ವಿಧಾನಸಭಾ ಚುನಾವಣೆ: ಯಾರು ಎಷ್ಟು ಮತಗಳಿಂದ ಗೆದ್ದಿದ್ದರು?

Written by Ramlinganna

Updated on:

karnataka-assembly election 2023 ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಹೌದು, ಮೇ ತಿಂಗಳ 10 ರಂದು ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.

ಮೇ 13 ಕ್ಕೆ ಫಲಿತಾಂಶ ಹೊರಬೀಳಲಿದೆ. 2018 ರಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿತ್ತು, ಯಾವ ಶಾಸಕರು ಎಷ್ಟು ಮತಗಳ ಅಂತರದಿಂದ ಗೆದ್ದಿದ್ದರು? ಇಲ್ಲಿದೆ ಸಂಪೂರ್ಣ ಮಾಹಿತಿ.

ಮೇ 10 ರಂದು ನಡೆಯುವ ಚುನಾವಣೆಗೆ ಏಪ್ರೀಲ್ 13 ರಂದು ಚುನಾವಣೆಗೆ ಅಧಿಸೂಚನೆ ಆರಂಭವಾಗಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಗೆ ಬರಲಿದೆ. ಏಪ್ರೀಲ್್ 20 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏಪ್ರೀಲ್ 24 ರಂದು ನಾಮಪತ್ರ ಹಿಂಪಡೆಯಲು  ಕೊನೆಯ ದಿನವಾಗಿದೆ.ರಾಜ್ಯದಲ್ಲಿ 52,282 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಇದನ್ನೂ ಓದಿ : ನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಚುನಾವಣಾ ಆಯೋಗದ ಆ್ಯಪ್ ನಲ್ಲಿ ಅಭ್ಯರ್ಥಿಗಳ ಸಂಪೂರ್ಣ ಮಾಹಿತಿ ಲಭ್ಯವಿರಲಿದೆ. ಅಭ್ಯರ್ಥಿಯ ಅಫಿಡಿವಿಟ್ ಕೂಡ ಆ್ಯಪ್ನಲ್ಲಿ ಲಭ್ಯವಿರಲಿದೆ. ಚುನಾವಣಾ ಅಕ್ರಮದ ಬಗ್ಗೆ ಆ್ಯಪ್ ನಲ್ಲೇ ಮತದಾರರು ದೂರು ಸಲ್ಲಿಸಬಹುದು. ದೂರು ಸಲ್ಲಿಸಿದರೆ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ.

2018 ರಲ್ಲಿ ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಗೆದ್ದಿತ್ತು?

ಕಳೆದ ಬಾರಿ ಅಂದರೆ 2018 ರಲ್ಲಿ 222 ಕ್ಷೇತ್ರಗಳಲ್ಲಿ ಚುನಾವಣೆ ನಡೆದಿತ್ತು. ರಾಜರಾಜೇಶ್ವರಿ ಕ್ಷೇತ್ರಕ್ಕೆ ಮೇ 28 ರಂದು ಹಾಗೂ  ಜಯನಗರ ಕ್ಷೇತ್ರಕ್ಕೆ ಜೂನ್11 ರಂದು ಚುನಾವಣೆ ನಡೆದಿತ್ತು.  2018 ರಲ್ಲಿ ಬಿಜೆಪಿ ಒಟ್ಟು 104 ಕ್ಷೇತ್ರಗಳ್ಲಲಿ ಗೆದ್ದಿತ್ತು. ಕಾಂಗ್ರೆಸ್ ಪಕ್ಷ 80 ಕ್ಷೇತ್ರಗಳಲ್ಲಿ ಗೆದ್ದಿತ್ತು. ಅದೇ ರೀತಿ ಜೆಡಿಎಸ್ ಪಕ್ಷ 37 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಒಂದು ಕ್ಷೇತ್ರದಲ್ಲಿ ಬಿಎಸ್.ಪಿ ಹಾಗೂ ಒಂದು ಕ್ಷೇತ್ರದಲ್ಲಿಕೆಪಿಜಿಪಿ ಮತ್ತೊಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲವು ಸಾಧಿಸಿದ್ದರು.

karnataka-assembly election 2023 ಯಾರು ಎಷ್ಟು ಮತಗಳಿಂದ ಯಾರ ವಿರುದ್ಧ ಜಯಗಳಿಸಿದ್ದರು?

