ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ, ಬಳ್ಳಾರಿ, ಸಂಡೂರು ಶಿರುಗುಪ್ಪ, ಕುರುಗೋಡು, ಕಂಪ್ಲಿ, ಗಂಗಾವತಿ, ಕೊಪ್ಪಳ, ಕುಷ್ಟಗಿ, ಯಲಬುರ್ಗ, ಕರಟಗಿ, ಕುಕನೂರು, ಕನಕಗಿರಿ, ಲಿಂಗಸೂಗುರು, ಮಾನ್ವಿ, ರಾಯಚೂರು, ಶಿರವಾರ, ಅಫಜಲ್ಪುರ, ಆಳಂದ, ಚಿಂಚೋಳಿ, ಚಿತ್ತಾಪುರ, ಕಲಬುರಗಿ, ಜೇವರ್ಗಿ, ಸೇಡಂ, ಕಾಳಗಿ, ಕಮಲಾಪುರ, ಯಡ್ರಾಮಿ, ಶಹಾಬಾದ್, ಭಾಲ್ಕಿ, ಬಸವಕಲ್ಯಾಣ, ಹುಲಸೂರು, ಅಥಣಿ, ಬೈಲಹೊಂಗಲ, ಚಿಕ್ಕೋಡಿ, ಗೋಕಾಕ್, ಹುಕ್ಕೇರಿ, ರಾಮದುರ್ಗ, ರಾಯಬಾಗ್, ಸವದತ್ತಿ, ಕಿತ್ತೂರು, ನಿಪ್ಪಾಣಿ, ಕಾಗವಾಡ, ಮುದಲಗಿ, ಯರಗಟ್ಟಿ, ಬಾದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ, ಗುಳೇದಗುಡ್ಡ, ಇಳಕಲ್, ರಬಕವಿ ಬನಹಟ್ಟಿ, ಬಸವನಬಾಗೇವಾಡಿ, ವಿಜಯಪುರ, ಇಂಡಿ, ಮುದ್ದೇಬಿಹಾಳ, ಸಿಂಧಗಿಸೇರಿದಂತೆ  ಒಟ್ಟು 161 ತೀವ್ರ ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಲಾಗಿದೆ.

Leave a Comment