ವಿಧಾನಸಭಾ ಕ್ಷೇತ್ರ ಆಯ್ಕೆಯಾದವರು ಪಕ್ಷ ಮತಗಳು ಹತ್ತಿರದ ಸ್ಪರ್ಧಿ ಪಕ್ಷ ಮತಗಳು
ನಿಪ್ಪಾಣಿ ಶಶಿಕಲಾ ಜೊಲ್ಲೆ ಬಿಜೆಪಿ 87006 ಕಾಕಾಸೂ ಪಾಟೀಲ್ ಕಾಂಗ್ರೆಸ್ 78500
ಚಿಕ್ಕೋಡಿ ಗಣೇಶ ಹುಕ್ಕೇರಿ ಕಾಂಗ್ರೆಸ್ 91467 ಅಣ್ಣಾಸಾಹೇಬ್ ಜೊಲ್ಲೆ ಬಿಜೆಪಿ 80898
ಅಥಣಿ ಮಹೇಶ ಕುಮಟಳ್ಳಿ ಕಾಂಗ್ರೆಸ್ 82094 ಲಕ್ಷ್ಮಣ ಸವದಿ ಬಿಜೆಪಿ 79763
ಕಾಗವಾಡ ಶ್ರೀಮಂತ ಪಾಟೀಲ್ ಕಾಂಗ್ರೆಸ್ 83060 ಭರಮಗೌಡ ಕಾಗೆ ಬಿಜೆಪಿ 50118
ಕುಡಚಿ ಪಿ. ರಾಜೀವ್ ಬಿಜೆಪಿ 67781 ಅಮಿತ ಘಾಟಗೆ ಕಾಂಗ್ರೆಸ್ 52773
ರಾಯಬಾಗ ದುರ್ಯೋಧನ ಐಹೋಳೆ ಬಿಜೆಪಿ 67502 ಪ್ರದೀಪಕುಮಾರ ಮಾಳಗೆ ಕಾಂಗ್ರೆಸ್ 50954
ಹುಕ್ಕೇರಿ ಉಮೇಶ ಕತ್ತಿ ಬಿಜೆಪಿ 83588 ಎ.ಬಿ. ಪಾಟೀಲ್ ಕಾಂಗ್ರೆಸ್ 68203
ಅರಬಾವಿ ಬಾಲಚಂದ್ರ ಜಾರಕಿಹೊಳಿ ಬಿಜೆಪಿ 96144 ಭೀಮಪ್ಪ ಗಡಾದ ಕಾಂಗ್ರೆಸ್ 48816
ಗೋಕಾಕ ರಮೇಶ ಜಾರಕಿಹೊಳಿ ಕಾಂಗ್ರೆಸ್ 90249 ಅಶೋಕ ಪೂಜಾರಿ ಬಿಜೆಪಿ 75969
ಯಮಕನಮರಡಿ ಸತೀಶ ಜಾರಕಿಹೊಳಿ ಕಾಂಗ್ರೆಸ್ 73512 ಮಾರುತಿ ಅಸ್ಟಗಿ ಬಿಜೆಪಿ 70662
ಬೆಳಗಾವಿ ಉತ್ತರ ಅನಿಲ ಬೆನಕೆ ಬಿಜೆಪಿ 79060 ಫಿರೋಜ್ ಸೇಠ್ ಕಾಂಗ್ರೆಸ್ 61793
ಬೆಳಗಾವಿ ದಕ್ಷಿಣ ಅಭಯ ಪಾಟೀಲ್ ಬಿಜೆಪಿ 84498 M.ಲಕ್ಷ್ಮೀನಾರಾಯಣ ಕಾಂಗ್ರೆಸ್ 25806
ಬೆಳಗಾವಿ ಗ್ರಾಮೀ ಲಕ್ಷ್ಮೀ ಹೆಬ್ಬಾಳಕರ ಕಾಂಗ್ರೆಸ್ 102040 ಸಂಜಯಪಾಟೀಲ್ ಬಿಜೆಪಿ 50316
ಖಾನಾಪುರ ಡಾ. ಅಂಜಲಿನಿಂಬಾಳ್ಕರ ಕಾಂಗ್ರೆಸ್ 36649 ವಿಠ್ಠಲ ಹಲಗೇಕರ ಬಿಜೆಪಿ 31516
ಕಿತ್ತೂರ ಎಮ್. ದೊಡ್ಡಗೌಡರ ಬಿಜೆಪಿ 73155 ಡಿ.ಬಿ. ಇನಾಂದಾರ ಕಾಂಗ್ರೆಸ್ 40293
ಬೈಲಹೊಂಗಲ ಎಮ್. ಕೌಜಲಗಿ ಕಾಂಗ್ರೆಸ್ 47040 ಜಗದೀಶ ಮೆಟಿಗುಡ್ಡ ಪಕ್ಷೇತರ 41918
ಸವದತ್ತಿಯಲ್ಲಮ್ಮ ವಿಶ್ವನಾಥ ಮಾಮನಿ ಬಿಜೆಪಿ 62480 ಆನಂದ ಛೋಪ್ರಾ ಪಕ್ಷೇತರ 56189
ರಾಮದುರ್ಗ ಎಮ್. ಯಾದವಾಡ ಬಿಜೆಪಿ 68348 ಅಶೋಕ ಪಟ್ಟಣ ಕಾಂಗ್ರೆಸ್ 65474
ಮುಧೋಳ ಗೋವಿಂದ ಕಾರಜೋಳ ಬಿಜೆಪಿ 76431 ಸತೀಶ ಬಂಡಿವಡ್ಡರ ಕಾಂಗ್ರೆಸ್ 60949

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. 2018 ರ ಕರ್ನಾಟಕ ವಿಧಾನಸಭಾ ಚುನಾವಣೆೆೆೆೆೆೆ ಯಲ್ಲಿ ವಿಿಿಿಿಿಿಜೇತರಾದ ಅಭ್ಯರ್ಥಿಗಳ ಪಟ್ಟಿ ಓಪನ್ ಆಗುತ್ತದೆ.

karnataka election winner

Leave a Comment